ಸಿಲಿಂಡರ್ ಸೋರಿಕೆ: ಮೂವರಿಗೆ ಗಾಯ

| Published : Apr 30 2024, 02:06 AM IST

ಸಾರಾಂಶ

ಮುಧೋಳ ತಾಲೂಕಿನ ಮಳಲಿ ಗ್ರಾಮದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಮೂವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಕನ್ನಡ ಪ್ರಭ ವಾರ್ತೆ ಮುಧೋಳ

ತಾಲೂಕಿನ ಮಳಲಿ ಗ್ರಾಮದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಮೂವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಸಂತಪ್ಪ ಕಾಶವ್ವ ಮಾದರ (38), ಸಂಜು ಮಹಾದೇವ ಮಾದರ (25) ಮತ್ತು ಗೀತಾ ಸಂಜು ಮಾದರ (24) ಗಾಯಗೊಂಡಿದ್ದು, ಮುಧೋಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ಸಂತಪ್ಪ ಕಾಶವ್ವ ಮಾದರ ಎಂಬುವರ ಮನೆಯಲ್ಲಿನ ಸಿಲಿಂಡರ್‌ ಬೆಂಕಿ ಅಕಸ್ಮಿಕವಾಗಿ ನಂದಿದ್ದು, ಇದರಿಂದ ಅನಿಲ ಸೋರಿಕೆಯಾಗಿದೆ. ಇದನ್ನು ಗಮನಿಸದೆ ಸಿಲಿಂಡರ್ ಆರಂಭಿಸಲು ಯತ್ನಿಸಿದಾಗ ಏಕಾಏಕಿ ಬೆಂಕಿ ಚಿಮ್ಮಿದೆ. ಇದರಿಂದ ಅಡುಗೆ ಮನೆಯಲ್ಲಿದ್ದವರಿಗೆ ಬೆಂಕಿ ತಾಗಿ ಅಲ್ಪಸ್ವಲ್ಪ ಗಾಯಗಳಾಗಿವೆ.