ಸಾರಾಂಶ
ತುಮಕೂರು: ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ವೈಭವಯುತ ತುಮಕೂರು ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 11ರಂದು ಮುಖ್ಯ ವೇದಿಕೆಯಲ್ಲಿ ಡಾ.ಶಿವರಾಜ್ ಕುಮಾರ್ ಅವರು ಸಾಂಸ್ಕೃತಿಕ ವೈಭವಕ್ಕೆ ಚಾಲನೆ ನೀಡಲಿ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಜನಪದ ಗೀತೆ, ಸುಗಮ ಸಂಗೀತ,ಆಕರ್ಷಕ ಲೇಸರ್ ಶೋ ಮತ್ತು ಖ್ಯಾತ ಗಾಯಕರಾದ ಗುರುಕಿರಣ್ ಹಾಗೂ ಕಂಬದ ರಂಗಯ್ಯ ಅವರ ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ಜರುಗಲಿದೆ. ಅಕ್ಟೋಬರ್ 12ರಂದು ಕವಿಗೋಷ್ಠಿ, ನವ ದುರ್ಗಿಯರ ನೃತ್ಯ ರೂಪಕ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ತಂಡದಿಂದ ಸಂಗೀತ ರಸ ಸಂಜೆ, ಡ್ರೋನ್ ಶೋ ಮತ್ತು ಸಮಾರೋಪ ಸಮಾರಂಭದ ನಂತರ ಬಾಣ-ಬಿರುಸು ಪ್ರದರ್ಶನ ನೆರವೇರಲಿವೆ. ಇಸ್ರೋ ಸಂಸ್ಥೆಯಿಂದ ಮಾಹಿತಿಯುಕ್ತವಾದ ಬಾಹ್ಯಾಕಾಶ ಕುರಿತ ವಸ್ತು ಪ್ರದರ್ಶನ,ವಿಂಟೇಜ್ ಕಾರ್ ಪ್ರದರ್ಶನ, ಹೆಲಿಕಾಪ್ಟರ್ ಪ್ರದರ್ಶನಗಳು ಎರಡೂ ದಿನವೂ ನಡೆಯಲಿದ್ದು,ಮಕ್ಕಳಿಗೆ ರಜೆ ಇರುವ ಕಾರಣ ಪೋಷಕರು ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುವಂತೆ ಮನವಿ ಮಾಡಿದರು.ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ದಸರಾ ಉತ್ಸವಕ್ಕೆ ಜನರು ಆಗಮಿಸುವುದರಿಂದ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ, ಅವಘಡ ಉಂಟಾಗದಂತೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದರು.