14ಕ್ಕೆ ದಾ-ಹ ಅರ್ಬನ್ ಬ್ಯಾಂಕ್‌ ಸುವರ್ಣ ಮಹೋತ್ಸವ

| Published : Oct 11 2024, 11:50 PM IST

ಸಾರಾಂಶ

ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ನಿಯಮಿತದ ಸುವರ್ಣ ಮಹೋತ್ಸವ ಸಮಾರಂಭ ಅ.14ರಂದು ನಗರದ ತ್ರಿಶೂಲ್ ಕಲಾ ಭವನದಲ್ಲಿ ನಡೆಯಲಿದೆ ಎಂದು ಬ್ಯಾಂಕ್‌ ಅಧ್ಯಕ್ಷ, ಸಹಕಾರಿ ದುರೀಣ ಎನ್.ಎ. ಮುರುಗೇಶ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ನಿಯಮಿತದ ಸುವರ್ಣ ಮಹೋತ್ಸವ ಸಮಾರಂಭ ಅ.14ರಂದು ನಗರದ ತ್ರಿಶೂಲ್ ಕಲಾ ಭವನದಲ್ಲಿ ನಡೆಯಲಿದೆ ಎಂದು ಬ್ಯಾಂಕ್‌ ಅಧ್ಯಕ್ಷ, ಸಹಕಾರಿ ದುರೀಣ ಎನ್.ಎ. ಮುರುಗೇಶ ತಿಳಿಸಿದರು.

ನಗರದ ದಾ-ಹ ಅರ್ಬನ್ ಕೋ-ಆಪ್ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಉಜ್ಜಯಿನಿ ಮಹಾ ಪೀಠದ ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಬ್ಯಾಂಕ್ ಅಧ್ಯಕ್ಷ ಎನ್.ಎಂ. ಮುರುಗೇಶ ಅಧ್ಯಕ್ಷತೆಯಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಮಾರಂಭ ಉದ್ಘಾಟಿಸುವರು ಎಂದು ತಿಳಿಸಿದರು. ಬ್ಯಾಂಕ್‌ನ ಸ್ಮರಣ ಸಂಚಿಕೆ ಹೊನ್ನ ಮುಕುಟವನ್ನು ಕಾನೂನು ಸಚಿವ ಎಚ್.ಕೆ. ಪಾಟೀಲ ಬಿಡುಗಡೆ ಮಾಡುವರು. ಸಹಕಾರ ಸಚಿವ ಕೆ.ಎನ್. ರಾಜಣ್ಣ, ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ, ಕೇಂದ್ರ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ,

ವಿಪ ಸದಸ್ಯ ಕೆ.ಎಸ್. ನವೀನ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ, ಎಸ್.ವಿ. ರಾಮಚಂದ್ರ, ಡಾ. ಎ.ಎಚ್ ಶಿವಯೋಗಿಸ್ವಾಮಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಸಹಕಾರ ಸಂಘಗಳ ಉಪ ನಿಬಂಧಕ ಟಿ.ಮಧು ಶ್ರೀನಿವಾಸ, ಹಿರಿಯ ಪತ್ರಕರ್ತ ಬಾ.ಮ.ಬಸವರಾಜಯ್ಯ ಭಾಗವಹಿಸುವರು ಎಂದರು.

1972-73ರಲ್ಲಿ ಸ್ಥಾಪನೆಯಾದ ಬ್ಯಾಂಕ್ ಅದೇ ಸಾಲಿನಲ್ಲಿ ₹274 ಲಾಭ ಸಂಪಾದಿಸಿತ್ತು. 2023-24ರ ಸಾಲಿಗೆ ₹5.86 ಕೋಟಿ ಲಾಭ ಸಂಪಾದಿಸುವತ್ತ ಮುನ್ನಡೆದಿದೆ. ಇದರಿಂದ ಬ್ಯಾಂಕ್‌ನ ಪ್ರಗತಿ ಅಭಿವೃದ್ಧಿಯ ಹಾದಿ ಆರೋಗ್ಯ ಪೂರ್ಣವಾಗಿದೆಯೆಂಬುದು ಸ್ಪಷ್ಟವಾಗಿದೆ. 11,396 ಸದಸ್ಯರ ಬಲ ಹೊಂದಿರುವ ಬ್ಯಾಂಕ್‌, ಜನಪ್ರಿಯತೆ, ವಿಶ್ವಾಸ, ಸಹಕಾರದ ಪ್ರತಿಬಿಂಬವಾಗಿದೆ ಎಂದು ವಿವರಿಸಿದರು.

1972ರಲ್ಲಿ ಸಹಕಾರಿ ಬ್ಯಾಂಕಿಂಗ್‌, ಸಹಕಾರ ಸಂಘ-ಸಂಸ್ಥೆಗಳ ಬಗ್ಗೆ ಅಚಲ ನಂಬಿಕೆ, ವಿಶ್ವಾಸ ಇತ್ಯಾದಿಗಳು ಬೆಳೆದಿದ್ದ ಕಾಲಘಟ್ಟದಲ್ಲಿ ಸ್ಥಾಪನೆಯಾದ ಬ್ಯಾಂಕ್ ಇಂದು ಪ್ರತಿಷ್ಟಿತ ಸಹಕಾರಿ ಬ್ಯಾಂಕ್‌ಗಳ ಸಾಲಿನಲ್ಲಿ ನಿಂತಿದೆ. ಆಗ ಅಸ್ತಿತ್ವದಲ್ಲಿದ್ದ ಕೆಲವು ಬ್ಯಾಂಕ್‌ಗಳು ವ್ಯಾಪಾರಿಗಳ ಬ್ಯಾಂಕ್‌ಗಳಾಗಿದ್ದವು ಎಂದು ತಿಳಿಸಿದರು.

ಕೇವಲ ₹81,000 ಶೇರು ಬಂಡವಾಳದೊಂದಿಗೆ 1972-73ರಲ್ಲಿ ಸ್ಥಾಪನೆಯಾದ ಬ್ಯಾಂಕ್‌ ಮಾರ್ಚ್‌ 2024ರ ಅಂತ್ಯಕ್ಕೆ ₹320.59 ಕೋಟಿ ಠೇವಣಿ, ₹60.25 ಕೋಟಿ ಸ್ವಂತ ಬಂಡವಾಳದೊಂದಿಗೆ ₹287.61 ಕೋಟಿ ಸಾಲ ನೀಡಿದೆ. ಒಟ್ಟು ನಿವ್ವಳ ₹5.86 ಕೋಟಿ ಲಾಭ ಗಳಿಸಿದೆ. ಸಾಲದ ಅನುತ್ಪಾದಿತ ಆಸ್ತಿ ಪ್ರಮಾಣ ಶೇ.0.38 ಇದೆ. ಇದು ಬ್ಯಾಂಕ್‌ನ ಪ್ರಗತಿ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.

ಮಾಹಿತಿ ತಂತ್ರಜ್ಞಾನ ಅಳವಡಿಕೆಯಲ್ಲಿ ತಮ್ಮ ಬ್ಯಾಂಕ್ ಸದಾ ಮುಂದಿದೆ. ಡಿಜಿಟಲ್ ಪೇಮೆಂಟ್ ಮಾಹಿತಿ, ಯುಪಿಐ ಫ್ಲಾಟ್ ಫಾರಂ ಜಾರಿಗೆ ತಂದ ದಾವಣಗೆರೆಯ ಪ್ರಥಮ ಸಹಕಾರಿ ಬ್ಯಾಂಕ್ ನಮ್ಮದು. ಮೊಬೈಲ್ ಬ್ಯಾಂಕಿಂಗ್‌, ಎನ್‌ಎಸಿಎಚ್‌, ಬಿಬಿಪಿಎಸ್‌, ಐಎಂಪಿಎಸ್‌, ಎಟಿಎಂ, ಪಿಓಎಸ್, ಇ-ಕಾಮರ್ಸ್‌ ಮತ್ತಿತರೆ ಡಿಜಿಟಲ್ ಸೇವೆ ಗ್ರಾಹಕರಿಗೆ ನೀಡುತ್ತಿದೆ ಎಂದರು.

7 ವರ್ಷದಲ್ಲಿ ಒಟ್ಟು 734 ಸದಸ್ಯರು ಮೃತಪಟ್ಟಿದ್ದು, ವಾರಸುದಾರರಿಗೆ ಸದಸ್ಯರ ಮರಣೋತ್ತರ ನಿಧಿಯಿಂದ ₹70,19,700 ನೀಡಲಾಗಿದೆ. ಬ್ಯಾಂಕ್‌ನ ಎಲ್ಲಾ ಸದಸ್ಯರಿಗೆ 1 ಲಕ್ಷದವರೆಗೆ ಅಪಘಾತ ವಿಮೆ ಮಾಡಿಸಿದ್ದು, 7 ವರ್ಷದಲ್ಲಿ 6 ಸದಸ್ಯರ ವಾರಸುದಾರರಿಗೆ ₹6 ಲಕ್ಷ ವಿಮಾ ಹಣ ನೀಡಲಾಗಿದೆ ಎಂದು ತಿಳಿಸಿದರು.

ಬ್ಯಾಂಕ್‌ನ ಆಡಳಿತ ಮಂಡಳಿ ಉಪಾಧ್ಯಕ್ಷೆ ಜಯಮ್ಮ ಪರಶುರಾಮಪ್ಪ, ನಿರ್ದೇಶಕರಾದ ಪಿ.ಎಚ್. ವೆಂಕಪ್ಪ, ಉಮಾ ವಾಗೀಶ, ಎ. ಕೊಟ್ರೇಶ, ವಿಶಾಲ್, ಆರ್. ಸಂಘವಿ, ಕಿರುವಾಡಿ ಸೋಮಶೇಖರ, ಆರ್.ವಿ. ಶಿರಸಾಲಿಮಠ, ಕಿರಣ ಆರ್.ಶೆಟ್ಟಿ, ಎ.ಎಚ್. ಕುಬೇರಪ್ಪ ಕುರ್ಕಿ, ಅನುಷಾ, ಕೆ.ಎಂ. ಜ್ಯೋತಿ ಪ್ರಕಾಶ, ಬಿ. ನಾಗೇಂದ್ರಾಚಾರಿ, ಕೆ.ವಿ. ಸೋಮಶೇಖರ, ಕೆ.ಎಂ. ಬಸವರಾಜ, ಕೆ.ಎಂ. ಶೈಲಾ ಹಾಲಸ್ವಾಮಿ ಕಂಬಳಿ, ಜಿ.ಸಿ. ವಸುಂಧರ, ಪ್ರಭು ಪ್ರಸಾದ ಇತರರು ಇದ್ದರು.