ಸಾರಾಂಶ
ಸಾಮಾನ್ಯವಾಗಿ ಹುಲಿಗಳು ಬೇಟೆಯಾಡಿದ ಪ್ರಾಣಿಯನ್ನು ಸ್ವಲ್ಪ ಮರೆಯಾದ ಸ್ಥಳದಲ್ಲಿ ಕುಳಿತು ತಿನ್ನುತ್ತವೆ. ಅಲ್ಲದೆ ಕೋತಿಯಂತಹ ಲಂಗೂರ್ಹುಲಿ ಬಾಯಿಗೆ ಸಿಕ್ಕಿ ಬೀಳುವುದು ಕಷ್ಟವೇ. ಆದರೂ ಈ ಹೆಬ್ಬುಲಿ ಲಂಗೂರ್ಅನ್ನು ಬೇಟೆಯಾಡಿ ಸಫಾರಿ ವಾಹನ ತೆರಳುವ ಸಮೀಪದಲ್ಲಿಯೇ ಕುಳಿತು ತಿಂದಿದೆ.
- ಒಂದು ಗಂಟೆಗಳ ಕಾಲ ಪ್ರವಾಸಿಗರಿಗೆ ಮನರಂಜನೆ
- ಸಫಾರಿ ವಾಹನ ತೆರಳುವ ಮಾರ್ಗದ ಬಳಿಯೇ ತಿಂದ ಹುಲಿರಾಯಕನ್ನಡಪ್ರಭ ವಾರ್ತೆ ಮೈಸೂರು
ಎಚ್.ಡಿ. ಕೋಟೆ ತಾಲೂಕು ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಲಂಗೂರ್ ಬೇಟೆಯಾಡಿ ಕ್ಷಣಾರ್ಧದಲ್ಲಿ ಸ್ವಲ್ಪವೂ ಬಿಡದಂತೆ ತಿಂದುಮುಗಿಸಿದ ಅಪರೂಪದ ಚಿತ್ರ ಕನ್ನಡಪ್ರಭ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅವರ ಕ್ಯಾಮರ ಕಣ್ಣಲ್ಲಿ ಸೆರೆಯಾಗಿದೆ.ಸಾಮಾನ್ಯವಾಗಿ ಹುಲಿಗಳು ಬೇಟೆಯಾಡಿದ ಪ್ರಾಣಿಯನ್ನು ಸ್ವಲ್ಪ ಮರೆಯಾದ ಸ್ಥಳದಲ್ಲಿ ಕುಳಿತು ತಿನ್ನುತ್ತವೆ. ಅಲ್ಲದೆ ಕೋತಿಯಂತಹ ಲಂಗೂರ್ಹುಲಿ ಬಾಯಿಗೆ ಸಿಕ್ಕಿ ಬೀಳುವುದು ಕಷ್ಟವೇ. ಆದರೂ ಈ ಹೆಬ್ಬುಲಿ ಲಂಗೂರ್ಅನ್ನು ಬೇಟೆಯಾಡಿ ಸಫಾರಿ ವಾಹನ ತೆರಳುವ ಸಮೀಪದಲ್ಲಿಯೇ ಕುಳಿತು ತಿಂದಿದೆ.
ಮಂಗಳವಾರ ಸಂಜೆ ಈ ವ್ಯಾಘ್ರ ಲಂಗೂರನ್ನು ಒಂದು ಗಂಟೆ ಕಾಲ ತಿಂದು ತೇಗಿ, ಪ್ರವಾಸಿಗರ ಮನತಣಿಸಿತು.ಈಗ ಕಾಡಿನಲ್ಲಿ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿರುವುದರಿಂದ ಪ್ರಾಣಿಗಳು ಬೇರೆಡೆಗೆ ವಲಸೆ ಹೋಗಿಲ್ಲ. ಕಾಡಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸದಂತೆ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.