ಜಿಲ್ಲೆಯ 30 ಕಡೆ ಯಶಸ್ವಿಯಾಗಿ ಪ್ರದರ್ಶಿಸಿದ ತಾಯಿ ಮತ್ತು ಮಕ್ಕಳ ಆರೋಗ್ಯ, ಕ್ಷಯ ರೋಗ ಮತ್ತು ಮಾನಸಿಕ ಖಿನ್ನತೆ ಕುರಿತಾದ ಮಾಹಿತಿ ನೀಡುವ ಬೀದಿನಾಟಕವು ಉಡುಪಿಯ ಹಳೆ ಸರ್ಕಾರಿ ಬಸ್ ನಿಲ್ದಾಣದ ಬಳಿ ಪ್ರದರ್ಶನಗೊಂಡು ಸಮಾಪನಗೊಂಡಿತು.
ಉಡುಪಿ: ಸಂಸ್ಕೃತಿವಿಶ್ವ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ವಿವಿಧ ಇಲಾಖೆಗಳಸಹಯೋಗದಲ್ಲಿ, ನಗರದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳ ಕಲಾತಂಡವು ಉಡುಪಿ ಜಿಲ್ಲೆಯ 30 ಕಡೆ ಯಶಸ್ವಿಯಾಗಿ ಪ್ರದರ್ಶಿಸಿದ ತಾಯಿ ಮತ್ತು ಮಕ್ಕಳ ಆರೋಗ್ಯ, ಕ್ಷಯ ರೋಗ ಮತ್ತು ಮಾನಸಿಕ ಖಿನ್ನತೆ ಕುರಿತಾದ ಮಾಹಿತಿ ನೀಡುವ ಬೀದಿನಾಟಕವು ಉಡುಪಿಯ ಹಳೆ ಸರ್ಕಾರಿ ಬಸ್ ನಿಲ್ದಾಣದ ಬಳಿ ಪ್ರದರ್ಶನಗೊಂಡು ಸಮಾಪನಗೊಂಡಿತು. ಈ ಸಂದರ್ಭ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಸಂಚಾಲಕ ರವಿರಾಜ್ ಎಚ್.ಪಿ, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಉಡುಪಿಯ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ಐಎಂಎ ಉಡುಪಿ - ಕರಾವಳಿ ಅಧ್ಯಕ್ಷ ಡಾ. ಅಶೋಕ್ ಕುಮಾರ್, ಕಾರ್ಯದರ್ಶಿ ಡಾ. ಮಾನಸ, ಕೋಶಾಧಿಕಾರಿ ಡಾ. ಸನತ್ ರಾವ್, ಪೂರ್ವಾಧ್ಯಕ್ಷ ಡಾ. ರಾಜಲಕ್ಷ್ಮಿ, ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ವಿಜಯ, ನಿರ್ದೇಶಕ ರಾಮಾಂಜಿ ನಮ್ಮಭೂಮಿ, ಆರೋಗ್ಯ ಶುಶ್ರುಷಕಿ ಮಮತಾ, ಕಾಲೇಜಿನ ನಿರ್ದೇಶಕಿ ಆಶಾ ಕುಮಾರಿ, ಪ್ರಾಚಾರ್ಯೆ ಪ್ರಭಾ ಕಾಮತ್, ಬೀದಿ ನಾಟಕದ ಸಂಯೋಜಕ ರಾಘವೇಂದ್ರ ಜಿ.ಜಿ, ಜೆಸಿಐ ಉಡುಪಿ ಸಿಟಿ ಅಧ್ಯಕ್ಷ ಪಲ್ಲವಿ ಕೊಡಗು, ಬೀದಿನಾಟಕದ ವಿದ್ಯಾರ್ಥಿ ಸಂಚಾಲಕ ವಿನಾಯಕ, ಪ್ರಧಾನ್, ವಿದ್ಯಾರ್ಥಿ ಕಲಾವಿದರಾದ ಶ್ರೇಯಾ, ವಿನಾಯಕ್, ಕೃತಿಕಾ, ನಂದೀಶ್, ಸನ್ನಿಧಿ , ಶಿವಾಲಿಕ, ನೇಮಾಭಾರತಿ, ಅಚ್ಚುತ ಉಪಸ್ಥಿತರಿದ್ದರು.