ಕಾವೇರಿ ನದಿ ದಂಡೆಯಲ್ಲಿ ಬಟ್ಟೆ ಬದಲಿಸುವ ಟೆಂಟುಗಳು, ಶೌಚಾಲಯಗಳ ಸ್ವಚ್ಚತೆ, ಹಾಗೂ ಕಾವೇರಿ ನದಿಯ ದಂಡೆ ಮೆಟ್ಟಲುಗಳಿಗೆ ಬಣ್ಣ ಹಾಕುವುದು, ವಿದ್ಯುತ್ ಅಲಂಕಾರ ಸೇರಿದಂತೆ ವಿವಿಧ ಭಾಗಗಳಲ್ಲಿ ಸ್ವಚ್ಛತೆ ಮಾಡಲಾಗಿದೆ ಅಲ್ಲದೆ ರಾಮನಾಥಪುರದ ಪಟ್ಟಣದ ಪ್ರತಿ ಬೀದಿಗಳು ಹಾಗೂ ದೇವಾಲಯಗಳು ಸುತ್ತ ದೀಪಾಲಂಕಾರ ಮಾಡಲಾಗಿದೆ ಇದಲ್ಲದೆ ಗ್ರಾಮದ ನೈರ್ಮಲ್ಯ ಸ್ವಚ್ಛತೆ ಕುಡಿಯುವ ನೀರು ಮುಂತಾದ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆಲ್ಲ ಕಾರಣ ಕ್ಷೇತ್ರದ ಶಾಸಕರು ಎ. ಮಂಜು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಪಾವನಕುಮಾರಿಕುಮಾರ್, ಉಪಾಧ್ಯಕ್ಷರು ಸಿದ್ದರಾಜು, ಹಾಗೂ ಅಡಳಿತ ಮಂಡಳಿಯವರ ಸದಸ್ಯರ ಸಹಕಾರ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಪಟ್ಟಣದ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಪ್ರಥಮ ಷಷ್ಠಿ ರಥೋತ್ಸವ ಈಗಾಗಲೇ ಮುಗಿದಿದ್ದು ದ್ವಿತೀಯ ತುಳುಷಷ್ಠಿ ಮಹಾ ರಥೋತ್ಸವ ಡಿಸೆಂಬರ್ 26ಕ್ಕೆ ನಡೆಯುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರತಿ ಗಲ್ಲಿಗಲ್ಲಿಯ ರಸ್ತೆಗಳನ್ನು ಇಲ್ಲಿಯ ಗ್ರಾಮ ಪಂಚಾಯತಿ ವತಿಯಿಂದ ಪ್ರತಿ ನಿತ್ಯ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ.

ರಾಮನಾಥಪುರದ ಪ್ರಸನ್ನು ಶ್ರೀ ಸುಬ್ರಮಣ್ಯಸ್ವಾಮಿ, ಅಗಸ್ತೇಶ್ವರಸ್ವಾಮಿ, ವರದಾನ ಬಸವೇಶ್ವರ, ರಾಮೇಶ್ವರಸ್ವಾಮಿ ಮುಂತಾದ ದೇವಾಲಯಗಳ ಅಕ್ಕಪಕ್ಕದ ರಸ್ತೆಗಳ ಪಕ್ಕದಲ್ಲಿ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬರುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎನ್. ಕುಮಾರಸ್ವಾಮಿ, ಕಾರ್ಯದರ್ಶಿ ರೇವಣ್ಣ ತಿಳಿಸಿದರು.