ಸಾರಾಂಶ
ಮೂಲ್ಕಿ ತಾಲೂಕು ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿ ತಾಲೂಕಿನಲ್ಲಿ ಗುರುವಾರ ರಾತ್ರಿ ಬಿರುಸಿನ ಮಳೆಯಾಗಿದ್ದು ಕೆಲವೆಡೆ ಹಾನಿ ಸಂಭವಿಸಿದೆ. ಶುಕ್ರವಾರ ಬೆಳಗ್ಗಿನಿಂದ ಮಳೆ ಪ್ರಮಾಣ ಕಡಿಮೆಯಾಗಿತ್ತು.ಗುರುವಾರ ಸುರಿದ ಬಿರುಸಿನ ಮಳೆಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಎಂಬಲ್ಲಿ ಸುಂದರಿ ಎಂಬವರ ಮನೆಗೆ ಮರ ಬಿದ್ದು ಭಾಗಶ ಹಾನಿಯಾಗಿದೆ. ಇದೇ ಪ್ರದೇಶದ ಅಲೀಮಮ್ಮ ಎಂಬವರ ಮನೆ ಬಿರುಕು ಬಿಟ್ಟಿದ್ದು ತೀವ್ರ ಹಾನಿಯಾಗಿರುತ್ತದೆ. ಪುನರೂರು ನಿವಾಸಿ ಮೋಹನ್ ಡಿ. ಶೆಟ್ಟಿಗಾರ ಎಂವರ ಮನೆಯ ಕಾಂಪೌಂಡು ಕುಸಿದು ಹಾನಿಯಾಗಿದ್ದು, ಇದರ ಪರಿಣಾಮವಾಗಿ ನೆರೆಮನೆಯ ರಾಮ್ ಭಟ್ ಅವರ ಮನೆಯ ಕಾಂಪೌಂಡ್ ಕೂಡ ಕುಸಿದಿದ್ದು ಎರಡು ಮನೆಯವರಿಗೆ ತುಂಬಾ ಹಾನಿ ಉಂಟಾಗಿದೆ. ಮೂಲ್ಕಿ ತಾಲೂಕು ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ - ಬೈಲಗುತ್ತು, ಅತ್ತೂರುಬೈಲು, ಉಲ್ಯ ಪ್ರದೇಶದಲ್ಲಿ ವಾರದ ಹಿಂದೆ ಕೃಷಿಕರು ಹಲವಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದರು. ಕಳೆದ ಎರಡು ದಿನದಿಂದ ನಿರಂತರ ಸುರಿದ ಮಳೆಗೆ ನಂದಿನಿ ನದಿ ಉಕ್ಕಿ ಹರಿದು ನಾಟಿ ಮಾಡಿದ ಗದ್ದೆಗಳು ಮುಳುಗಡೆಯಾಗಿ ಪೈರು ಕೊಳೆತು ಹೋಗುವ ಸಾಧ್ಯತೆಯಿದ್ದು ಕೃಷಿಕರು ಅತಂಕದಲ್ಲಿದ್ದಾರೆ. ಸ್ಥಳಕ್ಕೆ ಕೆಮ್ರಾಲ್ ಗ್ರಾಪಂ ಅಧ್ಯಕ್ಷ ಮಯ್ಯದ್ದಿ ಪಕ್ಷಿಕೆರೆ, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಸದಸ್ಯರಾದ ಸುರೇಶ ದೇವಾಡಿಗ ಪಂಜ, ಕೇಶವ ಪೂಜಾರಿ, ಪಂಚಾಯಿತಿ ಸಿಬ್ಬಂದಿ ಕೇಶವ ದೇವಾಡಿಗ, ಪ್ರಜ್ವಲ್ ಭೇಟಿ ನೀಡಿ ಪರಿಶೀಲಿಸಿದರು. ಕೃಷಿಕರಾದ ಸಂತೋಷ್ ಶೆಟ್ಟಿ ಪಂಜದಗುತ್ತು , ಗಣೇಶ್ ಶೆಟ್ಟಿ ಪಂಜ ಮತ್ತಿತರರು ಹಾನಿಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಚಿತ್ರ:28 ಲಿಂಗಪ್ಪಯ್ಯ ಕಾಡು ಆಲಿಮಮ್ಮ ಮನೆಗೆ ಹಾನಿ ....ಚಿತ್ರ:28 ಪುನರೂರು ಮಳೆ ಹಾನಿ
ಚಿತ್ರ :28ಕೆಮ್ರಾಲ್