ಸಾರಾಂಶ
ಕೊಟ್ಟಲಗಿ ಗ್ರಾಮದ ಹೊರವಲಯದಲ್ಲಿರುವ ದಾನಮ್ಮಾ ದೇವಿ ದೇವಾಲಯದಲ್ಲಿ ಕಾರ್ತೀಕೋತ್ಸವದ ದೀಪ ಬೆಳಗಿ ಮಾತನಾಡಿದ ಘಟಪ್ರಭಾ ಪಾದಯಾತ್ರಾ ಮುಖ್ಯಸ್ಥ ಜಿ.ಎಸ್.ಕರ್ಪೂರಮಠ ಅವರು, ಗುಡ್ಡಾಪೂರ ದಾನಮ್ಮಾ ದೇವಿಯಲ್ಲಿ ಒಂದು ಶಕ್ತಿ ಇದೆ. ಬೇಡಿದವರಿಗೆ ನೀಡುವ ಶಕ್ತಿ ಮಹಾದಾನಿ ದಾನಮ್ಮದೇವಿಯಲ್ಲಿದೆ ಎಂದರು.
ಕನ್ನಡಪ್ರಭ ವಾರ್ತೆ ಐಗಳಿ
ಗುಡ್ಡಾಪೂರ ದಾನಮ್ಮಾ ದೇವಿಯಲ್ಲಿ ಒಂದು ಶಕ್ತಿ ಇದೆ. ಬೇಡಿದವರಿಗೆ ನೀಡುವ ಶಕ್ತಿ ಮಹಾದಾನಿ ದಾನಮ್ಮದೇವಿಯಲ್ಲಿದೆ ಎಂದು ಘಟಪ್ರಭಾ ಪಾದಯಾತ್ರಾ ಮುಖ್ಯಸ್ಥ ಜಿ.ಎಸ್.ಕರ್ಪೂರಮಠ ಹೇಳಿದರು.ಸಮೀಪದ ಕೊಟ್ಟಲಗಿ ಗ್ರಾಮದ ಹೊರವಲಯದಲ್ಲಿರುವ ದಾನಮ್ಮಾ ದೇವಿ ದೇವಾಲಯದಲ್ಲಿ ಕಾರ್ತೀಕೋತ್ಸವದ ದೀಪ ಬೆಳಗಿ ಮಾತನಾಡಿದ ಅವರು, ಪಾದಯಾತ್ರೆಯ ಭಾವೈಕ್ಯತೆಯಿಂದ ನಡೆದಿದೆ. 36ನೇ ವರ್ಷದ ಪಾದಯಾತ್ರೆ ನಡೆದಿದೆ. ಎಲ್ಲ ಸಮುದಾಯದವರು ಪಾಲ್ಗೊಂಡಿದ್ದಾರೆ. ಘಟಪ್ರಭಾದಿಂದ ಪ್ರಾರಂಭಿಸಿ ಹಾರೂಗೇರಿ, ಯಕ್ಕಂಚಿ, ಕೊಟ್ಟಲಗಿಯಲ್ಲಿ ವಾಸ್ತವ ಆಗಿದೆ. ಎಲ್ಲ ಗ್ರಾಮದಲ್ಲಿ ಸಂಭ್ರಮದಿಂದ ಸ್ವಾಗತ ಸಹಕಾರ ನೀಡಿದ ಗ್ರಾಮಸ್ಥರನ್ನು ಅಭಿನಂದಿಸಿದರು.
4ನೇ ದಿನ ಗುಡ್ಡಾಪುರ ತಲುಪಲಿದ್ದೇವೆ. ಪಾದಯಾತ್ರಾದಲ್ಲಿ ಸುಮಾರು 300 ಜನ ಭಕ್ತರಿದ್ದಾರೆ. ಶುಕ್ರವಾರ ಬೆಳಗ್ಗೆ ದೇವಿಗೆ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ ಎಂದರು.ಕನ್ನಾಳದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಪಾದಯಾತ್ರೆಯಲ್ಲಿ ಮನಸ್ಸು ನೆಮ್ಮದಿ ಆಗಲಿದೆ. ಸಂಸ್ಕಾರ ಸಿಗಲಿದೆ. ಎಲ್ಲರ ಮನಸ್ಸು ಸಮಾನತೆ ತೊರಲಿದೆ ಪಾದಯಾತ್ರೆಯಿಂದ ಬಿ.ಪಿ.ಸುಗರ್ ಯಾವುದೇ ರೋಗ ಬರುವುದಿಲ್ಲ. ಅದು ಆರೋಗ್ಯಕ್ಕೆ ಪಾದಯಾತ್ರೆ ಪೂರಕ ಆಗಲಿದೆ. ಸುಮಾರು 36 ವರ್ಷಗಳಿಂದ ಜಿ.ಎಸ್.ಕರ್ಪೂರಮಠ ಸ್ವಾಮಿಜಿಯವರ ನೇತೃತ್ವದಲ್ಲಿ ನಡೆದಿದೆ. ಇದು ದೇವಿಯ ಕೃಪೆ ಇವರ ಮೇಲೆ ಇದೆ. ಇಟ್ಟ ಭಕ್ತಿ ಇಟ್ಟ ಗುರಿ ತಲುಪಲು ಸಾಧ್ಯ ಎಂದರು.
ಸತೀಶ ಬಬಲಾದಿ, ಮಹಾಂತೇಶ ಜೋತಾವರ, ಉಮೆಶ ಕೊಪ್ಪ, ಬಸವರಾಜ ಹಳ್ಳೂರ, ಮಹಾಂತೇಶ ನಿರ್ವಾಣ, ಈರಗೌಡ ಪಾಟೀಲ, ಕುಮಾರ ಕರ್ಪೂರಮಠ, ಬಸವರಾಜ ನಿಂಗಣ್ಣವರ, ಅಕ್ಕಮಹಾದೇವಿ ಅಂಗಡಿ, ಶಶಿಕಲಾ ಘಾಳಿ, ಮಹಾದೇವಿ ನಾವ್ಹಿ, ಸೇರಿದಂತೆ ಅನೇಕರು ಇದ್ದರು.