ನೆಲಮಂಗಲ: ಗ್ರಾಮಗಳಲ್ಲಿ ಆರ್ಥಿಕ ಶಕ್ತಿ ಹಾಗೂ ಸಹಕಾರ ಸಂಘಗಳನ್ನು ಬಲಗೊಳಿಸುವಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ ಎಂದು ಬಮೂಲ್ ನಿರ್ದೇಶಕ ಭವಾನಿಶಂಕರ್‌ ಬೈರೇಗೌಡ ತಿಳಿಸಿದರು

ನೆಲಮಂಗಲ: ಗ್ರಾಮಗಳಲ್ಲಿ ಆರ್ಥಿಕ ಶಕ್ತಿ ಹಾಗೂ ಸಹಕಾರ ಸಂಘಗಳನ್ನು ಬಲಗೊಳಿಸುವಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ ಎಂದು ಬಮೂಲ್ ನಿರ್ದೇಶಕ ಭವಾನಿಶಂಕರ್‌ ಬೈರೇಗೌಡ ತಿಳಿಸಿದರು.

ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಬಾವಿಕೆರೆ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಅನೇಕ ರೈತರು, ಬಡವರು ಹಾಲು ಉತ್ಪಾದನೆಯಿಂದ ಸದೃಢರಾಗಿದ್ದಾರೆ. ಎಲ್ಲರ ಸಹಕಾರದಿಂದ ಬಾವಿಕೆರೆ ಡೇರಿ ಉತ್ತಮವಾಗಿ ನಡೆಸುತ್ತಿದೆ ಎಂದರು.

ಬಮೂಲ್ ಸೌಲಭ್ಯ ಸದ್ಬಳಸಿಕೊಳ್ಳಿ:

ಬಮೂಲ್‌ನಿಂದ ಹಸುವಿಗೆ ವಿಮಾ ಸೌಲಭ್ಯ, ಪಶು ಆಹಾರ ಪೂರೈಕೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಹಾಲು ಉತ್ಪಾದಕರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳಿವೆ. ಇತ್ತೀಚಿಗೆ ಬಮೂಲ್ ದಿನಗೂಲಿ ನೌಕರರಿಗೆ 10 ಸಾವಿರ ಮೌಲ್ಯದ ಕಿಟ್ ವಿತರಿಸಲಾಗಿದೆ. ಬಮೂಲ್‌ನಿಂದ ದೊರೆಯುವ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಮೂಲ್ ನಿರ್ದೇಶಕ ಭವಾನಿಶಂಕರ ಭೈರೇಗೌಡ ತಿಳಿಸಿದರು.

ಸಂದರ್ಭದಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ ಟ್ರಸ್ಟಿ ರಮೇಶ್, ಡೇರಿ ಅಧ್ಯಕ್ಷೆ ನರಸಮ್ಮಕೃಷ್ಣಪ್ಪ, ಉಪಾಧ್ಯಕ್ಷೆ ಗಂಗಮ್ಮಶಿವಕುಮಾರ್, ನಿರ್ದೇಶಕಿ ಮಂಜುಳಹುಚ್ಚಪ್ಪ, ರಾಧಾಮಣಿಮಹದೇವ್, ಮಂಜುಳರೇಣುಕಪ್ಪ, ರೇಣುಕಮ್ಮವೀರೇಶ್, ಲಕ್ಷ್ಮೀದೇವಮ್ಮವೀರೇಶ್, ಮಂಗಳಮ್ಮಅರಸಪ್ಪ, ಮಂಗಳಮ್ಮಲೋಕೇಶ್, ನಾಮ ನಿರ್ದೇಶಕಿ ಬೈರಮ್ಮಅಂಜಿನಪ್ಪ, ಸಿಇಒ ನಾಗರತ್ನಮ್ಮಅಂಜನಮೂರ್ತಿ, ಹಾಲು ಪರೀಕ್ಷಕಿ ಗಂಗಮ್ಮಸಿದ್ದಗಂಗಯ್ಯ, ಗ್ರಾಪಂ ಮಾಜಿ ಸದಸ್ಯ ಮಹಂತೇಶ್, ರೇಣುಕಮ್ಮ, ಮುಖಂಡ ನಂಜಪ್ಪ, ಮೈಲಾರಪ್ಪ, ನಾಗರಾಜಯ್ಯ, ರಮೇಶ್, ಸಿದ್ದರಾಜು, ಚನ್ನಬಸಪ್ಪ, ವೀರೇಶ್, ಮಹೇಶ್, ರವಿಕುಮಾರ್, ಅಭಿಷೇಕ್ ಮತ್ತಿತರರು ಉಪಸ್ಥಿತರಿದ್ದರು.

ಪೊಟೊ-26ಕೆಎನ್‌ಎಲ್‌ಎಮ್‌1-

ನೆಲಮಂಗಲ ತಾಲೂಕಿನ ಬಾವಿಕೆರೆಯಲ್ಲಿ ಆಯೋಜಿಸಿದ್ದ ಡೇರಿ ನೂತನ ಕಟ್ಟಡ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ವನ್ನು ಬಮೂಲ್ ನಿರ್ದೇಶಕ ಭವಾನಿಶಂಕರ್‌ ಬೈರೇಗೌಡ ಉದ್ಘಾಟಿಸಿದರು. ಬಮೂಲ್ ಕಲ್ಯಾಣ ಟ್ರಸ್ಟ್ ಟ್ರಸ್ಟಿ ರಮೇಶ್, ಡೇರಿ ಅಧ್ಯಕ್ಷೆ ನರಸಮ್ಮಕೃಷ್ಣಪ್ಪ, ಉಪಾಧ್ಯಕ್ಷೆ ಗಂಗಮ್ಮಶಿವಕುಮಾರ್ ಇತರರಿದ್ದರು.