ಪ್ರಸಕ್ತ ವರ್ಷ 2018 ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರು: ಬೇಲೂರು ಕ್ಷೇತ್ರ ಶಿಕ್ಷಣ ಅಧಿಕಾರಿ ಕೆ.ಪಿ.ನಾರಾಯಣ

| Published : Feb 11 2024, 01:49 AM IST

ಪ್ರಸಕ್ತ ವರ್ಷ 2018 ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರು: ಬೇಲೂರು ಕ್ಷೇತ್ರ ಶಿಕ್ಷಣ ಅಧಿಕಾರಿ ಕೆ.ಪಿ.ನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ೨೦೨೩- ೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೇಲೂರು ತಾಲೂಕಿನಲ್ಲಿ ೨೦೧೮ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆಯಲಿದ್ದಾರೆ ಎಂದು ಬೇಲೂರು ಕ್ಷೇತ್ರ ಶಿಕ್ಷಣ ಅಧಿಕಾರಿ ಕೆ.ಪಿ. ನಾರಾಯಣ ತಿಳಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಪ್ರಗತಿಯ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದರು.

ಪ್ರಗತಿ ಪರಿಶೀಲನಾ ಸಭೆ । ವಿಜ್ಞಾನ, ಗಣಿತ ಆಯ್ದ ಭಾಗಗಳ ಬಿಡುಗಡೆಕನ್ನಡಪ್ರಭ ವಾರ್ತೆ ಹಳೇಬೀಡು

ಪ್ರಸಕ್ತ ೨೦೨೩- ೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೇಲೂರು ತಾಲೂಕಿನಲ್ಲಿ ೨೦೧೮ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆಯಲಿದ್ದಾರೆ ಎಂದು ಬೇಲೂರು ಕ್ಷೇತ್ರ ಶಿಕ್ಷಣ ಅಧಿಕಾರಿ ಕೆ.ಪಿ. ನಾರಾಯಣ ತಿಳಿಸಿದರು.

ಹಳೇಬೀಡು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೇಲೂರು ವತಿಯಿಂದ ನಡೆದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಪ್ರಗತಿಯ ಪರಿಶೀಲನಾ ಸಭೆ ಮತ್ತು ವಿಜ್ಞಾನ ಮತ್ತು ಗಣಿತ ಆಯ್ದ ಭಾಗಗಳ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಬೇಲೂರು ತಾಲೂಕಿನಲ್ಲಿ ೭ ಕೇಂದ್ರ ಇದೆ. ಅದರಲ್ಲಿ ಹಳೇಬೀಡಿನಲ್ಲಿ ಕೆಪಿಎಸ್‌ ಶಾಲೆ ಒಂದೇ ಕೇಂದ್ರವಿದೆ. ಈಗಾಗಲೇ ಮಕ್ಕಳು ಅರ್ಧ ವರ್ಷದಲ್ಲಿ ಆಟ, ಉತ್ಸವ ಹಾಗೂ ಹಲವಾರು ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅದರಲ್ಲಿ ಅರ್ಧ ವಾರ್ಷಿಕ ಪರೀಕ್ಷೆಯನ್ನು ಸಹ ಮುಗಿಸಲಾಗಿದೆ. ಮುಂದೆ ಬರುವ ಮಾರ್ಚ್ ತಿಂಗಳ ಪರೀಕ್ಷೆಗೆ ಹೆಚ್ಚಿನ ರೀತಿಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಶ್ರಮವಹಿಸಿ ಮಕ್ಕಳಿಗೆ ಪಾಠವನ್ನು ಮಾಡಿದರೆ ಫಲಿತಾಂಶ ಹೆಚ್ಚಿನ ರೀತಿಯಲ್ಲಿ ಬರುತ್ತದೆ. ಅದರ ಭಾಗವಾಗಿ ‘ಗುರಿ ೪೦’ ಎಂಬ ಕಿರು ಹೊತ್ತಿಗೆ ತಂದಿದ್ದೇವೆ. ಈ ಪುಸ್ತಕದಲ್ಲಿ ಮತ್ತು ಗಣಿತ ಮತ್ತ ವಿಜ್ಞಾನ ಮಕ್ಕಳು ಚೆನ್ನಾಗಿ ಓದಿ ತಮ್ಮ ಜೀವನದಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

‘ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪೋಷಕರನ್ನು ಹೆಚ್ಚು ಗಮನ ನೀಡಬೇಕೆಂದು ತಿಳಿಹೇಳಬೇಕು. ಮಕ್ಕಳು ಓದಿ ಚೆನ್ನಾಗಿ ಬೆಳೆಯಲಿ, ಮುಂದಿನ ಅವರ ಜೀವನ ಅನುಕೂಲವಾಗುತ್ತದೆ. ಈ ಬಾರಿ ಯಶಸ್ವಿ ಮಕ್ಕಳಿಗೆ ಅನುಕೂಲವಾಗಲಿ ಎಂಬ ಸರಳತೆಯ ಆಯ್ದ ಭಾಗದಲ್ಲಿ ಗಣಿತ ಮತ್ತು ವಿಜ್ಞಾನ ಪುಸ್ತಕವನ್ನು ಬರೆದಿದ್ದೇನೆ. ಇದಕ್ಕೆ ಸಹಕಾರ ನೀಡಿದ ಹಗರೆಯ ನಿವಾಸಿ ಸಣ್ಣೇಗೌಡರು (ಪೂಜಾರ ತಮ್ಮಯ್ಯಣ್ಣ) ನನಗೆ ಪುಸ್ತಕದ ಮುದ್ರಣಕ್ಕೆ ಅನುಕೂಲ ಮಾಡಿಕೊಟ್ಟರು’ ಎಂದು ತಿಳಿಸಿದರು.

ಯುರೋ ಕಿಡ್ಸ್ ವಿದ್ಯಾ ವಿಕಾಸ್ ಪಬ್ಲಿಕ್ ಶಾಲೆಯ ಬೇಲೂರು ರಂಗನಾಥ್ ಸಹ ಪುಸ್ತಕಕ್ಕೆ ಸಹಕಾರ ನೀಡಿದ್ದಾರೆ. ಇದರಿಂದ ಮಕ್ಕಳು ಓದಿ ಅನುಕೂಲ ಮಾಡಿಕೊಳ್ಳಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ರಂಗನಾಥ ಮಾತನಾಡಿ, ‘ನಮ್ಮದು ಇದರಲ್ಲಿ ಯಾವ ಪಾತ್ರವಿಲ್ಲ. ಬಿಇಒ ರವರ ಶ್ರಮಕ್ಕೆ ನಮ್ಮ ಸಹಕಾರ ನೀಡಿದ್ದೇವೆ. ಮಕ್ಕಳು ಓದಿ ಜೀವನದಲ್ಲಿ ಮುಂದೆ ಬಂದರೆ ಸಂತೋಷ ಪಡುತ್ತೇವೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ವೆಂಕಟೇಶ್, ಪ್ರಕಾಶ್, ಕೆ.ಪಿ.ಎಸ್. ಉಪಪ್ರಾಂಶುಪಾಲ ಮುಳ್ಳಯ್ಯ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ನಾಗರಾಜು ಹಾಗೂ ಇಸಿಒ ಮಂಜುನಾಥ್ ಹಾಜರಿದ್ದರು.

ವಿಜ್ಞಾನ ಮತ್ತು ಗಣಿತ ಆಯ್ದ ಭಾಗಗಳ ಪುಸ್ತಕವನ್ನು ಬಿಡುಗಡೆ ಮಾಡಿದ ಬಿಇಒ ನಾರಾಯಣ್ ಮತ್ತು ಗಣ್ಯರು.