ಅಯೋಧ್ಯೆಗೆ ಸೈಕಲ್ ಮೂಲಕ ಯಾತ್ರೆ

| Published : Oct 14 2024, 01:22 AM IST

ಸಾರಾಂಶ

ಸುಮಾರು 1,900 ಕಿಲೋ ಮೀಟರ್ ದೂರದ ಅಯೋಧ್ಯೆಗೆ ಬಂಗಾರಪೇಟೆ ಪಟ್ಟಣದ ವರದರಾಜ, ಗಗನ್, ರವಿ, ಹರೀಶ್ ಸೈಕಲ್ ಮೂಲಕ ಪ್ರಯಾಣ ಬೆಳಸಿ ದ್ದಾರೆ. ಅಯೋಧ್ಯೆಗೆ ತೆರಳುವ ಮುನ್ನ ಭಾನುವಾರ ಬೆಳಿಗ್ಗೆ ಬಜಾರ್ ರಸ್ತೆಯ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ತಂಡ ಪ್ರಯಾಣಬೆಳೆಸಿತು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ರಾಮನ ದರ್ಶನ ಪಡೆಯಲು ಹಲವರು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಬಹುತೇಕ ಭಕ್ತರು ವಾಹನಗಳ ಮೂಲಕ ಅಯೋಧ್ಯೆಗೆ ಭೇಟಿ ನೀಡುತ್ತಿರುವುದು ಸಾಮಾನ್ಯ. ಆದರೆ ತಾಲೂಕಿನ ಯುವಕರ ತಂಡವೊಂದು ಸೈಕಲ್ ಸವಾರಿ ಮೂಲಕ ರಾಮನ ದರ್ಶನ ಪಡೆಯಲು ಪ್ರಯಾಣ ಬೆಳೆಸಿದ್ದಾರೆ.ಸುಮಾರು 1,900 ಕಿಲೋ ಮೀಟರ್ ದೂರದ ಅಯೋಧ್ಯೆಗೆ ಬಂಗಾರಪೇಟೆ ಪಟ್ಟಣದ ವರದರಾಜ, ಗಗನ್, ರವಿ, ಹರೀಶ್ ಸೈಕಲ್ ಮೂಲಕ ಪ್ರಯಾಣ ಬೆಳಸಿ ದ್ದಾರೆ.

ಸ್ನೇಹೀತರು, ಹಿತೈಷಿಗಳ ಹಾರೈಕೆ

ಅಯೋಧ್ಯೆಗೆ ತೆರಳುವ ಮುನ್ನ ಭಾನುವಾರ ಬೆಳಿಗ್ಗೆ ಬಜಾರ್ ರಸ್ತೆಯ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ತಂಡ ಈ ಸಂದರ್ಭದಲ್ಲಿ ನೆರೆದಿದ್ದ ಹಿತೈಷಿಗಳು, ಸ್ನೇಹಿತರು, ಬಂಧುಗಳು ಶುಭ ಹಾರೈಕೆಗಳೊಂದಿಗೆ ಅಯೋಧ್ಯೆಗೆ ತಮ್ಮ ಸೈಕಲ್ ಯಾತ್ರೆಯನ್ನು ಆರಂಭಿಸಿದರು.

ಈ ವೇಳೆ ಮಾತನಾಡಿದ ತಂಡ, ಅಯೋಧ್ಯೆಗೆ ಬೈಕ್, ರೈಲು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಸಾಕಷ್ಟು ಭಕ್ತರು ಪ್ರಯಾಣಿಸುತ್ತಾರೆ. ಆದರೆ ನಮಗೆ ಸೈಕಲ್ ಮೂಲಕ ಅಯೋಧ್ಯೆಗೆ ಹೋಗಲು ಇಷ್ಟ. ಆದ್ದರಿಂದ ಬಾನುವಾರ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸೈಕಲ್ ಮೂಲಕ ಅಯೋಧ್ಯೆಗೆ ಪ್ರಯಾಣ ಆರಂಭಿಸಿದ್ದೇವೆ ಎಂದು ತಿಳಿಸಿತು.ಯುವಕರಲ್ಲಿ ರಾಮಭಕ್ತಿ ವೃದ್ಧಿಸಲಿ

ಹಿರಿಯರಾದ ಕೃಷ್ಣಮೂರ್ತಿ ಹಾಗೂ ಶ್ರೀನಿವಾಸರಾವ್ ಮಾತನಾಡಿ, ಬಂಗಾರಪೇಟೆ ಯುವಕರು ಹಲವು ಯುವಕರಿಗೆ ಪ್ರೇರಣೆಯಾಗಿದ್ದಾರೆ. ನಮ್ಮ ದೇಶದ ಸಂಸ್ಕೃತಿ ಎತ್ತಿ ಹಿಡಿಯಲು, ಯುವಶಕ್ತಿಯಲ್ಲಿ ರಾಮ ಭಕ್ತಿ ವೃದ್ಧಿಯಾಗಬೇಕೆಂಬ ಕಾರಣಕ್ಕೆ ಅಯೋಧ್ಯೆಗೆ ಸೈಕಲ್ ಯಾತ್ರೆ ಸಂಕಲ್ಪ ತೊಟ್ಟಿರುವುದು ಹೆಮ್ಮೆಯ ವಿಚಾರ ಎಂದರು.