ಸಚಿವ ಡಿ.ಸುಧಾಕರ ಜಾತಿ, ಮತ, ಪಂಥವನ್ನು ಮೀರಿ ಬೆಳೆದ ಏಕೈಕ ರಾಜಕಾರಣಿಯಾಗಿದ್ದರು ಎಂದು ಮಾಜಿ ಸಚಿವ ‌ವೀರಕುಮಾರ ಪಾಟೀಲ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಚಿವ ಡಿ.ಸುಧಾಕರ ಜಾತಿ, ಮತ, ಪಂಥವನ್ನು ಮೀರಿ ಬೆಳೆದ ಏಕೈಕ ರಾಜಕಾರಣಿಯಾಗಿದ್ದರು ಎಂದು ಮಾಜಿ ಸಚಿವ ‌ವೀರಕುಮಾರ ಪಾಟೀಲ ಬಣ್ಣಿಸಿದರು.

ನಿಪ್ಪಾಣಿ ನಗರದ ಅಶೋಕ ನಗರದಲ್ಲಿ ಯುವ ಮುಖಂಡ ಉತ್ತಮ‌ ಪಾಟೀಲ ಜನ ಸಂಪರ್ಕ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಚಿವ ಡಿ.ಸುಧಾಕರ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಚಿವ ಸುಧಾಕರ ಕ್ಷೇತ್ರದಲ್ಲಿ ಕೇವಲ 118 ಜೈನ್ ಮತದಾರರಿದ್ದಾರೆ. ಆದರೆ, ಅವರು 18 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಇದು ಅವರ ಜನಪ್ರಿಯತೆ ಎತ್ತಿ ತೋರಿಸುತ್ತದೆ ಎಂದು ಸ್ಮರಿಸಿದರು.

ಯುವ ಮುಖಂಡ ಉತ್ತಮ ಪಾಟೀಲ ‌ಮಾತನಾಡಿ, ಸ್ನೇಹ ಜೀವಿಯಾಗಿದ್ದ ಸುಧಾಕರ ಅಲ್ಪಸಂಖ್ಯಾತ ಜೈನ್ ಸಮಾಜದಲ್ಲಿ ಹುಟ್ಟಿ ಬಹುಸಂಖ್ಯಾತರ ನೆಚ್ಚಿನ ಲೀಡರ್ ಆಗಿದ್ದವರು. ಜನಪರ ಕಾಳಜಿ, ಎಲ್ಲರನ್ನು ಒಟ್ಟಾಗಿ ಕಾಣುವ ಅವರ ಗುಣ ನಮಗೆಲ್ಲ ಮಾದರಿಯಾಗಿತ್ತದೆ ಎಂದು ತಿಳಿಸಿದರು.ಅರಿಹಂತ ಉದ್ಯೋಗ ಸಮೂಹ ದಕ್ಷಿಣ ಭಾರತ ಜೈನ ಮಹಾಸಭಾ ಮತ್ತು ನಿಪ್ಪಾಣಿ ಕ್ಷೇತ್ರದ ಮತದಾರರ ಪರವಾಗಿ ಶ್ರದ್ಧಾಂಜಲಿ ಅರ್ಪಿಸಿದರು.ಹಾಲ್ ಶುಗರ್ ಮಾಜಿ ಉಪಾಧ್ಯಕ್ಷ ರಾಜು ಪಾಟೀಲ, ಸ್ಥವನಿಧಿ ಜೈನ ಕ್ಷೇತ್ರದ ಅಧ್ಯಕ್ಷ ಆರ್.ಬಿ.ಖೋತ, ನಗರ ಮಾಜಿ ಸೇವಕ ರವಿ ಶಿಂಧೆ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಎಮಿನೆಂಟ್‌ ಇಂಜನಿಯರ್‌ ಅವಾರ್ಡ್‌-2025 ಪುರಸ್ಕೃತ, ನಿವೃತ್ತ ಇಂಜನೀಯರ್‌ ಸುನೀಲಕುಮಾರ ಬಳೋಲ, ದಿಲೀಪ ಪಠಾಡೆ, ತಾತ್ಯಾ ನಾಯಕ, ಪ್ರದೀಪ ಪಾಟೀಲ, ಸೂರ್ಯವಂಶಿ ಗುರುಗಳು, ಸುಂದರ ಪಾಟೀಲ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಕನ್ನಡ ನಾಡು ಒಬ್ಬ ಒಳ್ಳೆಯ ಅನುಭವಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಸಚಿವ ಡಿ.ಸುಧಾಕರವರ ಸಿದ್ಧಾಂತವನ್ನು ಅನುಸರಿಸಿ ಜನಸೇವೆ ಮಾಡಿದರೆ ಅದೇ ಅವರಿಗೆ ನಿಜವಾದ ಶ್ರದ್ಧಾಂಜಲಿ.

-ವೀರಕುಮಾರ ಪಾಟೀಲ,
ಮಾಜಿ ಸಚಿವರು.ಸಚಿವ ಡಿ.ಸುಧಾಕರ ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿಯಾಗಿದ್ದು, ನಿಪ್ಪಾಣಿ ಭಾಗದ ಅಭಿವೃದ್ಧಿಗೆ ಹೆಚ್ಚು ಒಲವು ತೋರಿದ್ದರು.

-ಉತ್ತಮ ಪಾಟೀಲ,

ಯುವ ಮುಖಂಡರು.