ಸಾರಾಂಶ
ಗುಳೇದಗುಡ್ಡ: ಚಿತ್ರಕಲೆ ತುಂಬಾ ಆಸಕ್ತಿದಾಯಕ ಕ್ಷೇತ್ರವಾಗಿದೆ. ಮಕ್ಕಳಲ್ಲಿ ಚಿತ್ರಕಲೆಯ ಅಭಿರುಚಿ ಮತ್ತು ಆಸಕ್ತಿ ಬೆಳೆಸಬೇಕು. ಚಿತ್ರಕಲೆ ವ್ಯಕ್ತಿಯ ಭಾವನೆ ಅಭಿವ್ಯಕ್ತಪಡಿಸುತ್ತದೆ. ಮಾನವ ಸಂವಹನಕ್ಕಾಗಿ ಬಳಸಿದ ಭಾಷೆಯಾಗಿ ರೂಪುಗೊಂಡಿದೆ ಎಂದು ಮಹಾರಾಷ್ಟ್ರದ ಚಂದ್ರಕಲಾ ಸೋನಿ ಹೇಳಿದರು. ಶುಕ್ರವಾರ ಪಟ್ಟಣದ ಮಹೇಶ್ವರಿ ವಿದ್ಯಾ ಪ್ರಚಾರಕ ಮಂಡಳದ ಪೂರ್ವ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಯುವ ಚಿತ್ರ ಕಲಾವಿದೆ ರೂಪಾ ಅಗ್ರೋಯಾ ಅವರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಚಿತ್ರಕಲೆ ತುಂಬಾ ಆಸಕ್ತಿದಾಯಕ ಕ್ಷೇತ್ರವಾಗಿದೆ. ಮಕ್ಕಳಲ್ಲಿ ಚಿತ್ರಕಲೆಯ ಅಭಿರುಚಿ ಮತ್ತು ಆಸಕ್ತಿ ಬೆಳೆಸಬೇಕು. ಚಿತ್ರಕಲೆ ವ್ಯಕ್ತಿಯ ಭಾವನೆ ಅಭಿವ್ಯಕ್ತಪಡಿಸುತ್ತದೆ. ಮಾನವ ಸಂವಹನಕ್ಕಾಗಿ ಬಳಸಿದ ಭಾಷೆಯಾಗಿ ರೂಪುಗೊಂಡಿದೆ ಎಂದು ಮಹಾರಾಷ್ಟ್ರದ ಚಂದ್ರಕಲಾ ಸೋನಿ ಹೇಳಿದರು.ಶುಕ್ರವಾರ ಪಟ್ಟಣದ ಮಹೇಶ್ವರಿ ವಿದ್ಯಾ ಪ್ರಚಾರಕ ಮಂಡಳದ ಪೂರ್ವ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಯುವ ಚಿತ್ರ ಕಲಾವಿದೆ ರೂಪಾ ಅಗ್ರೋಯಾ ಅವರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಆದಿಮಾನವ ಆರಂಭದಲ್ಲಿ ಚಿತ್ರಕಲೆಯನ್ನು ಭಾಷೆಯಾಗಿ ಬಳಸಿದ. ವ್ಯಕ್ತಿಯ ಮನಸ್ಸಿನ ಭಾವನೆಗಳನ್ನು ಚಿತ್ರಕಲೆಯ ಮೂಲಕ ಅಭಿವ್ಯಕ್ತಿ ಪಡಿಸಿದ್ದು ಇಲ್ಲಿ ಗಮನಾರ್ಹವಾಗಿದೆ. ಚಿತ್ರಕಲೆ ಕೇವಲ ಕಲೆಯಾಗಿರದೆ ನಮ್ಮ ನಿತ್ಯದ ಬದುಕಾಗಿತ್ತು. ಹೀಗಾಗಿ ಮಾನವನ ಆರಂಭಿಕ ಇತಿಹಾಸ ಚಿತ್ರಕಲೆಯ ಮೂಲಕ ಆರಂಭಗೊಳ್ಳುತ್ತದೆ. ಚಿತ್ರಕಲೆ ಬಹಳಷ್ಟು ಆಕರ್ಷಕ ಕಲೆ. ಮಕ್ಕಳನ್ನು ವಿಶೇಷವಾಗಿ ಇದು ಆಕರ್ಷಿಸುತ್ತದೆ. ಮಕ್ಕಳಲ್ಲಿ ಚಿತ್ರಕಲೆಯ ಆಸಕ್ತಿ ಬೆಳೆಸಬೇಕು ಎಂದು ಅವರು ಹೇಳಿದರು.
ಪುರಸಭೆ ಸದಸ್ಯೆ ವಂದನಾ ಭಟ್ಟಡ, ಕಲಾವಿದೆ ರೂಪಾ ಅಗ್ರೋಯಾ, ಮಂಗಳಾಬಾಯಿ ಅಗ್ರೋಯಾ, ಲಕ್ಷ್ಮಿಕಾಂತ ಕಾಬ್ರಾ, ಗೋವಿಂದ ಬಜಾಜ, ಸಖಿ ಮಂಡಳದ ಅಧ್ಯಕ್ಷೆ ಮೇಘಾ ರಾಠಿ, ಶ್ರೀಕಾಂತ ಸೋನಿ, ಗೋವಿಂದ ಭುತಡಾ, ಗೋಪಾಲ ಮಾಲಪಾಣಿ, ಲತಾ ತಾಪಡಿಯಾ, ಸುಮನ ಧೂತ, ಭಂಡಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸುರೇಖಾ ಎಂಡಿಗೇರಿ, ದ್ವಾರಕಾದಾಸ ಮರ್ದಾ, ಗೋಪಾಲ ಸೋನಿ, ಮಹಾದೇವ ಜಗತಾಪ, ರಾಜಶೇಖರ್ ಪಾಟೀಲ, ಎಂ.ಎಂ.ಬಿಂಗೇರ ಹಾಗೂ ಇತರರು ಪಾಲ್ಗೊಂಡಿದ್ದರು.