ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಆಧುನಿಕತೆ ಬೆಳೆದಂತೆ ಸಮಾಜ ವಿಸ್ತಾರವಾಗುತ್ತಿದೆ. ಸಮಾಜದ ಬದಲಾವಣೆಗೆತಕ್ಕಂತೆ ಪಠ್ಯವೂ ಕೂಡ ಬದಲಾಗಿ ಹೊಸ ವಿಚಾರಗಳನ್ನು ವಿದ್ಯಾರ್ಥಿಗಳು ಕಲಿಯಲು ಅನುಕೂಲವಾಗುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯ ಸಮಾಜಶಾಸ್ತ್ರ ಸ್ನಾತಕ ಅಧ್ಯಯನ ಮಂಡಳಿ ಅಧ್ಯಕ್ಷ ಪ್ರೊ.ರಾಜೇಶ್‌ಆರ್.ಅಭಿಪ್ರಾಯಪಟ್ಟರು.ತುಮಕೂರು ವಿಶ್ವವಿದ್ಯಾನಿಲಯ ಸಮಾಜಶಾಸ್ತ್ರ ಅಧ್ಯಾಪಕರ ವೇದಿಕೆ ಹಾಗೂ ಸ್ನಾತಕ ಸಮಾಜಶಾಸ್ತ್ರ ಅಧ್ಯಯನ ಮಂಡಳಿ ಸಂಯುಕ್ತಆಶ್ರಯದಲ್ಲಿ ಪರಿಷ್ಕೃತ ರಾಷ್ಟ್ರೀಯ ಶಿಕ್ಷಣ ನೀತಿ (ಎಸ್‌ಇಪಿ) ಸಮಾಜಶಾಸ್ತ್ರ ಸ್ನಾತಕ ಪಠ್ಯ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜಶಾಸ್ತ್ರ ವಿದ್ಯಾರ್ಥಿಗಳ ಕಲಿಕೆಯ ಭಾಗವಾಗಬೇಕು. ಇಂದು ಸಮಾಜದಲ್ಲಿ ಎಲ್ಲವೂ ಅಪ್ಡೇಟ್ ಆಗಿರುವ ವಿಷಯಗಳೇ ಸಿಗುತ್ತವೆ. ಆದರೆ ಪಠ್ಯ ಮಾತ್ರ ಸಿದ್ಧಾಂತದ ಮೇಲೆ ರಚನೆಯಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಆಗುತ್ತಿರುವ ತಕ್ಷಣದ ಬದಲಾವಣೆಗೆ ಪೂರಕವಾದಂತಹ ಪಠ್ಯವನ್ನು ಅಧ್ಯಯನಕ್ಕಾಗಿ ಇಡಬೇಕಾದ ಅನಿವಾರ್ಯತೆ ಇದೆ ಎಂದರು.ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಸಮಾಜ ಶಾಸ್ತ್ರೀಯ ಸ್ಪರ್ಧಾತ್ಮಕ ಬೆಳವಣಿಗೆಯನ್ನು ಪರಿಚಯಿಸುವ ಅವಶ್ಯಕತೆಇದೆ. ಆ ನಿಟ್ಟಿನಲ್ಲಿ ಈ ಕಾರ್ಯಗಾರವು ಪೂರಕವಾಗಲಿದೆ ವಿದ್ಯಾರ್ಥಿಗಳಿಗೆ ಅವರ ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ ಪಠ್ಯವನ್ನು ಸೇರಿಸಿದಾಗ ಸಮಾಜವನ್ನುಅರ್ಥ ಮಾಡಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಮಹಾರಾಣಿ ಕ್ಲಸ್ಟರ್ ವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಲಕ್ಷ್ಮೀಪತಿ ಸಿ.ಜಿ., ಸರ್ಕಾರ ಬದಲಾದಂತೆ ಶಾಲೆಯ ಪಠ್ಯಕ್ರಮಗಳು ಕೂಡ ಬದಲಾಗುತ್ತಿರುವುದು ವಿಷಾದನೀಯ.ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಪಠ್ಯಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರುವ ಅಂತದ್ದು ಮತ್ತು ಭವಿಷ್ಯದಲ್ಲಿ ಅವರಿಗೆ ಉದ್ಯೋಗ ಕಲ್ಪಿಸುವಂತಹ ರೀತಿಯಲ್ಲಿ ರಚನೆ ಆಗಬೇಕಿದೆ ಆ ನಿಟ್ಟಿನಲ್ಲಿ ಈ ಕಾರ್ಯಗಾರ ಸಹಕಾರಿಯಾಗಲಿದೆ ಎಂದು ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯ ಸಮಾಜಶಾಸ್ತ್ರ ವೇದಿಕೆ ಅಧ್ಯಕ್ಷ ಡಾ ಈ. ನಾಗೇಂದ್ರಪ್ಪ, ಸ್ನಾತಕೋತ್ತರ ಸಮಾಜಶಾಸ್ತ್ರಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ಸುನಿತಾ ಗಾಣಿಗೇರ್, ಸಹಪ್ರಾಧ್ಯಾಪಕರಾದ ಡಾ.ಅಶ್ವಿನಿ ಬಿ.ಜಾನೆ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಪುಟ್ಟರಾಜು, ಶಿರಾಮಾಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))