ದೈವ ಕಾರ್ಯಗಳಿಂದ ಸಂಸ್ಕೃತಿ ಉಳಿವು

| Published : Apr 30 2025, 12:32 AM IST

ಸಾರಾಂಶ

ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ದೇವರ ಕೆಲಸಗಳನ್ನು ನಡೆಯುತ್ತಿರಬೇಕು ಎಂದು ಶಿರಾ ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ದೇವತಾ ಕಾರ್ಯ ಮಾಡುತ್ತಿರುವುದರಿಂದ ನಾಡಿನಲ್ಲಿ ಉತ್ತಮ ಮಳೆ ಬೆಳೆಗಳಾಗಿ ಕೆರೆ ಕಟ್ಟೆಗಳು ತುಂಬಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ದೇವರ ಕೆಲಸಗಳನ್ನು ನಡೆಯುತ್ತಿರಬೇಕು ಎಂದು ಶಿರಾ ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.

ಪಟ್ಟಣದಲ್ಲಿ ಗ್ರಾಮ ದೇವತೆ ಕೋಟೆ ಮಾರಮ್ಮದೇವಿ ಹಾಗೂ ಕೊಲ್ಲಾಪುರದಮ್ಮನವರ ನೂತನ ದೇವಾಲಯ ಮತ್ತು ಮೂಲ ದೇವರುಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.ಕೊರಟಗೆರೆ, ಮಧುಗಿರಿ ಹಾಗೂ ಶಿರಾ ತಾಲೂಕುಗಳಲ್ಲಿ ಪುರಾತನ ಕಾಲದ ಐತಿಹಾಸಿಕ ದೇವಸ್ಥಾನಗಳು, ಕೋಟೆಗಳು ಈಗಲು ಇದ್ದು, ಅವುಗಳನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆಯಾಗಿದೆ. ದೇವರನ್ನು ಮನುಷ್ಯನ ರೂಪದಲ್ಲಿ ಕಾಣಬೇಕಾಗಿದೆ ಮನುಷ್ಯ ಮನುಷ್ಯನಿಗೆ ಸಹಾಯ ಮಾಡಬೇಕು ಈಗಿನ ಯುವ ಪೀಳಿಗೆ ಪ್ರತಿಯೊಬ್ಬರಲ್ಲೂ ಆಚಾರ ವಿಚಾರಗಳು ತಿಳಿಯಬೇಕು. ಹಾಗೂ ಐತಿಹಾಸಿಕ ಇತಿಹಾಸಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು. ನಂತರ ನೂತನ ದೇವಸ್ಥಾನವನ್ನು ವೀಕ್ಷಿಸಿ ಶುಭ ಹಾರೈಸಿದರು.ಈ ವೇಳೆ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಿ ದೇವಾಲಯ ಸಮಿತಿಯ ವತಿಯಿಂದ ಶಾಸಕ ಟಿ.ಬಿ.ಜಯಚಂದ್ರ ರವರಿಗೆ ಕೊರಟಗೆರೆ ಇತಿಹಾಸ ದೇವಸ್ಥಾನ ಹಾಗೂ ಗಂಗಾಧರೇಶ್ವರ ಬೆಟ್ಟದ ಭಾವಚಿತ್ರವಿರುವ ಪೋಟೊವನ್ನು ಉಡುಗೊರೆಯಾಗಿ ನೀಡಿ ಸಮಿತಿಯ ಪಧಾದಿಕಾರಿಗಳು ಗೌರವಿಸಿದರು. ಈ ಸಂದರ್ಭಧಲ್ಲಿ ದೇವಾಲಯ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಎ.ಡಿ.ಬಲರಾಮಯ್ಯ, ಕಾರ್ಯದರ್ಶಿ ಕೆ.ವಿ.ಮಂಜುನಾಥ್, ಖಜಾಂಚಿ ಎಸ್.ಪಿ.ಲಕ್ಷ್ಮೀನಾರಾಯಣರಾಮ್, ಮಧುಗಿರಿ ಶ್ರೀನಿವಾಸಮೂರ್ತಿ, ಪ.ಪಂ.ಸದಸ್ಯ ಕೆ.ಆರ್.ಓಬಳರಾಜು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೆ.ಎಲ್,ಆನಂದ್, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್, ಸುನಿಲ್ ಕುಮಾರ್, ಅಶ್ವತ್ಥನಾರಾಯಣರಾಜು, ಪತ್ರಕರ್ತ ಕೆ.ಬಿ.ಲೋಕೇಶ್, ಮುರಳಿಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.