ಆಧ್ಯಾತ್ಮಿಕ ಚಿಂತನೆ, ಆಚರಣೆ ಮೂಲಕ ಸಜ್ಜನಿಕೆ ಬೆಳೆಸಿಕೊಳ್ಳಿ: ಪುತ್ತಿಗೆ ಶ್ರೀ

| Published : May 08 2024, 01:03 AM IST

ಆಧ್ಯಾತ್ಮಿಕ ಚಿಂತನೆ, ಆಚರಣೆ ಮೂಲಕ ಸಜ್ಜನಿಕೆ ಬೆಳೆಸಿಕೊಳ್ಳಿ: ಪುತ್ತಿಗೆ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತಿಗೆ ವಿದ್ಯಾಪೀಠ ಹಾಗೂ ಪುತ್ತಿಗೆ ಮಠದಲ್ಲಿ ನಡೆದ ಶಿಬಿರದಲ್ಲಿ ಸುಮಾರು 150ಕ್ಕೂ ಮಕ್ಕಳು ಭಾಗವಹಿಸಿ ತಾವು ಕಲಿತ ವಿದ್ಯೆಗಳನ್ನು ಗುರುಗಳಿಗೆ ಒಪ್ಪಿಸಿದ್ದರು. ಶ್ರೀ ಗಳದ್ವಯರು ಎಲ್ಲ ಶಿಬಿರಾರ್ಥಿಗಳಿಗೆ ಹಾಗೂ ಸಂಪನ್ಮೂಲ ಶಿಕ್ಷಕರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪರ್ಯಾಯ ಪುತ್ತಿಗೆ ಶ್ರೀಗಳ ಆದೇಶಾನುಸಾರ ಸುಮಾರು 15 ದಿನಗಳಿಂದ ನಡೆಯುತ್ತಿದ್ದ ವಸಂತ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಭಾಗವಹಿಸಿ ಆಶೀರ್ವಚನ ನೀಡಿದರು.

ಯಾವುದೇ ವಿದ್ಯೆ ಕಲಿತರೂ, ಯಾವುದೇ ಉದ್ಯೋಗ ಮಾಡುತ್ತಿದ್ದರೂ ಆಧ್ಯಾತ್ಮಿಕ ವಿದ್ಯೆಯಿಂದ ಸದಾಚಾರ ಮೂಲಕ ಸಜ್ಜನಿಕೆಯುಳ್ಳ ನಾಗರಿಕರಾಗಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಭಾರತೀಯ ಪ್ರಜೆಗಳಾಗಿ ಎಂದು ಶ್ರೀಘಲು ಅನುಗ್ರಹಿಸಿದರು.

ಕಿರಿಯ ಶ್ರೀ ಸುಧೀಂದ್ರ ತೀರ್ಥರು ಮಾತನಾಡಿ, ಶಿಬಿರದಲ್ಲಿ ಕಲಿತ ವಿದ್ಯೆ ಯಾವತ್ತೂ ಅಚ್ಚಳಿಯದೆ ಉಳಿಯುವುದು. ತನ್ಮೂಲಕ ಪ್ರತಿ ಧಾರ್ಮಿಕ ಶಿಬಿರಗಳಲ್ಲಿ ಭಾಗವಹಿಸಿ ಆತ್ಮೊದ್ಧಾರ ಚಿಂತನೆಗಳು ನಿಮ್ಮಲ್ಲಿ ಬೆಳೆಯಲಿ ಎಂದು ಹರಸಿದರು.

ಪುತ್ತಿಗೆ ವಿದ್ಯಾಪೀಠ ಹಾಗೂ ಪುತ್ತಿಗೆ ಮಠದಲ್ಲಿ ನಡೆದ ಶಿಬಿರದಲ್ಲಿ ಸುಮಾರು 150ಕ್ಕೂ ಮಕ್ಕಳು ಭಾಗವಹಿಸಿ ತಾವು ಕಲಿತ ವಿದ್ಯೆಗಳನ್ನು ಗುರುಗಳಿಗೆ ಒಪ್ಪಿಸಿದ್ದರು. ಶ್ರೀ ಗಳದ್ವಯರು ಎಲ್ಲ ಶಿಬಿರಾರ್ಥಿಗಳಿಗೆ ಹಾಗೂ ಸಂಪನ್ಮೂಲ ಶಿಕ್ಷಕರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಿದರು.

ಶ್ರೀ ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಮೋದ್ ಸಾಗರ್, ಮಹಿತೋಷ್ ಆಚಾರ್ಯ, ಯೋಗೀಂದ್ರ ಭಟ್ ಉಪಸ್ಥಿತರಿದ್ದರು. ರಮೇಶ್ ಭಟ್ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.