ಯುಪಿಎಂಸಿ: ಸೈಬರ್ ಕ್ರೈಂ, ಪೋಕ್ಸೋ ಕಾಯ್ದೆ ಮಾಹಿತಿ ಕಾರ್ಯಾಗಾರ

| Published : Oct 11 2024, 11:58 PM IST

ಯುಪಿಎಂಸಿ: ಸೈಬರ್ ಕ್ರೈಂ, ಪೋಕ್ಸೋ ಕಾಯ್ದೆ ಮಾಹಿತಿ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ದಿಶಾ ಮಹಿಳಾ ಸಂಘ ವತಿಯಿಂದ ಅ.೮ರಂದು ಸೈಬರ್ ಕ್ರೈಂ ಮತ್ತು ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ದಿಶಾ ಮಹಿಳಾ ಸಂಘ ವತಿಯಿಂದ ಅ.೮ರಂದು ಸೈಬರ್ ಕ್ರೈಂ ಮತ್ತು ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.

ಕರಾವಳಿ ಕಾವಲು ಪೊಲೀಸ್ ಪಡೆ ಮಲ್ಪೆ ಇದರ ಉಪ ನಿರೀಕ್ಷಕಿ ಮುಕ್ತಾ ಬಾಯಿ, ಪದವಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ, ಮನೆಯ ಬಾಂಧವ್ಯ ತುಂಬಾ ಉತ್ತಮವಾಗಿರಬೇಕು, ಪೋಷಕರೊಂದಿಗೆ ಮಾತನಾಡಿ ಪರಸ್ಪರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ ಎಂದರು.

ವಿವಿಧ ಉದಾಹರಣೆಗಳ ಮೂಲಕ ಪೋಕ್ಸೋ ಕಾಯ್ದೆ ಮತ್ತು ಸೈಬರ್ ಕ್ರೈಂ ಅಡಿಯಲ್ಲಿರುವ ಕಾನೂನು ಮಾಹಿತಿಯನ್ನು ನೀಡಿ, ಸೈಬರ್ ಕ್ರೈಂ ಸಂಬಂಧಿಸಿದಂತೆ ಸಹಾಯವಾಣಿ ೧೯೩೦ಗೆ ಕರೆ ಮಾಡಿ ಎಂದು ಕರೆಕೊಟ್ಟರು.ಕಾಲೇಜಿನ ಉಪ ಪ್ರಾಚಾರ್ಯ ರಾಧಾಕೃಷ್ಣ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಕಾವಲು ಪಡೆ ಪೊಲೀಸ್ ಸಿಬ್ಬಂದಿ ದಿನೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿರಿದ್ದರು.

ದಿಶಾ ಸಂಘದ ಸಹ ಸಂಚಾಲಕಿ ಇಂದಿರಾ ಸ್ವಾಗತಿಸಿದರು. ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿ ರಾಜೇಶ್ ಕುಮಾರ್ ವಂದಿಸಿದರು. ದಿಶಾ ಸಂಘದ ಸಂಚಾಲಕಿ ಜಯಲಕ್ಷ್ಮೀ ಜಿ. ಕಾರ್ಯಕ್ರಮ ನಿರೂಪಿಸಿದರು.