ಕನ್ನಡಪ್ರಭ ವಾರ್ತೆ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳಿಂದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಭೀಮಾ ಕೋರೆಗಾಂವ್ ಯುದ್ಧ ಸ್ಮರಣಾರ್ಥ ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳಿಂದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಭೀಮಾ ಕೋರೆಗಾಂವ್ ಯುದ್ಧ ಸ್ಮರಣಾರ್ಥ ವಿಜಯೋತ್ಸವ ಆಚರಿಸಿದರು.ಈ ವೇಳೆ ವಕೀಲ ಶಶಿಕಾಂತ ಬಾಡಗಿ ಮಾತನಾಡಿ, ಪೇಶ್ವೆಗಳ ದೊಡ್ಡ ಸೈನ್ಯದ ಜೊತೆ ಕೋರೆಗಾಂವ್ ವೀರರು ಅವಿರತವಾಗಿ ಹೋರಾಟ ನಡೆಸಿ ಅವರನ್ನ ಸೋಲಿಸಿದ ನೆನಪಿಗೆ ವಿಜಯೋತ್ಸವ ಆಚರಿಸಲಾಗುತ್ತಿದೆ. ಕ್ರೂರ ಜಾತಿ ಪದ್ದತಿ, ಅಸ್ಪೃಶ್ಯತೆಯ ನಡುವೆಯೂ ದಲಿತರು ನಡೆಸಿದ ಹೋರಾಟ ಅಂಬೇಡ್ಕರ್ ಅವರ ಬದುಕಿಗೆ ತಿರುವು ಕೊಟ್ಟ ಸಂಗತಿಯಾಗಿದೆ. ಅಂಬೇಡ್ಕರ್ ಅವರು ಹಾಕಿಕೊಟ್ಟ ವಿಜಯೋತ್ಸವ ದಿನವನ್ನು ದಲಿತರೆಲ್ಲರೂ ಒಗ್ಗಟ್ಟಿನಿಂದ ಮುಂದುವರಿಸಿಕೊಂಡು ಹೋಗಬೇಕು ಕರೆ ನೀಡಿದರು.

ದಲಿತ ಮುಖಂಡರಾದ ಸಿದ್ದಾರ್ಥ ಶಿಂಗೆ, ಶಶಿಕಾಂತ ಸಾಳ್ವೆ, ಮಿತೇಶ ಪಟ್ಟಣ ಮಾತನಾಡಿದರು. ಈ ವೇಳೆ ಮುಖಂಡ ಗೌತಮ ಪರಾಂಜಿಪೆ, ದತ್ತಾ ವಾಸ್ಟರ, ರಿಯಾಜ ಸನದಿ, ಸೈಯದ ಅಮೀನ ಗದ್ಯಾಳ, ಸಂತೋಷ ಸಾವಡಕರ, ಸಚೀನ ಪರಾಂಜಿಪೆ, ನಿಶಾಂತ ಮಡ್ಡಿ, ವಿನಾಯಕ ಕಾಂಬಳೆ, ಮಂಜು ನೂಲಿ, ಸುಕುಮಾರ ಕಾಂಬಳೆ, ಮೋಹನ ಶಿಂಗೆ, ಸೂರ್ಯ ಛಲವಾದಿ, ಸಚೀನ ಪಟ್ಟಣ ಸೇರಿದಂತೆ ಅನೇಕರು ಉಪಸ್ಥಿತಿದ್ದರು.