ಸಾರಾಂಶ
ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿರುವ ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಸಾಗುವಳಿ ಚೀಟಿ ನೀಡಲಾಗುವುದು ಎಂದು ಶಾಸಕ ಬಿಜಿ ಗೋವಿಂದಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿರುವ ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಸಾಗುವಳಿ ಚೀಟಿ ನೀಡಲಾಗುವುದು ಎಂದು ಶಾಸಕ ಬಿಜಿ ಗೋವಿಂದಪ್ಪ ಹೇಳಿದರು.ತಾಲೂಕಿನ ಗೂಳಿಹಟ್ಟಿ, ಡಿ. ಮಲ್ಲಾಪುರ ಗ್ರಾಮಗಳ ಸರ್ಕಾರಿ ರಿ.ಸ. ನಂಬರ್ ನಲ್ಲಿ ಸಾಗುವಳಿ ಮಾಡಿರುವ ರೈತರ ಜಮೀನುಗಳಿಗೆ ತೆರಳಿ ದಾಖಲೆ ಹಾಗೂ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಸರ್ಕಾರ ತ್ವರಿತ ಗತಿಯಲ್ಲಿ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿರುವ ರೈತರಿಗೆ ಸಾಗುವಳಿ ಚೀಟಿ ನೀಡಲು ಎಲ್ಲಾ ಶಾಸಕರುಗಳಿಗೂ ಸೂಚನೆ ನೀಡಿದೆ ಎಂದರು.
ಅದರಂತೆ ತಹಸೀಲ್ದಾರ್ ಅವರು ತಮ್ಮ ಸಿಬ್ಬಂದಿಯ ಮೂಲಕ ಅರ್ಜಿದಾರರ ಮಾಹಿತಿಯ ಆಧಾರದ ಮೇರೆಗೆ ಸ್ಥಳ ಪರಿಶೀಲಸಿ ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ. ಅದರಂತೆ ಮುಂದಿನ ಬಗರ್ ಹುಕುಂ ಸಭೆಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರವಾಗಿ ವಿಲೇವಾರಿ ಮಾಡಲಾಗುವುದು ಎಂದರು.ಗೂಳಿಹಟ್ಟಿ ರಿ.ಸ. 26ರಲ್ಲಿ 18 ಅರ್ಜಿಗಳು, ರಿ.ಸ. 18ರಲ್ಲಿ 5 ಅರ್ಜಿಗಳು, ಡಿ. ಮಲ್ಲಾಪುರ ರಿ.ಸ. 2 ರಲ್ಲಿ 9 ಅರ್ಜಿಗಳು ಬಂದಿದ್ದು ಎಲ್ಲಾ ಅರ್ಜಿಗಳ ಸ್ಥಳ ಮಹಜರ್ ಸೇರಿದಂತೆ ದಾಖಲೆಗಳ ಪರಿಶೀಲನೆ ಮಾಡಲಾಗಿದೆ ಎಂದರು.
ಈ ವೇಳೆ ತಹಸೀಲ್ದಾರ್ ತಿರುಪತಿ ಪಾಟೀಲ್ ಸೇರಿದಂತೆ ಕಂದಾಯ ಇಲಾಕೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.