ಸೈಬರ್ ಕ್ರೈಂ, ಮಾದಕದ್ರವ್ಯ ಜಾಗೃತಿ ಕಾರ್ಯಕ್ರಮ

| Published : Oct 30 2025, 02:15 AM IST

ಸಾರಾಂಶ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸೈಬರ್ ಭದ್ರತೆ, ಮಾದಕದ್ರವ್ಯ ದುರುಪಯೋಗ ಮತ್ತು ಜವಾಬ್ದಾರಿಯುತ ನಾಗರಿಕರಾಗುವುದರ ಕುರಿತು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿದರು.

ಯುವ ಜನರೇ ಹೆಚ್ಚು ಹೆಚ್ಚು ಮೋಸ ಹೋಗುತ್ತಿದ್ದಾರೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಅಂಜುಮನ್ ಡಿಗ್ರಿ ಕಾಲೇಜು ಮತ್ತು ಪಿಜಿ ಸೆಂಟರ್‌ನಲ್ಲಿ ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್, ಅಂಜುಮನ್ ಹಾಮಿ-ಎ-ಮುಸ್ಲಿಮೀನ್, ಇಸ್ಲಾಹಿ ಮೌಶ್ರಾ ಸಮಿತಿ, ಭಟ್ಕಳ ಮುಸ್ಲಿಂ ಯುವ ಫೆಡರೇಶನ್, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ಭಟ್ಕಳ ಟೌನ್ ಪೊಲೀಸ್, ಅಂಜುಮನ್ ಎನ್‌ಎಸ್‌ಎಸ್ ಘಟಕ ಸಂಯುಕ್ತವಾಗಿ ಆಯೋಜಿಸಿದ್ದ ಸೈಬರ್ ಕ್ರೈಂ ಜಾಗೃತಿ ಹಾಗೂ ಮಾದಕದ್ರವ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸೈಬರ್ ಭದ್ರತೆ, ಮಾದಕದ್ರವ್ಯ ದುರುಪಯೋಗ ಮತ್ತು ಜವಾಬ್ದಾರಿಯುತ ನಾಗರಿಕರಾಗುವುದರ ಕುರಿತು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿದರು.

ವಿವಿಧ ರೀತಿಯ ಆನ್‌ಲೈನ್ ವಂಚನೆಗಳು, ಲವ್ ದೋಖಾ, ಸೈಬರ್ ವಂಚನೆ ಹಾಗೂ ಯುವ ಜನರೇ ಹೆಚ್ಚು ಹೆಚ್ಚು ಮೋಸ ಹೋಗುವುದರ ಕುರಿತು ಉದಾಹರಣೆ ಸಹಿತ ವಿವರಿಸಿದ ಅವರು, ಯಾವುದೇ ರೀತಿಯ ವಂಚನೆಗೊಳಗಾದವರು ತಕ್ಷಣ ೧೯೩೦ ನಂಬರ್‌ಗೆ ಕರೆ ಮಾಡುವಂತೆ ತಿಳಿಸಿದರು. ಅಂಜುಮಾನ್ ಹಾಮಿ-ಎ-ಮುಸ್ಲಿಮೀನ್ ಉಪಾಧ್ಯಕ್ಷ ಸಾಧಿಕ್ ಪಿಲ್ಲೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಮಾತುಲ್ ಮುಸ್ಲಿಮೀನ್‌ನ ಉಪ ಖಾಜಿ ಮೌಲಾನಾ ಅನ್ಸಾರ್ ಮದನಿ ಮಾತನಾಡಿದರು. ವೇದಿಕೆಯಲ್ಲಿ ಅಂಜುಮನ್ ಉಪಾಧ್ಯಕ್ಷ ಮಹಮ್ಮದ್ ಜುಬೇರ್ ಕೋಲಾ, ಜುಕಾಕು ಇಸ್ಮಾಯಿಲ್ ಉಪಸ್ಥಿತರಿದ್ದರು. ಅಬ್ದುರ್ ರಹ್ಮಾನ್ ಕುರಾನ್ ಪಠಣ ಮಾಡಿದರು. ಭಟ್ಕಳ ಮುಸ್ಲಿಂ ಯುವ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಮುಬಾಶಿರ್ ಹಲ್ಲಾರೆ ಸ್ವಾಗತಿಸಿದರು. ಸಯ್ಯದ್ ಇಮ್ರಾನ್ ಲಂಕಾ ಅತಿಥಿಗಳನ್ನು ಪರಿಚಯಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಗಾನಿಮ್ ಮೊಹತೆಶಂ ನಿರ್ವಹಿಸಿದರು. ಪ್ರಾಂಶುಪಾಲ ಯೂಸುಫ್ ಕೋಲಾ ವಂದಿಸಿದರು.