ಕನ್ನಡಪ್ರಭ ವಾರ್ತೆ ಮೈಸೂರುಮೂರು ದಶಕಗಳ ಕಾಲ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಸ್ಥಗಿತಗೊಂಡಿದ್ದ ಶ್ರೀ ಮುರುಡ ಬಸವೇಶ್ವರ ಕ್ಷೇಮಾಭಿವೃದ್ಧಿ ಸಂಘವನ್ನು ಮರು ಸ್ಥಾಪಿಸಲಾಗಿದೆ.ಡಿ ಸಾಲುಂಡಿ, ದೊಡ್ಡಹುಂಡಿ ಕೆರೆಹುಂಡಿ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಸಂಘಕ್ಕೆ 1993 ರಲ್ಲಿ ರಾಜ್ಯ ಪ್ರಶಸ್ತಿ ಬಂದಿತ್ತು.ಪ್ರಸುತ್ತ ಈ ಸಂಘವನ್ನು ಮರುಸ್ಥಾಪಿಸಿದ್ದು, ಗೌರವಾಧ್ಯಕ್ಷರಾಗಿ ಪಿ. ಬಸವರಾಜು, ಅಧ್ಯಕ್ಷರಾಗಿ ಬಿ. ಬಸಪ್ಪ, ಉಪಾಧ್ಯಕ್ಷರಾಗಿ ಚಂದ್ರ ನಾಯಕ, ಕಾರ್ಯಾಧ್ಯಕ್ಷರಾಗಿ ಅಶ್ವಥ್ ನಾರಾಯಣ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಚಿಕ್ಕಣ್ಣ, ಖಜಾಂಜಿಯಾಗಿ ಶಿವರಾಜೇಗೌಡ, ಸಂಘಟನಾ ಕಾರ್ಯದರ್ಶಿಯಾಗಿ ವೈ. ಬಸವರಾಜು, ಕ್ರೀಡಾ ಕಾರ್ಯದರ್ಶಿಯಾಗಿ ಕೆಂಪಚ್ಚೆಗೌಡ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎಸ್.ಕೆ. ಮಹೇಶ್, ಸಂಚಾಲಕರಾಗಿ ಸಿ. ಚಿಕ್ಕಸ್ವಾಮಿ, ಮಾರ್ಗದರ್ಶಕರಾಗಿ ಚೆಲುವರಾಜಾಚಾರಿ, ಬಸವಣ್ಣ, ಬಸವರಾಜಪ್ಪ, ಡಿ.ಎಸ್. ಬಸವರಾಜು, ಸಹಾಯಕ ಕಾರ್ಯದರ್ಶಿಯಾಗಿ ಭಾಸ್ಕರ್, ಮಾಸ್ತಿ, ಕೆ. ಬಸಪ್ಪ, ಕಾಳಿಂಗೇಗೌಡ, ಬೀರೇಗೌಡ, ಶಂಭುಲಿಂಗ ನಾಯಕ ಅವರು ಆಯ್ಕೆಯಾಗಿದ್ದಾರೆ.ಸಭೆಯಲ್ಲಿ ಕೆ. ಬಸಪ್ಪ, ಲೈಬ್ರರಿ ಬಸವರಾಜ್, ಬಿಲ್ ಕಲೆಕ್ಟರ್ ನಾಗರಾಜು ಹಾಗೂ 50ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು. ಪದಾಧಿಕಾರಿಗಳ ಆಯ್ಕೆಯನ್ನು ಬಸವರಾಜಪ್ಪ ಅನುಮೋದಿಸಿದರು. ಎಲ್ಲರೂ ಕೈ ಮೇಲಕ್ಕೆ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.
ಶ್ರೀ ಮುರುಡ ಬಸವೇಶ್ವರ ಕ್ಷೇಮಾಭಿವೃದ್ಧಿ ಸಂಘ ಮತ್ತೆ ಅಸ್ತಿತ್ವಕ್ಕೆ
ಪ್ರಸುತ್ತ ಈ ಸಂಘವನ್ನು ಮರುಸ್ಥಾಪಿಸಿದ್ದು, ಗೌರವಾಧ್ಯಕ್ಷರಾಗಿ ಪಿ. ಬಸವರಾಜು, ಅಧ್ಯಕ್ಷರಾಗಿ ಬಿ. ಬಸಪ್ಪ, ಉಪಾಧ್ಯಕ್ಷರಾಗಿ ಚಂದ್ರ ನಾಯಕ, ಕಾರ್ಯಾಧ್ಯಕ್ಷರಾಗಿ ಅಶ್ವಥ್ ನಾರಾಯಣ,
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.