21 ಮಂದಿಗೆ ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

| Published : Sep 05 2024, 12:40 AM IST

21 ಮಂದಿಗೆ ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾರಂಭದಲ್ಲಿ 2024ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು 21 ಶಿಕ್ಷಕರಿಗೆ ನೀಡಿ ಸನ್ಮಾನಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಹಾಗೂ ಬಂಟ್ವಾಳ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸೆ.5ರಂದು ಬೆಳಗ್ಗೆ 9 ಗಂಟೆಗೆ ಬಂಟ್ವಾಳ ಬಂಟರ ಭವನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ 2024ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು 21 ಶಿಕ್ಷಕರಿಗೆ ನೀಡಿ ಸನ್ಮಾನಿಸಲಾಗುವುದು.ಪ್ರಶಸ್ತಿ ವಿಜೇತ ಶಿಕ್ಷಕರು: (ಕಿರಿಯ ಪ್ರಾಥಮಿಕ ವಿಭಾಗ) ಬಂಟ್ವಾಳ ತಾಲೂಕು- ಫ್ರಾನ್ಸಿಸ್ ಡೇಸ, ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಂಚಿನಡ್ಕ ಪದವು. ಬೆಳ್ತಂಗಡಿ ತಾಲೂಕು- ಕರಿಯಪ್ಪ ಎ.ಕೆ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಣ್ಸೆಕಟ್ಟೆ. ಮಂಗಳೂರು ದಕ್ಷಿಣ- ರೋಸಾ ರಜನಿ ಡಿಸೋಜ, ಮುಖ್ಯ ಶಿಕ್ಷಕರು, ದ.ಕ. ಜಿ.ಪಂ ಕಿರಿಯ ಪ್ರಾಥಮಿಕ ಶಾಲೆ ಒಡ್ಡೂರು. ಮಂಗಳೂರು ಉತ್ತರ- ಡ್ರಿಸಿಲ್ ಲಿಲ್ಲಿ ಮಿನಿಜಸ್, ಸಹ ಶಿಕ್ಷಕರು ದ.ಕ. ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೊಕ್ಕಪಟ್ನ. ಮೂಡುಬಿದಿರೆ ತಾಲೂಕು- ಐಡಾ ಪೀರೇರ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಡುಕೊಣಾಜೆ. ಪುತ್ತೂರು ತಾಲೂಕು- ರಾಮಣ್ಣ ರೈ, ಸಹ ಶಿಕ್ಷಕರು, ಸ.ಹಿ.ಪ್ರಾ ಶಾಲೆ ಕೈಕಾರ. ಸುಳ್ಯ ತಾಲೂಕು- ಕೃಷ್ಣಾನಂತ ಶರಳಾಯ ಎಂ., ಸಹ ಶಿಕ್ಷಕರು, ದ.ಕ. ಜಿ.ಪಂ ಕಿರಿಯ ಪ್ರಾಥಮಿಕ ಶಾಲೆ ದೊಡ್ಡೇರಿ.

ಹಿರಿಯ ಪ್ರಾಥಮಿಕ:

ಬಂಟ್ವಾಳ ತಾಲೂಕು- ಬಿ. ತಿಮ್ಮಪ್ಪ ನಾಯ್ಕ, ಸಹಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜ. ಬೆಳ್ತಂಗಡಿ ತಾಲೂಕು- ಮಂಜುನಾಥ ಜಿ., ಮುಖ್ಯ ಶಿಕ್ಷಕರು, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸವಣಾಲು. ಮಂಗಳೂರು ಉತ್ತರ- ವಾಣಿ, ಸಹ ಶಿಕ್ಷಕರು, ದ.ಕ. ಜಿ.ಪಂ. ಹಿ.ಪ್ರಾಥಮಿಕ ಶಾಲೆ ಪಂಜಿ ಮೊಗರು. ಮಂಗಳೂರು ದಕ್ಷಿಣ- ಸುಜಾತ, ಸಹಶಿಕ್ಷಕರು, ದ.ಕ. ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಬೋಳಾರ. ಮೂಡುಬಿದಿರೆ ತಾಲೂಕು- ಮೇಬಲ್ ಫರ್ನಾಂಡಿಸ್‌, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆಬಾಗಿಲು ಉರ್ದು. ಪುತ್ತೂರು ತಾಲೂಕು- ಯಶೋಧ ಎನ್.ಎಂ., ಮುಖ್ಯ ಶಿಕ್ಷಕರು, ದ.ಕ. ಜಿ.ಪಂ. ಹಿ.ಪ್ರಾ ಶಾಲೆ ಬೆಳ್ಳಿಪ್ಪಾಡಿ. ಸುಳ್ಯ ತಾಲೂಕು- ಪದ್ಮನಾಭ ಎ., ಮುಖ್ಯ ಶಿಕ್ಷಕರು, ಕೆ.ಪಿ.ಎಸ್. ಗಾಂಧಿನಗರ.ಪ್ರೌಢ ಶಾಲೆ:

ಬಂಟ್ವಾಳ ತಾಲೂಕು- ಶ್ರೀಕಾಂತ ಎಂ., ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ನಂದಾವರ. ಬೆಳ್ತಂಗಡಿ ತಾಲೂಕು- ಮೋಹನ ಬಾಬು ಡಿ., ಪ್ರಭಾರಿ ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ನಡ. ಮಂಗಳೂರು ಉತ್ತರ- ವಿದ್ಯಾಲತಾ, ದೈಹಿಕ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಬಡಗ ಎಕ್ಕಾರು. ಮಂಗಳೂರು ದಕ್ಷಿಣ- ಸುಬ್ರಹ್ಮಣ್ಯ ಮೊಗೆರಾಯ, ಮುಖ್ಯ ಶಿಕ್ಷಕರು, ಸ್ವಾಮಿ ವಿವೇಕಾನಂದ ಪ.ಪೂ. ವಿದ್ಯಾಲಯ ಎಡಪದವು. ಮೂಡುಬಿದಿರೆ ತಾಲೂಕು- ವಿದ್ಯಾ ಸಂದೀಪ ನಾಯಕ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಅಳಿಯೂರು. ಪುತ್ತೂರು ತಾಲೂಕು- ಲಲಿತಾ, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹಿರೇಬಂಡಾಡಿ. ಸುಳ್ಯ ತಾಲೂಕು- ರಘು, ಸಂಸ್ಕೃತ ಭಾಷಾ ಶಿಕ್ಷಕರು, ಎಸ್.ಎಸ್.ಪಿ.ಯು. ಅನುದಾನಿತ ಕಾಲೇಜು ಸುಬ್ರಹ್ಮಣ್ಯ.

ಮೂಡುಬಿದಿರೆ ತಾಲೂಕಿನ ಮೂವರು ಶಿಕ್ಷಕಿಯರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದ್ದು, ಮೂಡುಬಿದಿರೆ ತಾಲೂಕಿನ ಮೂವರು ಶಿಕ್ಷಕಿಯರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ಅಳಿಯೂರು ಸರ್ಕಾರಿ ಪ್ರೌಢಶಾಲೆಯ ಗಣಿತ ಸಹಶಿಕ್ಷಕಿ ವಿದ್ಯಾ ಸಂದೀಪ್ ನಾಯಕ್, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಕೋಟೆಬಾಗಿಲು ಉರ್ದು ಶಾಲೆಯ ಸಹಶಿಕ್ಷಕಿ ಮೇಬಲ್ ಫರ್ನಾಂಡೀಸ್ ಮತ್ತು ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮೂಡುಕೊಣಾಜೆ ಕಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕಿ ಐಡಾ ಪಿರೇರಾ ಆಯ್ಕೆಗೊಂಡಿದ್ದಾರೆ.