ರಾಜ್ಯದ ಜನ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ 64ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸೇರಿ ಕೇಕ್ ಕತ್ತರಿಸಿ ಆಚರಿಸುತ್ತಿದ್ದೇವೆ. ಡಿಕೆಶಿ ಅವರಿಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಐಶ್ವರ್ಯ ಲಭಿಸಿ ಸರ್ಕಾರದಲ್ಲಿ ದೊಡ್ಡ ಮಟ್ಟದ ಹುದ್ದೆ ಲಭಿಸಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಹಾಗೂ ಜನರ ಸೇವೆ ಮಾಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಎಚ್.ಎಂ.ಶಿವಕುಮಾರ್ ಪ್ರಾರ್ಥಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರ 64ನೇ ಹುಟ್ಟು ಹಬ್ಬದ ಆಚರಣೆ ಅಂಗವಾಗಿ ಹಲಗೂರು ವೃತ್ತದಲ್ಲಿ ಅಭಿಮಾನಿಗಳಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಿ ಮತ್ತು ಲಘು ಉಪಾಹಾರ ನೀಡಿದ ಮಾತನಾಡಿದರು.

ರಾಜ್ಯದ ಜನ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ 64ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸೇರಿ ಕೇಕ್ ಕತ್ತರಿಸಿ ಆಚರಿಸುತ್ತಿದ್ದೇವೆ. ಡಿಕೆಶಿ ಅವರಿಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಐಶ್ವರ್ಯ ಲಭಿಸಿ ಸರ್ಕಾರದಲ್ಲಿ ದೊಡ್ಡ ಮಟ್ಟದ ಹುದ್ದೆ ಲಭಿಸಬೇಕು ಎಂದರು.

ಬ್ರ್ಯಾಂಡ್ ಬೆಂಗಳೂರಿನ ಹರಿಕಾರರಾಗಿ ಸರ್ವಾಂಗೀಣ ಅಭಿವೃದ್ಧಿಗಾಗಿ ತಮ್ಮ ಪರಿಕಲ್ಪನೆ ಮೂಲಕ ಹೊಸ ರೂಪ ನೀಡಲು ಪಣತೊಟ್ಟಿದ್ದಾರೆ. ಜಲ ಸಂಪನ್ಮೂಲ ಸಚಿವರಾಗಿ ಕಳೆದ ಮೂರು ವರ್ಷಗಳಿಂದ ರಾಜ್ಯದ ರೈತರಿಗೆ ನೀರಾವರಿ ಪೂರೈಕೆಯಲ್ಲಿ ಅವರ ಪಾತ್ರ ಬಹಳ ದೊಡ್ಡದಿದೆ ಎಂದರು.

ಜೀವನದಿ ಕಾವೇರಿ ಮಾತೆಗೆ ನಮನ ಸಲ್ಲಿಸಲು ಕಾವೇರಿ ಆರತಿ ಆರಂಭಿಸಿದ್ದಾರೆ. ಮುಂದೆ ಮುಖ್ಯಮಂತ್ರಿಯಾಗಿ ಇನ್ನು ಹತ್ತು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವಂತಾಗಲಿ ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯೆ ಜಯಮ್ಮ, ಮುಖಂಡರಾದದ ಶಿವಕುಮಾರ್( ಶಿವಪ್ಪ) ಲಿಂಗಪಟ್ಟಣದ ಮಂಜು, ಬಿ,ಗಂಗಾಧರ, ಲಿಯಕತ್ ಆಲಿ(ಪಿಳ್ಳು), ಮರಿಸ್ವಾಮಿ, ಎಂ.ಕೆ. ಮಾಹದೇವ, ಪುಟ್ಟೇಗೌಡ, ಚಂದನ್, ರವೀಶ, ಚೇತನ್ ಬಾಬು, ಕೆ.ಪಿ.ಕಂಠಿ, ಶಿವಮಾದೇಗೌಡ, ಎಚ್.ಕೆ.ತೇಜ್ ಕುಮಾರ್, (ಶ್ಯಾಮ್), ಸೇರಿದಂತೆ ಇತರರು ಇದ್ದರು.

ಡಿಸಿಎಂ ಡಿಕೆಶಿ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ವಿತರಣೆ

ಪಾಂಡವಪುರ:ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ನೇತೃತ್ವದಲ್ಲಿ ಆಗಮಿಸಿದ ಕಾರ್ಯಕರ್ತರು, ಅಭಿಮಾನಿಗಳು ಆಸ್ಪತ್ರೆ ಒಳ ಹಾಗೂ ಹೊರ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಶ್ರೀಕಾಂತ್ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ವಿತರಿಸಿದ್ದೇವೆ. ಡಿಕೆಶಿ ಕಾಂಗ್ರೆಸ್ ಪಕ್ಷದ ಕಟ್ಟಾಳು, ಪಕ್ಷ ಸಂಘಟನೆಯಲ್ಲಿ ಚತುರತೆ ಹೊಂದಿದ್ದಾರೆ. ಇವರ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಒಳ್ಳೆಯ ಆಡಳಿತ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಡಿಕೆಶಿ ರಾಜ್ಯದ ಮುಖ್ಯಮಂತ್ರಿಯಾಗುವಂತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ನೀಡಲೆಂದು ಶುಭಕೋರಿದರು.

ಈ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ಭರತ್‌ಪಟೇಲ್, ಚಂದ್ರಶೇಖರ್, ಮುಖಂಡರಾದ ಕೆ.ಕುಬೇರ, ಪಟೇಲ್ ರಮೇಶ್,ಸಿದ್ದಲಿಂಗಯ್ಯ, ಉಮಾಶಂಕರ್, ಮೋಹನ್, ಪಾಪು, ಕೃಷ್ಣೇಗೌಡ, ಬಿ.ಜೆ.ಸ್ವಾಮಿ, ದೊಡ್ಡವೆಂಕಟಯ್ಯ, ಚಿಕ್ಕಣ್ಣ, ಶಿವರಾಮು, ಹೊನ್ನರಾಜು ಸೇರಿದಂತೆ ಹಲವರು ಹಾಜರಿದ್ದರು.