ಕನ್ನಡಪ್ರಭ ವಾರ್ತೆ ಇಂಡಿ

ದಿ.ಪ್ರಭಾಕರ ಬಗಲಿ ಅವರಲ್ಲಿ ಕ್ರೀಯಾಶೀಲತೆ ಇದ್ದಿದ್ದಕ್ಕಾಗಿ ಇಂದು ಶಿಕ್ಷಣ ಸಂಸ್ಥೆ ಬೆಳವಣಿಗೆ ಹೊಂದಲು ಸಾಧ್ಯವಾಗಿದೆ. ಸೇವಾ ಮನೋಭಾವನೆಯಿಂದ ಕೆಲಸ ಮಾಡಿದಾಗ ಮಾತ್ರ ಸಂಸ್ಥೆಗಳ ಬೆಳವಣಿಗೆ ಹೊಂದಲು ಸಾಧ್ಯ ಎಂಬುದಕ್ಕೆ ದಿ.ಪ್ರಭಾಕರ ಬಗಲಿ ಅವರು ಸಾಕ್ಷಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ದಿ.ಪ್ರಭಾಕರ ಬಗಲಿ ಪ್ರಥಮ ಪುಣ್ಯಸ್ಮರಣೆಯ ನಿಮಿತ್ತ ಜ್ಞಾನ ಪ್ರಭೆ ದಿ.ಪ್ರಭಾಕರ ಬಗಲಿ ಅವರ ಬದುಕು ಹಾಗೂ ಸಾಧನೆಯ ನೈಜ್ಯ ಚಿತ್ರಣದ ಸಂಸ್ಮರಣಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ದಿ.ಪ್ರಭಾಕರ ಬಗಲಿಯವರು ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ ಸಾಮಾಜಿಕ ಕಳಕಳಿ, ರಾಜಕೀಯ ನಾಯಕತ್ವ, ಆಧ್ಯಾತ್ಮಿಕ, ಧಾರ್ಮಿಕ ಮನೋಭಾವ ಹೊಂದಿದವರಾಗಿದ್ದರು. ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ದಿ.ಪ್ರಭಾಕರ ಬಗಲಿ ಅವರ ನಿಸ್ವಾರ್ಥ ಸೇವೆ ಅಪಾರವಾಗಿದೆ. ಅವರ ಬದುಕು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಮಾಜಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಮಾತನಾಡಿ, ದಿ.ಪ್ರಭಾಕರ ಬಗಲಿ ಅವರು ಇಂದು ನಮ್ಮ ಮಧ್ಯೆ ಇಲ್ಲವಾದರೂ ಅವರು ಮಾಡಿದ ಶಿಕ್ಷಣ ಕ್ಷೇತ್ರದಲ್ಲಿನ ಕಾರ್ಯ ಅವಿಸ್ಮರಣಿಯವಾಗಿದೆ. ಅವರ ಸೇವೆ ಸಮಾಜ ಸೇವೆಗೆ ಪ್ರೇರಣೆಯಾಗಿದೆ ಎಂದ ಅವರು, ದಿ.ಪ್ರಭಾಕರ ಬಗಲಿ ಅವರದ್ದು ಸೃಜನಶೀಲ ವ್ಯಕ್ತಿತ್ವ, ಎಲ್ಲರನ್ನೂ ಗೌರವಿಸುವ ಹೃದಯ ಶ್ರೀಮಂತಿಕೆ ಹೊಂದಿದವರಾಗಿದ್ದರು ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ನೀಲಕಂಠಗೌಡ ಪಾಟೀಲ ಮಾತನಾಡಿ, ಶಿಕ್ಷಣ ಸಂಸ್ಥೆ ಬೆಳೆಸುವಲ್ಲಿ ದಿ.ಪ್ರಭಾಕರ ಬಗಲಿ ಅವರು ಕಾರ್ಯ ಮರೆಯಲಾರದಂತದ್ದು, ಹಿಂದುಳಿದ ಗಡಿ ತಾಲೂಕಿನಲ್ಲಿ ಬಡ ಮಕ್ಕಳ ಕಲಿಕೆಗೆ ಅನುಕೂಲವಾಗಲು ಇನ್ನೂ ಹೆಚ್ಚಿನ ಕಾಲೇಜುಗಳನ್ನು ತರಲು ಆಸೆ ಇಟ್ಟುಕೊಂಡಿದ್ದರು. ದಿ.ಪ್ರಭಾಕರ ಬಗಲಿ ಅವರು ಕಂಡ ಕನಸು, ಅವರ ದಾರಿಯಲ್ಲಿ ಸಾಗಿ ನನಸು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ಜ್ಞಾನ ಪ್ರಭೆ ಸಂಸ್ಮರಣಾ ಗ್ರಂಥ ಹೊರತರಲು ಶ್ರಮಿಸಿದ ಎಲ್ಲರಿಗೂ ಅಭಿನಂಧಿಸುವುದಾಗಿ ಹೇಳಿದರು.

ಸಂಸ್ಮರಣಾ ಗ್ರಂಥದ ಪ್ರಧಾನ ಸಂಪಾದಕ ರಾಘವೇಂದ್ರ ಕುಲಕರ್ಣಿ, ಸಂಸ್ಥೆಯ ಉಪಾಧ್ಯಕ್ಷ ಡಾ.ಆದರ್ಶ ಬಗಲಿ ಮಾತನಾಡಿದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ತಡವಲಗಾ ಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಯರನಾಳದ ಸಂಗನಬಸವ ಮಹಾಶಿವಯೋಗಿಗಳು, ದಿ.ಪ್ರಭಾಕರ ಬಗಲಿ ಅವರದ್ದು ಹೂವಿನಂತ ಮನಸ್ಸು ಆಗಿತ್ತು. ಪುಸ್ತಕ ಜ್ಞಾನದ ಬೆಳಕಿಂಡಿ, ಪುಸ್ತಕ ಜಗತ್ತನ್ನು ಆಳುತ್ತದೆ. ಅವರ ಸಂಸ್ಮರಣೆಗಾಗಿ ಗ್ರಂಥ ಲೋಕಾರ್ಪಣೆ ಮಾಡುತ್ತಿರುವುದು ಸಂತಸದ ಸಂಗತಿ. ಬದುಕಿನಲ್ಲಿ ಸಮಾಜಸೇವೆ ಮಾಡಿ ಜನಮಾನಸದಲ್ಲಿ ಉಳಿದು ಹೋದವರು ದಿ.ಪ್ರಭಾಕರ ಬಗಲಿ. ಕವಿಗಳನ್ನು, ಸಾಹಿತಿಗಳನ್ನು, ಶರಣ, ಸಂತರನ್ನು ನೀಡಿದ ಇಂಡಿ ತಾಲೂಕಿನಲ್ಲಿ ಅಕ್ಷರ ಜ್ಞಾನದ ದೀವಿಗೆ ಹಚ್ಚಿದ ದಿ.ಪ್ರಭಾಕರ ಬಗಲಿ ಅವರದ್ದು ಬದುಕಿನ ಸಾಧನೆಯ ಮೈಲುಗಲ್ಲು ಎಂದು ಹೇಳಿದರು.

ಗೋಳಸಾರ ಮಠದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ಮಹೇಶ ಅಥಣಿ, ದಯಾಸಾಗರ ಪಾಟೀಲ, ಎಂ.ಎಸ್‌. ರುದ್ರಗೌಡರ, ಚಂದ್ರಶೇಖರ ಪಾಟೀಲ, ಡಾ.ದೀಪಕ ದೋಶಿ, ಡಾ.ನಿತೀನ ಟಿಕಾರೆ, ಡಿ.ಆರ್‌. ಶಹಾ, ಕರೂರ, ಪ್ರಭುಗೌಡ ಪಾಟೀಲ, ವೆಂಕಟೇಶ ಕುಲಕರ್ಣಿ, ಜಟ್ಟೆಪ್ಪ ರವಳಿ, ಸತೀಶ್ಚಂದ್ರ ಕುಲಕರ್ಣಿ, ಎಂ.ಆರ್‌. ಪಾಟೀಲ, ರವಿ ಕಲ್ಲೂರ, ಸಿದ್ದುಗೌಡ ಪಾಟೀಲ, ಶಂಭುಲಿಂಗ ಕರ್ಪೂರಮಠ, ಜಗದೀಶ ಕ್ಷತ್ರಿ, ಮಂಜುನಾಥ ವಂದಾಲ, ಬಸವರಾಜ ತಾಂಬೆ,ಸಾತಪ್ಪ ತೆನ್ನಿಹಳ್ಳಿ, ಭೀಮನಗೌಡ ಪಾಟೀಲ, ಸಚಿನಕುಮಾರ ಗಾಂಧಿ, ವರ್ದನ ದೋಶಿ, ಆರ್‌.ವಿ. ದೇಶಪಾಂಡೆ, ಬಾಪುಗೌಡ ಪಾಟೀಲ, ಚಿದಾನಂದ ಕೂಳೆಕುಮಟಗಿ, ರಾಜಕುಮಾರ ಪಾಟೀಲ, ಶಾಂತಪ್ಪ ಬಿರಾದಾರ, ಬಾಬುಗೌಡ ಪಾಟೀಲ, ರವಿಗೌಡ ಪಾಟೀಲ, ರಾಜು ಕುಲಕರ್ಣಿ ಸೇರಿ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.