ಅಲ್ಪಸಂಖ್ಯಾತ ಸಮುದಾಯಕ್ಕೆ ಸಾಂಸ್ಕೃತಿಕ ಭವನ ಮಂಜೂರು ಮಾಡಿದ್ದು, ಸಮಾಜದ ಎಲ್ಲರಿಗೂ ಇದರಿಂದ ಅನುಕೂಲವಾಗಲಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಕಾರಟಗಿ: ಅಲ್ಪಸಂಖ್ಯಾತ ಸಮುದಾಯಕ್ಕೆ ಸಾಂಸ್ಕೃತಿಕ ಭವನ ಮಂಜೂರು ಮಾಡಿದ್ದು, ಸಮಾಜದ ಎಲ್ಲರಿಗೂ ಇದರಿಂದ ಅನುಕೂಲವಾಗಲಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ವಲಿಸಾಬ್ ದರ್ಗಾದ ಆವರಣದಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸಾಂಸ್ಕೃತಿಕ ಭವನಕ್ಕೆ ಅಡಿಗಲ್ಲು ಹಾಕಿ ಮಾತನಾಡಿದರು.

ಪಟ್ಟಣದ ಮಧ್ಯಭಾಗದ ವಲಿಸಾಬ್ ದರ್ಗಾದ ಆವರಣದಲ್ಲಿ ಸುಮಾರು ₹2 ಕೋಟಿಯಲ್ಲಿ ಅಲ್ಪಸಂಖ್ಯಾತರ ನೂತನ ಸಾಂಸ್ಕೃತಿಕ ಭವನ ನಿರ್ಮಿಸಲಾಗುತ್ತಿದೆ. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧಡೆ ಇರುವ ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭವನ ನಿರ್ಮಿಸಲಾಗುತ್ತಿದೆ. ಈಗಾಗಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ₹1 ಕೋಟಿ ಮಂಜೂರಾಗಿದೆ. ಇನ್ನು ಹೆಚ್ಚಿನ ₹1 ಕೋಟಿಯನ್ನು ಬೇರೆ ಬೇರೆ ಇಲಾಖೆಯಿಂದ ನೀಡಲಾಗುವುದು. ಈ ಸುಸಜ್ಜಿತ ಸಾಂಸ್ಕೃತಿಕ ಭವನ ಭವಿಷ್ಯದಲ್ಲಿ ಸಭೆ ಸಮಾರಂಭಗಳಿಗೆ ಮತ್ತು ಬಡ ಕುಟುಂಬಗಳ ಶುಭ ಕಾರ್ಯಕ್ರಮಗಳಿಗೆ ಲಭ್ಯವಾಗಲಿದೆ ಎಂದರು.

ಈ ವೇಳೆ ಹಿರೇಮಠದ ಮರುಳಸಿದ್ಧಯ್ಯಸ್ವಾಮಿ, ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್. ಶರಣೇಗೌಡ ಕೊ.ಪಟೇಲ್, ಬೂದಿ ಗಿರಿಯಪ್ಪ, ಶಿವರೆಡ್ಡಿ ನಾಯಕ, ಅಯ್ಯಪ್ಪ ಉಪ್ಪಾರ, ಸೇರಿದಂತೆ ಮುಸ್ಲಿಂ ಸಮಾಜದ ಪ್ರಮುಖರಾದ ಎಸ್.ಎಂ. ಜಿಲಾನಿಸಾಬ್, ಡಾ. ಎಂ.ಐ. ಮುದುಗಲ್, ಮೌಲಾನಾ ಸಾಧಿಕ್, ಅಮೃಲ್ ಹುಸೇನ್, ಇಬ್ರಾಹಿಂ ಅಮದಿಹಾಳ, ರಾಜಾಸಾಬ್ ಗ್ಯಾಸ್, ಬಾಬುಸಾಬ್ ಬಳಿಗಾರ, ಯೂಸುಫ್ ಸಾಬ್, ಖಾಜಾಹುಸೇನ್ ಮುಲ್ಲಾ, ಹುಸೇನ್ ಕಂಕರ್, ಅಜಘರ್, ಮುಸ್ತಫಾ ಬೇವಿನಗಿಡದ, ಸಿರಾಜ್ ಹುಸೇನ್, ಅಲಿಹುಸೇನ್, ಮೆಹಬೂಬ್ ಹಂಚಿ, ರಜಬ್‌ಅಲಿ, ಸಂದೀಪಗೌಡ, ತುಳಜಾರಾಮ ಸಿಂಘ್ರಿ ಸೇರಿದಂತೆ ಸಮಾಜದ ಇತರರು ಇದ್ದರು.