ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅಭಿಮತ
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅಭಿಮತ ಕನ್ನಡಪ್ರಭ ವಾರ್ತೆ ರಾಯಚೂರು ಮಹಿಳೆಯರಿಗೆ ಪಿರೇಡ್ಸ್ ಸಮಯದಲ್ಲಿ ಕಪ್‌ಗಳು ಹೆಚ್ಚು ಸಹಕಾರಿ ಅಷ್ಟೇ ಅಲ್ಲ ಸುರಕ್ಷಿತವಾಗಿದ್ದು, ಇವುಗಳನ್ನು ಬಳಸಲು ಹೆಣ್ಣು ಮಕ್ಕಳು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರು ಹೇಳಿದರು. ಸ್ಥಳೀಯ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಟಾಟಾ ಎಲ್ಕ್ಸಿಲಿಮಿಟೆಡ್ ಸಿಎಸ್‌ಆರ್ ಆಯೋಜಿಸಿದ್ದ (ಥಿಂಕಲ್ ನವೀನ್) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಮಕ್ಕಳು ಋತುಚಕ್ರ ಬಟ್ಟೆ, ಸ್ಯಾನಿಟರಿ ಪ್ಯಾಡ್ ಬಳಸುವುದು ಸಹಜ. ಆದರೆ, ಇತ್ತೀಚಿನ ದಿನಗಳಲ್ಲಿ ಬಳಕೆಗೆ ಬಂದ ಮುಟ್ಟಿನ ಕಪ್‌ನ್ನು ಪ್ರತಿಯೊಬ್ಬ ಮಹಿಳೆಯರು ಸದುಪಯೋಗಪಡೆದುಕೊಳ್ಳಬೇಕು. ಮಹಿಳೆಯ ಮುಟ್ಟಿನ ಚಕ್ರವು 28 ದಿನಗಳಿಗೊಮ್ಮೆ ಹಾಗೂ ತಿಂಗಳಲ್ಲಿ ಸಾಮಾನ್ಯವಾಗಿ 5 ದಿನಗಳ ಕಾಲ ರಕ್ತಸ್ರಾವ ಉಂಟಾಗುತ್ತದೆ, ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸುಮಾರು ಆರು ವರ್ಷಗಳಷ್ಟು ಅವಧಿ ಋತುಚಕ್ರದಲ್ಲಿಯೇ ಕಳೆಯುತ್ತಾಳೆ ಎಂದರು. ಋತುಮತಿಯಾದಾಗ ಕಡಿಮೆ ಎಂದರೂ ದಿನಕ್ಕೆ ಮೂರು ಪ್ಯಾಡ್‌ಗಳನ್ನು ಉಪಯೋಗಿಸುವುದರಿಂದ ತನ್ನ ಜೀವಿತಾವಧಿಯಲ್ಲಿ 10 ರಿಂದ 12 ಸಾವಿರ ಪ್ಯಾಡ್‌ಗಳನ್ನು ಬಳಸುತ್ತಾರೆ. ಪೊಲೀಸ್ ಸಿಬ್ಬಂದಿಗೆ ನಿಗದಿತ ಸಮಯ ಇರುವುದಿಲ್ಲ. ಟ್ರಾಫಿಕ್ ಮಹಿಳಾ ಪೊಲೀಸ್ ಸಿಬ್ಬಂದಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಪೀರಿಯಡ್ಸ್ ಆದರೆ ಕಷ್ಟವಾಗುತ್ತದೆ ಅವಾಗ ಕಪ್ ಬಳಸುವುದರಿಂದ ತೊಂದರೆ ಇರುವುದಿಲ್ಲ ಎಂದರು. ಕಪ್‌ಗಳನ್ನು ಬಳಸುವುದರಿಂದ ಮಹಿಳೆಯರಲ್ಲಿ ಅವರ ದೇಹದ ಬಗ್ಗೆ ಅರಿವು ಮೂಡುತ್ತದೆ. ನಿರ್ಬಂಧಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚು ಅತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದರು. ದೂರ ಪ್ರಯಾಣದ ಸಂದರ್ಭದಲ್ಲಿ ಮುಟ್ಟಿನ ಕಪ್ ಮಹಿಳೆಯರಿಗೆ ಸಹಕಾರಿಯಾಗಲಿದೆ. ಮುಟ್ಟಿನ ಮಹಿಳೆಯರಲ್ಲಿ ಭೇದ ಎಂ-ಕಪ್‌ಗಳ ಬಳಕೆಯನ್ನು ಉತ್ತೇಜಿಸುವುದರಿಂದ ಕಡಿಮೆ ಘನ ತ್ಯಾಜ್ಯ ಉತ್ಪಾದನೆ, ಸಾರ್ವಜನಿಕ ಆರೋಗ್ಯದ ನಮ್ಮ ಅಪಾಯವನ್ನು ಕಡಿಮೆ ಮಾಡುವುದು, ಸುಧಾರಿತ ಮುಟ್ಟಿನ ಆರೋಗ್ಯ, ಸುರಕ್ಷತೆ, ಅನುಕೂಲತೆ ಸಾಧ್ಯವಿದೆ. ಮಹಿಳೆಯರ ಮೇಲೆ ಸ್ವಾತಂತ್ರ್ಯ ಪಡೆದಂತಹ ಪರಿಣಾಮ ಬೀರುತ್ತದೆ ಎಂದರು. ಈ ಸಂದರ್ಭದಲ್ಲಿ ಅಸೋಸಿಯೇಟ್ ಮ್ಯಾನೇಜರ್ ಸಂದೀಪ್ ಚೌವ್ಹಾಣ, ಐಎಎಸ್ ಅಧಿಕಾರಿ ಸಾಹಿತ್ಯ, ಜಿಲ್ಲಾ ಯೋಜನಾ ನಿರ್ದೇಶಕರಾದ ಪ್ರಕಾಶ ವಿ, ಎಚ್‌ಎಲ್‌ಎಲ್ ಲೈಫ್ ಕೇರ್ ಲಿಮಿಟೇಡ್ ಸಿನಿಯರ್ ಮ್ಯಾನೇಜರ್ ಮನೋಜ, ಜಿಲ್ಲಾ ಆರ್.ಸಿ ಎಚ್ ಅಧಿಕಾರಿ ಡಾ.ನಂದಿತಾ, ಸ್ತ್ರೀ ರೋಗ ತಜ್ಞರು ಡಾ.ಶ್ರೀಲತಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆಯವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.