ಸಾರಾಂಶ
ಕೆ.ಡಿ.ಸಿ ಟೆಂಟಲ್ ಕೇರ್ ಮತ್ತು ಇಂಪ್ಲಾಂಟ್ ಸೆಂಟರ್ ಮುಧೋಳ-ಜಮಖಂಡಿ ಹಾಗೂ ಸಮೃದ್ಧಿ ಸಂಗಮ ಗೆಳೆಯರ ಬಳಗ, ಮುಧೋಳ ಹಾಗೂ ರೋಟರಿ ಸಂಸ್ಥೆ, ಮುಧೋಳ-ಜಮಖಂಡಿ-ರಾಮತೀರ್ಥ ಹಾಗೂ ನಾದ ಪರ್ಮಾರ್ಮಿಂಗ್ ಅಮೇರಿಕಾ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಸ್ಥಳೀಯ ಅಂಬೇಡ್ಕರ್ ಭವನದಲ್ಲಿ ನಡೆದ ಸಾಂಸ್ಕೃತಿಕ ಉತ್ಸವ-2024 ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಕನ್ನಡಪ್ರಭ ವಾರ್ತೆ ಮುಧೋಳ
ಕೆ.ಡಿ.ಸಿ ಟೆಂಟಲ್ ಕೇರ್ ಮತ್ತು ಇಂಪ್ಲಾಂಟ್ ಸೆಂಟರ್ ಮುಧೋಳ-ಜಮಖಂಡಿ ಹಾಗೂ ಸಮೃದ್ಧಿ ಸಂಗಮ ಗೆಳೆಯರ ಬಳಗ, ಮುಧೋಳ ಹಾಗೂ ರೋಟರಿ ಸಂಸ್ಥೆ, ಮುಧೋಳ-ಜಮಖಂಡಿ-ರಾಮತೀರ್ಥ ಹಾಗೂ ನಾದ ಪರ್ಮಾರ್ಮಿಂಗ್ ಅಮೇರಿಕಾ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಸ್ಥಳೀಯ ಅಂಬೇಡ್ಕರ್ ಭವನದಲ್ಲಿ ನಡೆದ ಸಾಂಸ್ಕೃತಿಕ ಉತ್ಸವ-2024 ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.ಭಾರತೀಯ ಕಲಾ ಪರಂಪರೆ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಅವಳಿ ನಗರಗಳಾದ ಮುಧೋಳ-ಜಮಖಂಡಿಯ 150ಕ್ಕೂ ಹೆಚ್ಚು ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲಾ ಪ್ರದರ್ಶನ ನೀಡಿದರು.
ಬೆಳಿಗ್ಗೆಯಿಂದ 25000ಕ್ಕೂ ಹೆಚ್ಚು ಜನ ಈ ಕಾರ್ಯಕ್ರಮ ವೀಕ್ಷಿಸಿದರು. ಭಾಗವಹಿಸಿದ ಎಲ್ಲಾ ಕಲಾವಿಧರಿಗೆ ಪ್ರಶಂಸನಾ ಪ್ರಮಾಣ ಪತ್ರ ನೀಡುವುದಲ್ಲದೇ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ಸ್ಪರ್ಧಾಳುಗಳಿಗೆ ಬಹುಮಾನ ನೀಡಲಾಯಿತು.ಪಂಡಿತ ಡಾ.ವಿಜಯಕುಮಾರ ಪಾಟೀಲ ಹಾಗೂ ಗಣೇಶ ಬೆಟಗೇರಿ ಅವರ ತಂಡದಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರದರ್ಶನ ನೀಡಿದರು.
ವೈದ್ಯಕೀಯ ಕ್ಷೇತ್ರ, ಸಾಮಾಜಿಕ ಸೇವೆ, ದೇಶ ಸೇವೆ, ಸಾಹಿತ್ಯಿಕ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದವರಿಗೆ ಹಾಗೂ ಕ್ರೀಡೆ, ಕಲೆ, ಸಂಗೀತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.ಡಾ.ಶಿವಾನಂದ ಕುಬಸದ, ಡಾ.ಮೋಹನ ಬಿರಾದಾರ, ಡಾ.ಸಂಜಯ ಘಾರಗೆ, ಡಾ.ಸುನೀತಾ ಮಲಘಾಣ, ವಕೀಲ ಪ್ರಕಾಶ ಎಂ. ವಸ್ತ್ರದ, ಸಾಹಿತಿ ಶಂಕರ ಉಕ್ಕಲಿ, ಉಮೇಶ ಬಾಡಗಿ, ದನೇಶ ಓಸ್ವಾಲ, ನಾರಾಯಣ ಕುಲಕರ್ಣಿ ಮುಂತಾದವರು ಸನ್ಮಾನಕ್ಕೆ ಭಾಜನರಾದರು.
ಉತ್ತರ ಕರ್ನಾಟಕದ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ತಂಡದಿಂದ ನಗೆ ಹೊನಲು ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಡಿ.ಸಿ. ಸಂಸ್ಥಾಪಕ ಡಾ.ನಿರಂಜನ ಪರಮಶೆಟ್ಟಿ ಅವರು ಪ್ತಾಸ್ತಾವಿಕವಾಗಿ ಮಾತನಾಡಿದರು. ದಿವ್ಯ ಸಾನ್ನಿಧ್ಯವನ್ನು ಬಸವಲಿಂಗ ಮಹಾಸ್ವಾಮೀಜಿ ಹಾಗೂ ಕುಂದರಗಿಯ ಸುರಗಿರಿ ಬೆಟ್ಟದ ಲಕ್ಷ್ಮಣ ಶರಣರು ವಹಿಸಿದ್ದರು. ಸಂಗಮೇಶ ನಿರಾಣಿ, ಗಣೇಶ ಬೆಟಗೇರಿ, ಮಲ್ಲಿಕಾರ್ಜುನ ಸವದಿ, ಅಭಿಷೇಕ ತಲಾಠಿ, ಕಿರಣಕುಮಾರ ದೇಸಾಯಿ, ಕಿರಣ ಜಾಲಿಹಾಳ, ಸಂಜಯ ದೇಸಾಯಿ ಇತರರು ಮುಖ್ಯ ಅತಿಥಿಸ್ಥಾನವಹಿಸಿದ್ದರು.ಡಾ. ಪ್ರಶಾಂತ ಪಟ್ಟಣಶೆಟ್ಟಿ, ಡಾ.ಲಕ್ಷ್ಮೀ ಬನ್ನಿ ಹಾಗೂ ಕೆ.ಡಿ.ಸಿ ಎಲ್ಲ ಸಿಬ್ಬಂದಿ ಹಾಗೂ ಕಿರಣ ಟಂಕಸಾಲಿ, ರವೀಂದ್ರ ಹಂದಿಗುಂದ ಹಾಗೂ ಸಮೃದ್ಧಿ ಗೆಳೆಯರ ಬಳಗದ ಸರ್ವ ಸದಸ್ಯರು ಇದ್ದರು. ಶ್ರುತಿ ಗೋಕಾಕ ನಿರೂಪಿಸಿದರು. ಬಸವರಾಜ ಪರೀಟ ವಂದಿಸಿದರು.