ದಲಿತ ಸಮುದಾಯಗಳು ಹೆಚ್ಚು ಸಮಸ್ಯೆ ಎದುರಿಸುವಂತಾಗಿದೆ

| Published : Nov 25 2024, 01:02 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ. ಶೋಷಣೆ ಅಸಮಾನತೆ ವಿರುದ್ಧ, ಜಾತಿ ಧರ್ಮಗಳ ವಿರುದ್ಧ ಪ್ರಶ್ನೆ ಮಾಡಲು ಹುಟ್ಟಿದ್ದೇ ದಲಿತ ಚಳವಳಿ. ಒಂದು ಕಡೆ ಸಂವಿಧಾನ ಮತ್ತೊಂದು ಕಡೆ ಅಲಿಖಿತ ಸಂವಿಧಾನ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಸಂವಿಧಾನ ಇದ್ದರೂ ಸಹ ಧಾರ್ಮಿಕ ಭಯೋತ್ಪಾದನೆ ಅಂತಹ ಅಲಿಖಿತ ಸಂವಿಧಾನಗಳು ದಾಳಿ ಮಾಡಿ ನಮ್ಮನ್ನು ಕುಗ್ಗಿಸುವಂತೆ ಮಾಡುತ್ತಿದೆ ಎಂದು ಅಂಬೇಡ್ಕರ್‌ ವಾದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಸಂವಿಧಾನ ಇದ್ದರೂ ಸಹ ಧಾರ್ಮಿಕ ಭಯೋತ್ಪಾದನೆ ಅಂತಹ ಅಲಿಖಿತ ಸಂವಿಧಾನಗಳು ದಾಳಿ ಮಾಡಿ ನಮ್ಮನ್ನು ಕುಗ್ಗಿಸುವಂತೆ ಮಾಡುತ್ತಿದೆ ಎಂದು ಅಂಬೇಡ್ಕರ್‌ ವಾದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಬೇಸರ ವ್ಯಕ್ತಪಡಿಸಿದರು.

ನಗರದ ಸ್ವಾಭಿಮಾನ ಭವನದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದದ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆ ಹಾಗೂ ಜಿಲ್ಲಾ ಸಮಿತಿ ಪುನರ್‌ ರಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ. ಶೋಷಣೆ ಅಸಮಾನತೆ ವಿರುದ್ಧ, ಜಾತಿ ಧರ್ಮಗಳ ವಿರುದ್ಧ ಪ್ರಶ್ನೆ ಮಾಡಲು ಹುಟ್ಟಿದ್ದೇ ದಲಿತ ಚಳವಳಿ. ಒಂದು ಕಡೆ ಸಂವಿಧಾನ ಮತ್ತೊಂದು ಕಡೆ ಅಲಿಖಿತ ಸಂವಿಧಾನ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಸಂವಿಧಾನ ಇದ್ದರೂ ಸಹ ಧಾರ್ಮಿಕ ಭಯೋತ್ಪಾದನೆ ಅಂತಹ ಅಲಿಖಿತ ಸಂವಿಧಾನಗಳು ದಾಳಿ ಮಾಡಿ ನಮ್ಮನ್ನು ಕುಗ್ಗಿಸುವಂತೆ ಮಾಡುತ್ತಿದೆ ಎಂದರು.

ವೈದಿಕ ಕೋಮುವಾದಿಗಳು ಹೆಚ್ಚಾಗುತ್ತಿದ್ದು ಸಂವಿಧಾನ ಪ್ರಜಾಪ್ರಭುತ್ವದ ಬಗ್ಗೆ ಸಂಪೂರ್ಣವಾಗಿ ನಾಶ ಮಾಡುವ ಕ್ರಿಯೆಯಲ್ಲಿ ಅವರು ತೊಡಗಿದ್ದಾರೆ. ಈ ಬಗ್ಗೆ ಪ್ರತಿಯೊಂದು ಶೋಷಿತ ಸಮಾಜ ಅರಿತು ಅದರ ವಿರುದ್ಧ ಧನಿಯತ್ತಬೇಕು ಎಂದು ಕರೆ ನೀಡಿದರು. ಒಂದು ಕಡೆ ಅಸಮಾನತೆ ಅಘಾಧವಾಗಿ ನಮ್ಮನ್ನು ಕಾಡುತ್ತಿದೆ. ಇನ್ನೊಂದು ಕಡೆ ದೇಶದ ಸಂಪತ್ತು ಕೆಲವೇ ಜನರ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದೆ. ಕೆಲವೇ ಕುಟುಂಬಗಳು ದೇಶದ ಸಂಪತ್ತನ್ನು ಲೂಟಿ ಮಾಡುತ್ತೇವೆ. ಕೇಂದ್ರ ಸರ್ಕಾರ ಅವರ ಪರ ನೀತಿಗಳನ್ನು ಜಾರಿ ಮಾಡಿದೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ದೇಶದ ಸಾಧನೆ ಸಂಪೂರ್ಣವಾಗಿ ಕುಗ್ಗಿದೆ ಎಂಬುದನ್ನು ನಾವು ಸೂಚ್ಯಂಕಗಳ ಮೂಲಕ ಗಮನಿಸಬಹುದು. ಇವತ್ತಿನ ದಿನಗಳಲ್ಲಿ ಬಡತನ ಅತ್ಯಂತ ಕೆಳಮಟ್ಟಕ್ಕೆ ತಲುಪುತ್ತಿದೆ ಶಿಕ್ಷಣ ಕೈ ಎಟುಗದ ರೀತಿಯಲ್ಲಿ ನಡೆಯುತ್ತಿದ್ದು ಮಹಿಳೆಯರ ಮೇಲಿನ ದೌರ್ಜನ್ಯಗಳು ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ ತೀವ್ರವಾಗಿ ನಡೆಯುತ್ತಿದೆ ಎಂದರು. ಹಾಗಾಗಿ ಪ್ರತಿಯೊಂದು ಹಿಂದುಳಿದ ಸಮುದಾಯಗಳು, ಮಹಿಳೆಯರು, ಬಡತನದಲ್ಲಿರುವ ಮಕ್ಕಳು ಕೈಜೋಡಿಸಿ ಸಂಘಟನೆಯನ್ನು ಕಟ್ಟುವ ಮೂಲಕ ಸಮಸ್ಯೆಗಳನ್ನು ಎದುರಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ ಟಿ ಶಿವಪ್ರಸಾದ್, ಡಿಎಸ್ಎಸ್ ಅಂಬೇಡ್ಕರ್‌ ವಾದದ ಜಿಲ್ಲಾ ಸಂಚಾಲಕ ಬೇಲೂರು ಲಕ್ಷ್ಮಣ್, ಆಲೇಶಪ್ಪ, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿ ಸುಮದುದ್ದ, ಡಾ. ಕೃಷ್ಣ ಹತ್ನಿ, ಮಲ್ಲಿಗೆವಾಳು ದೇವಪ್ಪ ಉಪಸ್ಥಿತರಿದ್ದರು.