ಮಂಗಳೂರು: ದ.ಕ. ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ 10 ವರ್ಷ ಹಳೆಯ ವಹಿವಾಟು ರಹಿತ ಖಾತೆಗಳಲ್ಲಿ ಸುಮಾರು 140 ಕೋಟಿ ರು. ಗಳಿದ್ದು ಅದನ್ನು ಸಂಬಂಧಪಟ್ಟಗ್ರಾಹಕರು ಪಡೆದುಕೊಳ್ಳುವಲ್ಲಿ ಬ್ಯಾಂಕ್‌ಗಳು ಜಾಗೃತಿ ಮೂಡಿಸಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿದರು.

ಮಂಗಳೂರು: ದ.ಕ. ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ 10 ವರ್ಷ ಹಳೆಯ ವಹಿವಾಟು ರಹಿತ ಖಾತೆಗಳಲ್ಲಿ ಸುಮಾರು 140 ಕೋಟಿ ರು. ಗಳಿದ್ದು ಅದನ್ನು ಸಂಬಂಧಪಟ್ಟಗ್ರಾಹಕರು ಪಡೆದುಕೊಳ್ಳುವಲ್ಲಿ ಬ್ಯಾಂಕ್‌ಗಳು ಜಾಗೃತಿ ಮೂಡಿಸಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿದರು.

ದ.ಕ. ಜಿಲ್ಲಾ ಲೀಡ್‌ ಬ್ಯಾಂಕ್‌ ತಿಯಿಂದ ದ.ಕ. ಜಿಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಸಮಾಲೋಚನಾ ಸಮಿತಿ (ಡಿಸಿಸಿ) ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿಎಲ್‌ಆರ್‌ಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ವಿವಿಧ ಬ್ಯಾಂಕ್‌ಗಳಲ್ಲಿ 10 ವರ್ಷ ಮೇಲ್ಪಟ್ಟು ನಿಷ್ಕ್ರಿಯವಾಗಿರುವ ಬ್ಯಾಂಕ್‌ ಖಾತೆಗಳಲ್ಲಿ ಒಟ್ಟು 78,000 ಕೋಟಿ ರು. ಠೇವಣಿ ಇದೆ. ಕರ್ನಾಟಕದಲ್ಲಿ ಇದು 3,400 ಕೋಟಿ ರು.ಗಳಾಗಿದ್ದು, ದ.ಕ. ಜಿಲ್ಲೆಯಲ್ಲಿ 140 ಕೋಟಿ ರು. ಇದೆ. ಇದಲ್ಲದೆ ಇನ್ಸೂರೆನ್ಸ್‌, ಶೇರ್‌ಗಳು ಕೂಡಾ ಇದ್ದು ಇವಗಳನ್ನು ಗ್ರಾಹಕರಿಗೆ ಹಿಂತಿರುಗಿಸಲು ಸೂಕ್ತ ಕ್ರಮಗಳನ್ನು ವಹಿಸಬೇಕು ಎಂದು ಅವರು ಹೇಳಿದರು.

ದ.ಕ. ಜಿಲ್ಲೆಯಲ್ಲಿ ಈಗಾಗಲೇ ಇಂತಹ ನಿಷ್ಕ್ರಿಯವಾಗಿದ್ದ ಖಾತೆಗಳ 20 ಕೋಟಿ ರು. ಗಳನ್ನು ಗ್ರಾಹಕರಿಗೆ ಪಾವತಿಸಲಾಗಿದೆ. ಉದ್ಗಮ್‌ (UDGAM portal) (udgam.rbi.org.in ) ಪೋರ್ಟಲ್‌ ಮೂಲಕ ನೋಂದಣಿ ಮಾಡಿಕೊಂಡು ಗ್ರಾಹಕರು ತಮ್ಮ ಹೆಸರು, ಪಾನ್‌ ಅಥವಾ ಜನ್ಮ ದಿನಾಂಖದ ಮೂಲಕ ತಮ್ಮ ನಿಷ್ಕ್ರಿಯ ಖಾತೆಗಳನ್ನು ಪತ್ತೆಹಚ್ಚಬಹುದು. ಬಳಿಕ ಸಂಬಂಧಪಟ್ಟ ಬ್ಯಾಂಕ್‌ಗೆ ಕೆವೈಸಿ ದಾಖಲೆಗಳನ್ನು ಒದಗಿಸಿ ಹಣ ಪಡೆಯಯಲು ಆರ್‌ಬಿಐ ಈಗಾಗಲೇ ನಿರ್ದೇಶನ ನೀಡಿದೆ ಎಂದು ಆರ್‌ಬಿಐ ಎಜಿಎಂ ಅರುಣ್‌ ಕುಮಾರ್‌ ತಿಳಿಸಿದರು.

ಪಿಎಂ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿ ಕೆಲವೊಂದು ಬ್ಯಾಂಕ್‌ಗಳವರು ಆಯ್ಕೆಯಾದ ಫಲಾನುವಿಗಳಿಗೆ ಹಣ ಮಂಜೂರಾತಿ ಮಾಡದಿರುವ ಬಗ್ಗೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳ ವಿತರಣೆಯ ಕುರಿತಂತೆ ಮಾಹಿತಿ ಪಡೆದ ಅವರು, ಸರ್ಕಾರ ವಿವಿಧ ಯೋಜನೆಗಳಾದ ಪಿಎಂಜೆಜೆವೈ, ಪಿಎಂಎಸ್‌ಬಿವೈ, ಪಿಎಂಜೆಡಿವೈ ಎಪಿವೈ (ಅಟಲ್‌ ಪಿಂಚಣಿ ಯೋಜನೆ) ಬಗ್ಗೆ ಬ್ಯಾಂಕ್‌ಗಳು ಹೆಚ್ಚಿನ ಆಸಕ್ತಿ ವಹಿಸುವಂತೆ ನಿರ್ದೇಶನ ನೀಡಿದರು.ಮುದ್ರಾ ಯೋಜನೆಯಡಿ 2025ರ ಏಪ್ರಿಲ್‌ನಿಂದ ಸಪ್ಟೆಂಬರ್‌ ವರೆಗೆ 24,115 ಶಾಖೆಗಳಲ್ಲಿ 414.26 ಕೋಟಿ ರು. ಸಾಲ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಜನಧನ್‌ ಯೋಜನೆಯಡಿ 20,769 ಉಳಿತಾಯ ಖಾತೆ ತೆರೆಯಲಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿ 25,564 ಮಂದಿ ನೋಂದಣಿಯಾಗಿದ್ದಾರೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 52,239 ಮಂದಿಯನ್ನು ನೋಂದಣೆ ಮಾಡಲಾಗಿದೆ. ಅಟಲ್‌ ಪಿಂಚಣಿ ಯೋಜನೆಯಡಿ 16,668 ಮಂದಿಯನ್ನು ನೋಂದಣೆ ಮಾಡಿರುವುದಾಗಿ ಲೀಡ್‌ ಬ್ಯಾಂಕ್‌ ಮೆನೇಜರ್‌ ಕವಿತಾ ಶೆಟ್ಟಿ ಮಾಹಿತಿ ನೀಡಿದರು.ಪಿಎಂ ಸ್ವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಥಮ ಕಂತಿನಲ್ಲಿ 12,913, ದ್ವಿತೀಯ ಕಂತಿನಲ್ಲಿ 4,854 ಹಾಗೂ ತೃತೀಯ ಕಂತಿನಲ್ಲಿ 1,667 ಮಂದಿಗೆ ಹಣ ಮಂಜೂರಾಗಿದೆ. ಸೆಪ್ಟಂಬರ್‌ ಅತ್ಯಂಕ್ಕೆ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರ 1,35,696.22 ಕೋಟಿ ರು. ಗಳಾಗಿದೆ. ಆದ್ಯತ ಮತ್ತು ಅದ್ಯತೆಯೇತರ ವಲಯಗಳಲ್ಲಿ ಒಟ್ಟು 26,096.15 ಕೋಟಿ ರು. ಸಾಲ ವಿತರಿಸಲಾಗಿದ್ದು, ತ್ರೈಮಾಸಿಕ ಗುರಿಯ ಶೇ 80.90 ರಷ್ಟು ಸಾಧನೆಯಾಗಿದೆ. ಕೃಷಿ ಕ್ಷೇತ್ರಕ್ಕೆ 6,664.51 ಕೋಟಿ ರು. ವಿತರಣೆಯಾಗಿದೆ ಎಂದು ಕವಿತಾ ಶೆಟ್ಟಿ ವಿವರ ನೀಡಿದರು.

ಕೆನರಾ ಬ್ಯಾಂಕ್‌ನ ಡಿಜಿಎಂ ಶೈಲೇಂದ್ರನಾಥ್‌, ನಬಾರ್ಡ್‌ ಡಿಡಿಎಂ ಸಂಗೀತ ಎಸ್‌. ಕರ್ತ ಇದ್ದರು.