- ಕೆ.ಎಸ್. ಶಿವಪ್ಪ ಅವರ ವಿರಚಿತ ‘ಮುದ್ದುರಾಮನ ಮನಸ್ಸು’ ಉಪನ್ಯಾಸದಲ್ಲಿ ಕಳವಳ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ ಎಂದು ಮೈಸೂರು ಬಿಜಿಎಸ್‌ ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಬಿ. ಬೆಟ್ಟಸ್ವಾಮಿ ಹೇಳಿದರು.ತಾಲೂಕಿನ ಬೇಗೂರು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಜಿಲ್ಲಾ ಮುದ್ದು ರಾಮ ಬಳಗ ಆಯೋಜಿಸಿದ್ದ ಸಾಹಿತಿ ಕೆ.ಎಸ್. ಶಿವಪ್ಪ ಅವರ ವಿರಚಿತ ‘ಮುದ್ದುರಾಮನ ಮನಸ್ಸು’ ಕವನ ಸಂಕಲನ ಹಾಗೂ ಜೀವನ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಹಿತಿ ಕೆ.ಸಿ. ಶಿವಪ್ಪ ಅವರ ಮುದ್ದುರಾಮನ ಮನಸ್ಸು ಚೌಪದಿ ನೆರವಾಗಬಲ್ಲದು ಎಂದರು.ಉಪನ್ಯಾಸ ನೀಡಿದ ಜಿಲ್ಲಾ ಮುದ್ದು ರಾಮ ಬಳಗದ ಸಂಚಾಲಕ ಬಿ.ಎಸ್. ವಿನಯ್‌ ಮಾತನಾಡಿ, ಮುದ್ದು ರಾಮನ ಮನಸ್ಸು ಕವಿತೆಯ ಕರ್ತೃ ಕೆ.ಸಿ. ಶಿವಪ್ಪ ಅವರು ಮೂಲತಃ ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದವರಾಗಿದ್ದಾರೆ ಎಂದರು.ಮುದ್ದು ರಾಮನ ಮನಸ್ಸು ಕವಿತೆಯು ಚೌಪದಿಗಳಲ್ಲಿ ರಚಿತವಾಗಿದ್ದು, ಇಂದಿನ ಯುವ ಜನತೆಗೆ ಜೀವನದ ಮೌಲ್ಯಗಳ ಬಗ್ಗೆ ಬಿಂಬಿಸುತ್ತದೆ ಎಂದು ಪ್ರತಿಪಾದಿಸಿದರು.ಮುದ್ದುರಾಮ ಬಳಗದ ಸಂಚಾಲಕ ಪೃಥ್ವಿರಾಜ್‌ ಹಾಲಹಳ್ಳಿ ಮಾತನಾಡಿ, ಖ್ಯಾತ ಕವಿಗಳಾದ ದಿನಕರ ದೇಸಾಯಿ, ಡಿ.ವಿ. ಗುಂಡಪ್ಪ ಹಾಗೂ ಕೆ.ಸಿ. ಶಿವಪ್ಪ ಅವರು ಚೌಪದಿಗಳಲ್ಲಿ ಕವಿತೆಗಳನ್ನು ರಚಿಸುವುದರಲ್ಲಿ ನಿಸ್ಸೀಮರಾಗಿದ್ದರು. ಅದರಲ್ಲೂ ಕೆ.ಸಿ. ಶಿವಪ್ಪ ಅವರ ಮುದ್ದುರಾಮನ ಮನಸ್ಸು ಕವಿತೆಯ ಚೌಪದಿಯಲ್ಲಿ ಜೀವನದ ಮೌಲ್ಯ ಹಾಗೂ ಸಂಸ್ಕಾರ ತಿಳಿಸುತ್ತದೆ ಎಂದರು.

ಮುದ್ದುರಾಮ ಬಳಗದ ಸಹ ಸಂಚಾಲಕ ಗುರುಪ್ರಸಾದ್‌ ಕೊಡಗಾಪುರ ಮಾತನಾಡಿ, ಕೆ.ಸಿ. ಶಿವಪ್ಪ ಅವರು ಸುಮಾರು ೩೦ ಸಾವಿರಕ್ಕೂ ಹೆಚ್ಚು ಚೌಪದಿಗಳ ಮೂಲಕ ಮುದ್ದರಾಮ ಕಾವ್ಯದ ಮೂಲಕ ಕವಿತೆ ಬರೆದಿದ್ದಾರೆ ಎಂದರು.ಈಗಾಗಲೇ ೧೦ ಸಾವಿರಕ್ಕೂ ಹೆಚ್ಚು ಚೌಪದಿಗಳು ಪುಸ್ತಕದ ರೂಪದಲ್ಲಿ ಹೊರಬಂದಿವೆ. ಉಳಿದ ಚೌಪದಿಗಳನ್ನು ಪುಸ್ತಕದ ರೂಪದಲ್ಲಿ ಹೊರ ತರುವ ಪ್ರಯತ್ನ ನಡೆದಿದೆ ಎಂದರು.ಸಮಾರಂಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹಿರಿಯ ನಿಲಯಪಾಲಕ ಎಚ್.ಎನ್. ಮಂಜುನಾಥ್, ನಿವೃತ್ತ ಮುಖ್ಯ ಶಿಕ್ಷಕ ಸಿದ್ದರಾಜಪ್ಪ, ಶಿಕ್ಷಕರಾದ ಡಿ.ಪಿ. ಲೋಕೇಶ್‌, ಗೌರಿ ಶಂಕರ್‌, ರಾಜಶೇಖರ್‌, ಸಿದ್ದೇಶ್‌, ಮಲ್ಲು, ಗುರು ಪರಮಾಪುರ, ದೈಹಿಕ ಶಿಕ್ಷಣ ಶಿಕ್ಷಕಿ ಜ್ಯೋತಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

---೧೨ಜಿಪಿಟಿ೨ಸಾಹಿತಿ ಕೆ.ಎಸ್.ಶಿವಪ್ಪ ವಿರಚಿತ ಮುದ್ದುರಾಮನ ಮನಸ್ಸು'''''''' ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಸಹಾಯಕ ಪಾಧ್ಯಾಪಕ ಡಾ.ಎಚ್.ಬಿ.ಬೆಟ್ಟಸ್ವಾಮಿ ಉದ್ಘಾಟಿಸಿದರು.