ಮಕ್ಕಳಲ್ಲಿ ರಾಮನ ಚಿಂತನೆ ಬೆಳೆಸಿ

| Published : Jan 05 2024, 01:45 AM IST

ಸಾರಾಂಶ

ಗಾಂಧಿಜೀ ಕೂಡ ರಾಮರಾಜ್ಯದ ಕನಸನ್ನು ಕಂಡಂತವರು, ಇಂದಿನ ರಾಜಕೀಯದಲ್ಲೂ ರಾಮನ ಆದರ್ಶ ಅಡಕಗೊಳ್ಳಬೇಕಿದೆ, ಮಕ್ಕಳಲ್ಲಿ ರಾಮನ ಚಿಂತನೆ ಬಿತ್ತಬೇಕಿದೆ ಅಂದಾಗ ಮಾತ್ರ ನಮ್ಮ ಮುಂದಿನ ಸಮಾಜ ರಾಮ ರಾಜ್ಯವಾಗಬಲ್ಲದು, ನಾವು ವೈಯಕ್ತಿಕ ಕಾರ್ಯಗಳ ಜತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯ ಮಾಡಬೇಕು ಅಂದಾಗ ಮಾತ್ರ ಮನುಷ್ಯ ಧರ್ಮ ಶ್ರೇಷ್ಠ ಧರ್ಮವಾಗುತ್ತದೆ

ಅಳ್ನಾವರ: ಭಗವದ್ಗೀತೆ ಬರೀ ಗ್ರಂಥವಲ್ಲ, ಬದಲಾಗಿ ಜಗತ್ತಿಗೆ ಮಾರ್ಗದರ್ಶನ ನೀಡಬಲ್ಲ ಗುರುವಾಗಿದೆ ಎಂದು ಧಾರವಾಡ ಸಮೀಪದ ದೇವರಹುಬ್ಬಳ್ಳಿಯ ಸಿದ್ದಾಶ್ರಮದ ಸಿದ್ದಶಿವಯೋಗಿಗಳು ಹೇಳಿದರು.

ಪಟ್ಟಣದಲ್ಲಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ನಗರ ಪ್ರದಕ್ಷಣೆಗೊಳಿಸಿ ನಂತರ ಮರಾಠ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನಾದಿ ಕಾಲದಿಂದಲೂ ಭಾರತ ವಿಶ್ವಗುರುವಿನ ಸ್ಥಾನದಲ್ಲಿಯೇ ಇದೆ, ಜಗತ್ತಿಗೆ ರಾಮ ಶ್ರೇಷ್ಠ ಮರೆಯಾದಾ ಪುರುಷೋತ್ತಮನಾಗಿದ್ದಾನೆ. ಗಾಂಧಿಜೀ ಕೂಡ ರಾಮರಾಜ್ಯದ ಕನಸನ್ನು ಕಂಡಂತವರು, ಇಂದಿನ ರಾಜಕೀಯದಲ್ಲೂ ರಾಮನ ಆದರ್ಶ ಅಡಕಗೊಳ್ಳಬೇಕಿದೆ, ಮಕ್ಕಳಲ್ಲಿ ರಾಮನ ಚಿಂತನೆ ಬಿತ್ತಬೇಕಿದೆ ಅಂದಾಗ ಮಾತ್ರ ನಮ್ಮ ಮುಂದಿನ ಸಮಾಜ ರಾಮ ರಾಜ್ಯವಾಗಬಲ್ಲದು, ನಾವು ವೈಯಕ್ತಿಕ ಕಾರ್ಯಗಳ ಜತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯ ಮಾಡಬೇಕು ಅಂದಾಗ ಮಾತ್ರ ಮನುಷ್ಯ ಧರ್ಮ ಶ್ರೇಷ್ಠ ಧರ್ಮವಾಗುತ್ತದೆ ಎಂದರು.

ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಇಟ್ಟಿರುವ ಕಳಶವನ್ನು ಮಹಿಳೆಯರು ತಲೆಯ ಮೇಲೆ ಇಟ್ಟುಕೊಂಡು ಪ್ರಮುಖ ಬೀದಿಗಳಲ್ಲಿ ರಾಮ ಸೀತೆ ಮೂರ್ತಿಯೊಂದಿಗೆ ವಿವಿಧ ವಾದ್ಯ ಮತ್ತು ಕುಂಭಮೇಳದೊದಿಗೆ ನಗರ ಪ್ರದಕ್ಷಣೆ ಮಾಡಲಾಯಿತು.

ರಾಮಭಕ್ತ ಕರ ಸೇವಕರಾಗಿ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಗೆ ತೆರಳಿದ್ದ ಪಟ್ಟಣದ ದಿ. ಪ್ರಕಾಶ ಗುಂಜೀಕರ, ದಿ. ರಾಜಾರಾಮ ತಡಕೋಡ, ಅರ್ಜುನ ಕುಣಕಿಕೊಪ್ಪ, ನಾರಾಯಣ ಮೋರೆ, ಅಜ್ಜಪ್ಪ ಹೋರಕೇರಿ, ರಮೇಶರಾವ್‌ ಕಾಯರಬೇಟ್ಟೋ ಅವರ ಕಾರ್ಯ ಮೆರವಣಿಗೆಯಲ್ಲಿದ್ದವರು ಶ್ಲಾಘಿಸಿದರು.

ವೇದಿಕೆಯಲ್ಲಿ ಅರ್ಚಕ ಮೀಲಿಂದ ಕುಲಕರ್ಣಿ, ಕಲ್ಲನಗೌಡ ಪಾಟೀಲ ಇತರರು ಇದ್ದರು.