ಸಾರಾಂಶ
ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದ ರೈತ ಬಸವರಾಜ್ ಜಮೀನಿನಲ್ಲಿ ಕಾಡು ಆನೆಗಳ ದಾಳಿಯಿಂದ ಮುಸುಕಿನ ಜೋಳದ ಫಸಲು ನಾಶವಾಗಿದೆ.
ಕನ್ನಡಪ್ರಭ ವಾರ್ತೆ ಹನೂರು
ಕಾಂಚಳ್ಳಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರ ಜೋಳದ ಫಸಲು ಹಾನಿಯಾಗಿರುವ ಘಟನೆ ಜರುಗಿದೆ. ಸೂಳೇರಿಪಾಳ್ಯ ಗ್ರಾಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ರೈತ ಬಸವರಾಜು ಅವರ ಜಮೀನಿನಲ್ಲಿ ಬೆಳೆಯಲಾಗಿದ್ದ ಜೋಳದ ಬೆಳೆ ಆನೆ ದಾಳಿಯಿಂದ ಹಾನಿಯಾಗಿದೆ.ಬೆಳೆ ಹಾನಿಗೆ ನಲುಗಿದ ರೈತ:ಮಲೆಮಾದೇಶ್ವರ ವನ್ಯ ಧಾಮ ಹನೂರು ಬಫರ್ ಜೋನ್ ವಲಯ ಅರಣ್ಯ ಪ್ರದೇಶದಿಂದ ಕಾಡಾನೆಗಳ ಹಿಂಡು ದಿನನಿತ್ಯ ನಿರಂತರವಾಗಿ ರಾತ್ರಿ ವೇಳೆ ಜಮೀನಿಗೆ ನುಗ್ಗಿ ಮುಸುಕಿನ ಜೋಳದ ಫಸಲು ತಿಂದು ಬೆಳೆ ಹಾನಿ ಜೊತೆ ಸಂಕಷ್ಟದಿಂದ ರೈತ ನಲಗುವಂತಾಗಿದೆ. ಹೀಗಾಗಿ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳು ರೈತರ ಜಮೀನಿಗೆ ಬರುವುದನ್ನು ತಡೆಗಟ್ಟಲು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜೊತೆಗೆ ರೈತರಿಗಾಗಿರುವ ಜಮೀನಿನಲ್ಲಿ ಬೆಳೆ ಹಾನಿ ಪರಿಶೀಲಿಸಿ ತುರ್ತಾಗಿ ನಷ್ಟ ಪರಿಹಾರ ಅರಣ್ಯ ಇಲಾಖೆ ವತಿಯಿಂದ ನೀಡಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಯನ್ನೇ ಬೆಳೆಯಲು ಸಾಧ್ಯವಾಗದೆ ಸಂಕಷ್ಟದಿಂದ ನಲಗುವಂತಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆ ಹಾನಿಯಿಂದ ವಲಯ ಅರಣ್ಯಾಧಿಕಾರಿಗಳು ಪರಿಶೀಲಿಸಿ ನಷ್ಟ ಪರಿಹಾರ ನೀಡಬೇಕು. ಜೊತೆಗೆ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಪರಿಹಾರ ನೀಡಬೇಕು ಎಂದು ರೈತ ರೈತ ಸಂಘಟನೆ ಒತ್ತಾಯ ಮಾಡಿದೆ.ಮುಸುಕಿನ ಜೋಳವನ್ನು ಸಾಲ ಸೋಲ ಮಾಡಿ ಬೆಳೆಯಲಾಗಿದೆ. ಮಲೆಮಾದೇಶ್ವರ ವನ್ಯಧಾಮ ಅರಣ್ಯ ಪ್ರದೇಶದಿಂದ ಕಾಡಾನೆಗಳು ದಿನನಿತ್ಯ ರಾತ್ರಿ ವೇಳೆ ಜಮೀನಿಗೆ ನುಗ್ಗಿ ಪಸಲು ತಿಂದು ಹಾನಿಮಾಡಿವೆ. ಕೃಷಿ ಚಟುವಟಿಕೆಯ ಪರಿಕರಗಳನ್ನು ಸಹ ತುಳಿದು ನಾಶಪಡಿಸಿದೆ. ಸಂಬಂಧಪಟ್ಟ ವಲಯ ಅರಣ್ಯ ಅಧಿಕಾರಿಗಳು ಪರಿಶೀಲಿಸಿ ಆಗಿರುವ ನಷ್ಟ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು.ಬಸವರಾಜ್, ರೈತ ,ಕಾಂಚಳ್ಳಿ ಗ್ರಾಮ