ಸಾರಾಂಶ
-ಚಿತ್ರದುರ್ಗ ಜೆಎಂಐಟಿಯಲ್ಲಿ ರ್‍ಯಾಗಿಂಗ್ ವಿರೋಧಿ ದಿನ ಆಚರಣೆ
--------ಕನ್ನಡಪ್ರಭವಾರ್ತೆ, ಚಿತ್ರದುರ್ಗ
ನಗರದ ಎಸ್‍ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರ್‍ಯಾಗಿಂಗ್ ನಿಗ್ರಹ ಘಟಕದ ವತಿಯಿಂದ ರ್‍ಯಾಗಿಂಗ್ ವಿರೋಧಿ ದಿನ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಚಾರ್ಯ ಡಾ.ಭರತ್, ರ್‍ಯಾಗಿಂಗ್ ಪಿಡುಗಿಗೆ ಕಡಿವಾಣ ಹಾಕಲು ವಿಶ್ವವಿದ್ಯಾಲಯ ಹಾಗೂ ಅಖಿಲ ಭಾರತೀಯ ತಾಂತ್ರಿಕ ಪರಿಷತ್ತು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಕ್ರಮಗಳನ್ನು ನಮ್ಮ ಕಾಲೇಜಿನಲ್ಲಿ ಜಾರಿಗೆ ತಂದು ರ್‍ಯಾಗಿಂಗ್ ಕಡಿವಾಣ ಹಾಕಿದ್ದೇವೆ ಎಂದು ಹೇಳಿದರು.ಡ್ರಗ್ಸ್ ವಿರೋಧಿ ದಿನಾಚರಣೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ಸೋದರತ್ವ ಭಾವದಿಂದ ನೋಡಿಕೊಂಡು ಮಾದರಿಯಾಗಬೇಕು. ಹಾಗಾದಲ್ಲಿ ರ್‍ಯಾಗಿಂಗ್ ನಶಿಸಿ ಹೋಗುತ್ತದೆ ಎಂದರು.
ಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರುಕ್ಕಮ್ಮ ಮಾತನಾಡಿ, ವಿದ್ಯಾರ್ಥಿನಿಯರನ್ನು ಚುಡಾಯಿಸುವುದು. ಅಶಿಸ್ತಿನ ವರ್ತನೆಯನ್ನು ತೋರುವುದು. ಕಿರಿಯ ವಿದ್ಯಾರ್ಥಿಗಳಲ್ಲಿ ಭಯ ಹೆಚ್ಚಿಸುವುದು ಅಥವಾ ಯಾವುದೇ ಕ್ರಿಯೆಗೆ ವಿದ್ಯಾರ್ಥಿಗಳನ್ನು ಕೇಳುವುದು ರ್‍ಯಾಗಿಂಗ್ ಆಗಿ ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳು ಈ ರೀತಿಯ ಚಟುವಟಿಕೆಗಳಿಂದ ದೂರವಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವೈಯಕ್ತಿಕ ವಿಚಾರಗಳನ್ನು, ಫೋಟೋಗಳನ್ನು ಹಂಚಿಕೊಳ್ಳುವಾಗ ಜಾಗೃತಿ ವಹಿಸಬೇಕು. ಮೊಬೈಲ್ ಬಳಕೆ ಮಾಡಬೇಕು ಎಂದು ತಿಳಿಸಿದರು.ಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬಸವರಾಜ್ ಮಾತನಾಡಿ, ರ್‍ಯಾಗಿಂಗ್ ಮಾಡಿ ಸಿಕ್ಕಿ ಹಾಕಿಕೊಳ್ಳುವವರಿಗೆ ಕಾನೂನು ಪ್ರಕಾರ ದಂಡ ಹಾಗೂ ಶಿಕ್ಷೆ ವಿಧಿಸಲಾಗುವುದು. ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಕ್ಯಾಂಪಸ್‌ನಲ್ಲಿ ಕಳೆಯುತ್ತಾರೆ. ಹಾಗಾಗಿ, ವಿದ್ಯಾರ್ಥಿಗಳು ಅಧ್ಯಾಪಕರ ನುಡಿಗಳನ್ನು ಪಾಲಿಸಿ ತಮ್ಮ ವ್ಯಾಸಂಗ ಮುಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಬದುಕನ್ನು ಶಿಕ್ಷಕರ ಕೈಗೆ ಕೊಡಬೇಕು ಎಂದು ತಿಳಿಸಿದರು.
ಐಕ್ಯುಎಸಿ ಸಂಚಾಲಕ ಡಾ.ಜಗನ್ನಾಥ್ ಎನ್, ಪ್ರೊ.ಬಸಂತಕುಮಾರಿ, ಪ್ರೊ.ಸುಧಾ ಟಿ, ಪ್ರೊ.ತನುಜಾ ಟಿ, ಪ್ರೊ.ಸಂತೋಷ್ ಕುಮಾರ್ ಜಿ ಎಸ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.-------------
ಪೋಟೋ ಕ್ಯಾಪ್ಸನ್ಚಿ್ತ್ರದುರ್ಗದ ಜೆಎಂಐಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ರಾಚಾರ್ಯ ಡಾ.ಭರತ್ ವಿರೋಧಿ ದಿನವನ್ನು ಪ್ರಾಚಾರ್ಯ ಭರತ್ ಉದ್ಘಾಟಿಸಿದರು.
-------ಫೋಟೋ....1 ಸಿಟಿಡಿ 3
--