ಸಾರಾಂಶ
ತೇರದಾಳ(ರ-ಬ): ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಶಿಕ್ಷಣಕ್ಕೆ ಪ್ರಾಧಾನ್ಯತೆ ದೊರೆಯುತ್ತಿದೆ. ಆದರೆ, ಕನಿಷ್ಠ ಮಾನವೀಯತೆ ಬೆಳೆಸುವ ಮತ್ತು ಗುರು-ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸುವ ಸಂಸ್ಕಾರ ಮೂಡಿಸುವತ್ತ ವಿಮುಖರಾಗುತ್ತಿರುವುದರಿಂದ ಸುಶಿಕ್ಷಿತರಾದವರೆಲ್ಲ ಸಂಸ್ಕಾರವಂತರಾಗುತ್ತಿಲ್ಲ ಎಂದು ಮಹಾದೇವ ಜಾಡರ ಕಳವಳ ವ್ಯಕ್ತಪಡಿಸಿದರು. ತೇರದಾಳದ ಶ್ರೀನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ನಡೆದ ಪಾಲಕರ, ಗುರುಗಳ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ಮಾಡಬೇಕಾದ ಕರ್ತವ್ಯಗಳ ಬಗ್ಗೆ ಪ್ರತಿಜ್ಞೆ ಬೋಧಿಸಿದರು. ಮಕ್ಕಳು ಶಿಕ್ಷಕರ ಪಾದಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ,ತೇರದಾಳ(ರ-ಬ)
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಶಿಕ್ಷಣಕ್ಕೆ ಪ್ರಾಧಾನ್ಯತೆ ದೊರೆಯುತ್ತಿದೆ. ಆದರೆ, ಕನಿಷ್ಠ ಮಾನವೀಯತೆ ಬೆಳೆಸುವ ಮತ್ತು ಗುರು-ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸುವ ಸಂಸ್ಕಾರ ಮೂಡಿಸುವತ್ತ ವಿಮುಖರಾಗುತ್ತಿರುವುದರಿಂದ ಸುಶಿಕ್ಷಿತರಾದವರೆಲ್ಲ ಸಂಸ್ಕಾರವಂತರಾಗುತ್ತಿಲ್ಲ ಎಂದು ಮಹಾದೇವ ಜಾಡರ ಕಳವಳ ವ್ಯಕ್ತಪಡಿಸಿದರು.ತೇರದಾಳದ ಶ್ರೀನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ನಡೆದ ಪಾಲಕರ, ಗುರುಗಳ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದರಿಂದ ಸಾಮಾಜಿಕ ಮೌಲ್ಯಗಳು ಕ್ಷೀಣಿಸುತ್ತಿದ್ದು, ಹೆತ್ತವರು ಅನಾಥಾಲಯಗಳಲ್ಲಿ ಜೀವಿಸುವಂತಾಗಿದೆ. ಬಾಲ್ಯದಲ್ಲೇ ಮಕ್ಕಳಿಗೆ ಶಿಕ್ಷಣದ ಜೊತೆಗೆ ನಮ್ಮ ಸನಾತನ ಭಾರತೀಯ ಸಂಸ್ಕಾರಯುತ ಮೌಲ್ಯಗಳನ್ನು ಕಲಿಸುವುದು ಅತ್ಯಗತ್ಯವಾಗಿದೆ. ಶಿಕ್ಷಣ ನಮ್ಮಲ್ಲಿ ಮಾನವೀಯತೆಯ ಸೆಲೆಯನ್ನು ಹೊಮ್ಮಿಸುವಂತಿರಬೇಕು ಹೊರತು ಮಾನವೀಯ ಮೌಲ್ಯಗಳಿಗೆ ವಿದಾಯ ಹೇಳುವಂತಿರಬಾರದು ಎಂದರು.
ಮಹಾಲಿಂಗಯ್ಯಾ ಘಂಟಿ ಸ್ವಾಮಿಗಳು ಮಕ್ಕಳಿಂದ ಪಾಲಕರ ಪಾದಪೂಜಾ ಕ್ರಮ ವಿಧಾನ ತಿಳಿಸಿದರು. ಮಕ್ಕಳು ಮಾಡಬೇಕಾದ ಕರ್ತವ್ಯಗಳ ಬಗ್ಗೆ ಪ್ರತಿಜ್ಞೆ ಬೋಧಿಸಿದರು. ಮಕ್ಕಳು ಶಿಕ್ಷಕರ ಪಾದಪೂಜೆ ನೆರವೇರಿಸಿದರು. ನಂತರ ಮಾತೃಭೋಜನದಲ್ಲಿ ಮಕ್ಕಳಿಗೆ ಕೈತುತ್ತು ತಿನ್ನಿಸಲಾಯಿತು. ಶಿವಾನಂದ ಬೆಳಕೂಡ, ಚೆನ್ನಪ್ಪ ಜೈನಾಪುರ, ಸಂಜಯ ಖವಾಸಿ, ಮಹಾಂತೇಶ ಖವಾಸಿ, ಸಮಸ್ತ ಸಿಬ್ಬಂದಿ ಉಪಸ್ಥಿತರಿದ್ದರು.