ಸಿಲಿಂಡರ್ ಸ್ಫೋಟ: ಐವರಿಗೆ ತೀವ್ರ ಗಾಯ

| Published : Jul 03 2024, 12:21 AM IST

ಸಾರಾಂಶ

ಅಡುಗೆ ಮಾಡುತ್ತಿದ್ದ ವೇಳೆ ಅನಿಲ ಸೋರಿಕೆಯಾಗಿ ಸಿಲಿಂಡರ್‌ ಸ್ಫೋಟಗೊಂಡು ಐವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹೊರವಲಯದ ಎಸ್‌ಒಜಿ ಕಾಲನಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ನಗರದ ಎಸ್‌ಒಜಿ ಕಾಲನಿ ವಾಸಿಗಳಾದ ಲಲಿತಮ್ಮ ಮಲ್ಲೇಶಪ್ಪ (50), ಮಲ್ಲೇಶಪ್ಪ (60), ಪಾರ್ವತಮ್ಮ (45), ಸೌಭಾಗ್ಯ (36) ಹಾಗೂ ಪ್ರವೀಣ (35) ಗಂಭೀರವಾಗಿ ಗಾಯಗೊಂಡಿದ್ದಾರೆ.

- ದಾವಣಗೆರೆ ಎಸ್ಓಜಿ ಕಾಲನಿಯಲ್ಲಿ ರಾತ್ರಿ ಅನಾಹುತ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಅಡುಗೆ ಮಾಡುತ್ತಿದ್ದ ವೇಳೆ ಅನಿಲ ಸೋರಿಕೆಯಾಗಿ ಸಿಲಿಂಡರ್‌ ಸ್ಫೋಟಗೊಂಡು ಐವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹೊರವಲಯದ ಎಸ್‌ಒಜಿ ಕಾಲನಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ನಗರದ ಎಸ್‌ಒಜಿ ಕಾಲನಿ ವಾಸಿಗಳಾದ ಲಲಿತಮ್ಮ ಮಲ್ಲೇಶಪ್ಪ (50), ಮಲ್ಲೇಶಪ್ಪ (60), ಪಾರ್ವತಮ್ಮ (45), ಸೌಭಾಗ್ಯ (36) ಹಾಗೂ ಪ್ರವೀಣ (35) ಗಂಭೀರವಾಗಿ ಗಾಯಗೊಂಡಿದ್ದಾರೆ.

ಎಂದಿನಂತೆ ರಾತ್ರಿ ಊಟಕ್ಕೆ ಅಡುಗೆ ಮಾಡಲೆಂದು ಗ್ಯಾಸ್ ಒಲೆ ಹಚ್ಚಿದ್ದಾರೆ. ಆಗ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಮನೆ ಮೇಲ್ಚಾವಣಿ ಹಾರಿಹೋಗಿದೆ. ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಮಲ್ಲೇಶಪ್ಪ, ಲಲಿತಮ್ಮ ಸೇರಿದಂತೆ ಐದೂ ಜನರು ತೀವ್ರ ಗಾಯಗೊಂಡಿದ್ದಾರೆ. ಐವರಿಗೂ ಶೇ.50ಕ್ಕಿಂತ ಹೆಚ್ಚು ಸುಟ್ಟ ಗಾಯಗಳಾಗಿವೆ.

ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವಲ್ಲಿ ಸ್ಥಳೀಯರು ನೆರವಾದರು. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - -