ಸದಾ ಮನಸ್ಸಿನಲ್ಲಿ ಉಳಿಯುವ ಕವಿ ದ.ರಾ ಬೇಂದ್ರ: ಮಮತೇಶ್

| Published : Aug 10 2024, 01:31 AM IST

ಸಾರಾಂಶ

ತರೀಕೆರೆ, ಕವಿ ದ.ರಾ.ಬೇಂದ್ರ ದೇಶೀಯ ಕವಿಗಳು. ಗ್ರಾಮೀಣ ಶೈಲಿಯಲ್ಲೇ ಕವನಗಳನ್ನು ರಚಿಸಿದ್ದ ಅವರಿಂದ ಪ್ರೀತಿ ಪ್ರೇಮ ಕಲಿಯಬೇಕು ಎಂದು ಕಡೂರು ಸರ್ಕಾರಿ ಪದವಿ ಪೂರ್ವ ಕಾಲೇಜು ನಿವೃತ್ತ ಉಪನ್ಯಾಸಕರು ಸಾಹಿತಿ ಮಮತೇಶ್ ಎಚ್.ಒ. ಹೇಳಿದ್ದಾರೆ.

- ಯಶೋದಮ್ಮ ನಾಗತಿ ಪ್ರೌಢಶಾಲೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ತರೀಕೆರೆ

ಕವಿ ದ.ರಾ.ಬೇಂದ್ರ ದೇಶೀಯ ಕವಿಗಳು. ಗ್ರಾಮೀಣ ಶೈಲಿಯಲ್ಲೇ ಕವನಗಳನ್ನು ರಚಿಸಿದ್ದ ಅವರಿಂದ ಪ್ರೀತಿ ಪ್ರೇಮ ಕಲಿಯಬೇಕು ಎಂದು ಕಡೂರು ಸರ್ಕಾರಿ ಪದವಿ ಪೂರ್ವ ಕಾಲೇಜು ನಿವೃತ್ತ ಉಪನ್ಯಾಸಕರು ಸಾಹಿತಿ ಮಮತೇಶ್ ಎಚ್.ಒ. ಹೇಳಿದ್ದಾರೆ.

ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಪಟ್ಟಣದ ಯಶೋಮ್ಮ ನಾಗತಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ಕವಿ ದ.ರಾ.ಬೇಂದ್ರೆ ಅವರ ಬದುಕು ಮತ್ತು ಬರಹ ಕುರಿತು ಉಪನ್ಯಾಸ ನೀಡಿ,ಅವರ ಕಣ ಕಣದಲ್ಲಿ ಕನ್ನಡ ಇತ್ತು. ಕವಿ ದ.ರಾ.ಬೇಂದ್ರೆ ಅವರು ಸದಾ ಮನಸ್ಸಿನಲ್ಲಿ ಉಳಿಯುವವರು ಎಂದು ಹೇಳಿದರು.

ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಜೀವನದುದ್ದಕ್ಕೂ ಕಷ್ಟ ಅನುಭವಿಸಿದವರು, ಏಳು ಬೀಳುಗಳನ್ನು ಕಂಡಿದ್ದರು. ಹಸಿವಿನ ಬಗ್ಗೆ ಬೇಂದ್ರೆ ಅವರ ಬಾಯಲ್ಲಿ ಕೇಳಬೇಕು. ಬೇಂದ್ರೆ ಅವರು ಬೆಂದು ಬೆಂದು ಬೇಂದ್ರೆ ಆದರು, ಆಸಾಧ್ಯ ಎಂಬ ಶಬ್ದವನ್ನು ತೆಗೆದುಹಾಕಬೇಕು, ಬದುಕಿನ ಮೂಲ ದ್ರವ್ಯ ಪ್ರೀತಿ ಆಗಿದೆ ಎಂದು ಹೇಳುತ್ತಿದ್ದ ಕವಿ ದ.ರಾ.ಬೇಂದ್ರೆ ಕಾವ್ಯ ಗಾರುಡಿಗರು. ನಾಕುತಂತಿ ಮಹಾ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು ಎಂದರು.

ದ.ರಾ.ಬೇಂದ್ರೆ ಅವರು ಸಾರ್ವಕಾಲಿಕ ಕವಿಗಳು, ನಾಟಕಕಾರರು, ವಿಮರ್ಷಕರು ಆಗಿದ್ದಾರೆ ಎಂದು ಹೇಳಿದರು.

ಪುರಸಭೆ ಸದಸ್ಯ, ಸಾಹಿತಿ ಟಿ.ದಾದಾಪೀರ್ ಮಾತನಾಡಿ ಶಾಲೆಗಳಲ್ಲಿ ಸಾಹಿತ್ಯ ಸಂಭ್ರಮದಂತಹ ಕಾರ್ಯ ಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಮಾತನಾಡಿ ಶ್ರಾವಣ ಸಾಹಿತ್ಯ ಸಂಭ್ರಮ ಅರ್ಥಗರ್ಭಿತ, ಕನಸು ಬಿತ್ತುವ ಕಾರ್ಯಕ್ರಮ. ಅಧ್ಯಯನ ಅಗತ್ಯ. ನಿರಂತರ ಓದಿನಿಂದ ಬರಹದಲ್ಲಿ ಆಸಕ್ತಿ ಮೂಡಬೇಕು. ಬದುಕನ್ನು ಕಟ್ಟುವ ಶಕ್ತಿ ಸಾಹಿತ್ಯಕ್ಕಿದೆ. ತಾಂತ್ರಿಕತೆ ಬಳಸಿಕೊಂಡು ಕನ್ನಡ ಉಳಿಸಿ ಬೆಳೆಸಬೇಕು, ಕನ್ನಡವನ್ನು ಕಲಿತವರಿಗೆ ಖಂಡಿತ ಉದ್ಯೋಗ ದೊರೆಯುತ್ತದೆ ಎಂದರು.

ಪರಿಸರ ಪ್ರೇಮಿ ಮುಗುಳಿ ಮಂಜಯ್ಯ, ಶಿಕ್ಷಣ ಸಂಯೋಜಕ ರಾಘವೇಂದ್ರ, ಶಾಲೆ ಮುಖ್ಯೋಪಾಧ್ಯಾಯ ವೀರಪ್ಪ, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಕನ್ನಡ ಗೀತೆ ಹಾಡಿದರು. ಕಸಾಪ ಹಿರಿಯ ಸದಸ್ಯ ಕೆ.ಎಸ್.ಶಿವಣ್ಣ, ಬಿ.ಆರ್.ಸಿ.ಶರತ್, ದೇವರಾಜ್ ಸಹ್ಯಾದ್ರಿ, ಟಿ.ಯೋಗೀಶ್, ಶಿಕ್ಷಕ ಕುಮಾರ ನಾಯಕ್ , ಜಯದೇವ ನಾಯಕ್ , ಶಿಕ್ಷಕಿ ಶಾಂತ ಮತ್ತಿತರರು ಭಾಗವಹಿಸಿದ್ದರು.

8ಕೆಟಿಆರ್.ಕೆ.8ಃ

ತರೀಕೆರೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ

ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಕಡೂರು ಸರ್ಕಾರಿ ಪದವಿ ಪೂರ್ವ ಕಾಲೇಜು ನಿವೃತ್ತ ಉಪನ್ಯಾಸಕ, ಸಾಹಿತಿ

ಮಮತೇಶ್ ಎಚ್.ಒ. ಪುರಸಭಾ ಸದಸ್ಯ ಟಿ.ದಾದಾಪೀರ್, ಲೇಖಕ ತ.ಮ.ದೇವಾನಂದ್, ತಾ.ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಮತ್ತಿತರರು ಭಾಗವಹಿಸಿದ್ದರು.