ಸಾರಾಂಶ
ಕಾರ್ಯಕ್ರಮದಲ್ಲಿ ಅರ್ಚಿತ್ ಕಶ್ಯಪ್ ಮೂಡಬಿದಿರೆ ಅವರ ಲಿಟ್ಲ್ ಬರ್ಡ್ ಚಾಂಪಿಂಗ್ ಕೃತಿ ಬಿಡುಗಡೆಗೊಳಿಸಲಾಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಮಕ್ಕಳು ವಿದ್ಯೆಯ ಜೊತೆಗೆ ವಿನಯ, ಸನ್ನಡತೆಯನ್ನು ಮೈಗೂಡಿಸಿಕೊಂಡು ಸಾಧನೆ ಮಾಡಿದಲ್ಲಿ ಯಶಸ್ಸು ಸಾಧ್ಯ ಎಂದು ಸುಳ್ಯ ಎನ್ಎಂಸಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ, ಮಕ್ಕಳ ಹಬ್ಬದ ಸಮ್ಮೇಳನದ ಅಧ್ಯಕ್ಷೆ ಶ್ರೇಯಾ ಎಂ. ಜೆ. ಸುಳ್ಯ ಹೇಳಿದರು.ಯುಗಪುರುಷ ಕಿನ್ನಿಗೋಳಿ ಮತ್ತು ವಾಯ್ಸ್ ಆಫ್ ಆರಾಧಾನ ಸಂಸ್ಥೆಯ ಸಹಭಾಗಿತ್ವದಲ್ಲಿ ಕಿನ್ನಿಗೋಳಿ ಯುಗಪುರುಷದ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಹಬ್ಬದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಲ್ಲಿ ಸೃಜನಶೀಲದ ಭೌತಿಕ ಮಟ್ಟದ ಬೆಳವಣಿಗೆಗೆ ಇಂತಹ ವೇದಿಕೆ ನೀಡಿ ಪೋತ್ಸಾಹಿಸಿದರೆ ಬೆಳೆಯಲು ಸಾಧ್ಯವಿದೆ ಎಂದು ಹೇಳಿದರು.ಶಿಮಂತೂರು ಶ್ರೀ ಶಾರದಾ ಸೆಂಟ್ರಲ್ ಶಾಲೆ ವಿದ್ಯಾರ್ಥಿ ಕೇಶವ ಭಟ್ ಮಕ್ಕಳ ಹಬ್ಬವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಳದ ಧರ್ಮದರ್ಶಿ ಮೋಹನದಾಸ ಸುರತ್ಕಲ್, ಉದ್ಯಮಿ ಅಜಿತ್ ಕೆರೆಕಾಡು, ಮೂಡಬಿದಿರೆ ಜಾನಪದ ಅಕಾಡೆಮಿ ತಾಲೂಕು ಅಧ್ಯಕ್ಷ ಪದ್ಮಶ್ರೀ ಭಟ್, ನಿಡ್ಡೋಡಿ, ಅರುಣ ಅಜೆಕಾರ್, ಮೂಲ್ಕಿ ಹೋಬಳಿ ಕಸಾಪದ ಅಧ್ಯಕ್ಷ ಜೊಸ್ಸಿ ಪಿಂಟೋ, ಸಾಯಿನಾಥ ಶೆಟ್ಟಿ ಮುಂಡ್ಕೂರು ಮತ್ತಿತರರು ಉಪಸ್ಥಿತರಿದ್ದರು.ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅರ್ಚಿತ್ ಕಶ್ಯಪ್ ಮೂಡಬಿದಿರೆ ಅವರ ಲಿಟ್ಲ್ ಬರ್ಡ್ ಚಾಂಪಿಂಗ್ ಕೃತಿ ಬಿಡುಗಡೆಗೊಳಿಸಲಾಯಿತು. ಉಪನ್ಯಾಸಕ ಪು. ಗುರುಪ್ರಸಾದ್ ಭಟ್ ಕಟೀಲು ನಿರೂಪಿಸಿದರು. ಬಳಿಕ ಮಕ್ಕಳ ಕವಿ ಗೋಷ್ಠಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.