ಸಿಲಿಂಡರ್ ಸ್ಫೋಟ: ಚಿಕಿತ್ಸೆ ಫಲಿಸದೆ ಯುವತಿ ಸಾವು

| Published : Oct 29 2025, 11:15 PM IST

ಸಾರಾಂಶ

ಕಲಾದಗಿ: ಸಮೀಪದ ಗದ್ದನಕೇರಿಯ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಯುವತಿ ಸ್ನೇಹಾ ಶಂಕರ ಮೇದಾರ (22) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕಲಾದಗಿ: ಸಮೀಪದ ಗದ್ದನಕೇರಿಯ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಯುವತಿ ಸ್ನೇಹಾ ಶಂಕರ ಮೇದಾರ (22) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಕ್ಟೋಬರ್ 19ರಂದು ದೀಪಾವಳಿ ನಿಮಿತ್ತ ಗದ್ದನಕೇರಿ ಕ್ರಾಸ್‌ ಮನೆಯ ಮುಂದೆ ಹಚ್ಚಿದ ದೀಪದಿಂದಾಗಿ ಬೆಂಕಿ ಆವರಿಸಿ ಮನೆಯ ಹೊರಗಿಟ್ಟಿದ್ದ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಮನೆ ಸಂಪೂರ್ಣ ಧ್ವಂಸಗೊಂಡಿತ್ತು. ಕಟ್ಟಡದೊಳಗಿದ್ದ 8 ಜನ ಗಾಯಗೊಂಡಿದ್ದರು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ ಸ್ನೇಹಾ ಸೋಮವಾರ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.