ಐತಿಹಾಸಿಕ ತಾಣ ಐಹೊಳೆಯ ಜಯಸಿಂಹ ವೇದಿಕೆಯಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಐತಿಹಾಸಿಕ ತಾಣ ಐಹೊಳೆಯ ಜಯಸಿಂಹ ವೇದಿಕೆಯಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.ಮಧ್ಯಾಹ್ನ 3 ರಿಂದ ಸಂಜೆ 6.30ರವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೆ, ಸಂಜೆ 7.30 ರಿಂದ ಸಮೂಹ ನೃತ್ಯ, ಕುಚಿಪುಡಿ, ಸುಗಮ ಸಂಗೀತ, ನೃತ್ಯ ರೂಪಕ, ಮ್ಯಾಜಿಕ್ ಶೋ, ಚಂಡೆ & ವಾಯೋಲಿಸ್, ಸ್ಯಾಕ್ಸೋಪೋನ್, ಹಾಸ್ಯ ಸಂಜೆ ಕಾರ್ಯಕ್ರಮ ಜರುಗಿದವು. ರಾತ್ರಿ ಚಲನಚಿತ್ರ ನಟ ಡಾಲಿ ಧನಂಜಯ ಮತ್ತು ರಘು ದೀಕ್ಷಿತ್ ತಂಡದಿಂದ ಸಂಗೀತ ಮತ್ತು ಮನರಂಜನೆ ಕಾರ್ಯಕ್ರಮ ಮನರಂಜನೆಯ ರಸದೌತನ ನೀಡಿತು.