ಹೊನ್ನವಳ್ಳಿ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಹಾಗೂ ನೌಕರರ ವರ್ಗ, ಶ್ರೀ ವೇಣುಗೋಪಾಲ ಸ್ವಾಮಿ ಕಲಾ ಮಂಡಳಿ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಜ. 26ರಂದು ಸಂಜೆ 6.30ಕ್ಕೆ ದಾನಶೂರ ಕರ್ಣ ಅಥವಾ ಶ್ರೀಕೃಷ್ಣ ರಾಯಭಾರ ಎಂಬ ಪೌರಾಣಿಕ ನಾಟಕವನ್ನು ಹೊನ್ನವಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರು ಉಪಸ್ಥಿತರಿದ್ದು, ಶಾಸಕ ಎ. ಮಂಜು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೊನ್ನವಳ್ಳಿ ಗ್ರಾಪಂ ಅಧ್ಯಕ್ಷ ಎಚ್. ಡಿ. ಕೃಷ್ಣಮೂರ್ತಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ಹೊನ್ನವಳ್ಳಿ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಹಾಗೂ ನೌಕರರ ವರ್ಗ, ಶ್ರೀ ವೇಣುಗೋಪಾಲ ಸ್ವಾಮಿ ಕಲಾ ಮಂಡಳಿ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಜ. 26ರಂದು ಸಂಜೆ 6.30ಕ್ಕೆ ದಾನಶೂರ ಕರ್ಣ ಅಥವಾ ಶ್ರೀಕೃಷ್ಣ ರಾಯಭಾರ ಎಂಬ ಪೌರಾಣಿಕ ನಾಟಕವನ್ನು ಹೊನ್ನವಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಹೊನ್ನವಳ್ಳಿ ಗ್ರಾಪಂ ಅಧ್ಯಕ್ಷ ಎಚ್. ಡಿ. ಕೃಷ್ಣಮೂರ್ತಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲೆಯನ್ನು ಬೆಳೆಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾಟಕವನ್ನು ಆಯೋಜಿಸಿದ್ದು, ಅಂದು ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರು ಉಪಸ್ಥಿತರಿದ್ದು, ಶಾಸಕ ಎ. ಮಂಜು ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರು ಕಲೆಯ ಬಗ್ಗೆ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ಎಚ್. ಯೋಗಾರಮೇಶ್, ಕಾಂಗ್ರೆಸ್ ಮುಖಂಡ ಎಂ. ಟಿ. ಕೃಷ್ಣೆಗೌಡ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಕೆ. ಸತೀಶ್, ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡ, ಜಿಪಂ ಮಾಜಿ ಅಧ್ಯಕ್ಷ ವಿ.ಎ. ನಂಜುಂಡಸ್ವಾಮಿ, ಸದಸ್ಯರಾದ ರತ್ನಮ್ಮ ಲೋಕೇಶ್, ತಾಪಂ ಅಧ್ಯಕ್ಷ ಮಾಜಿ ನರಸೇಗೌಡ, ಎಚ್. ಮಾದೇಶ್, ಸಮಾಜ ಸೇವಕ ನವೀನ್, ಯುವರಾಜ್, ಮಾಜಿ ತಾಪಂ ಸದಸ್ಯ ಮರೀಗೌಡ, ಕಾಂಗ್ರೆಸ್ ಮುಖಂಡ ಪ್ರಸನ್ನಕುಮಾರ್, ಜಯಕೇಶವ ಕಾನ್ವೆಂಷನ್ ಹಾಲ್ ಮಾಲೀಕ ವೆಂಕಟೇಶ್, ಜೆಡಿಎಸ್ ಮುಖಂಡ ದಿವಾಕರ, ತಾಪಂ ಮಾಜಿ ಅಧ್ಯಕ್ಷ ವೀರೇಶ್, ಕಾಂಗ್ರೆಸ್ ಮುಖಂಡ ಸಿ. ಡಿ. ದಿವಾಕರ್ ಗೌಡ ಭಾಗವಹಿಸಲಿದ್ದಾರೆ.ತಹಸೀಲ್ದಾರ್ ಸೌಮ್ಯ, ತಾಪಂ ಇಒ ಶ್ರೀನಿವಾಸ್, ತಾಪಂ ಸಹಾಯಕ ನಿರ್ದೇಶಕ ಪ್ರಕಾಶ್, ಯೋಜನಾಧಿಕಾರಿ ಧರ್ಮೇಂದ್ರ, ಮಲ್ಲಿಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಮತ್ತಿತರರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಕಲಾಭಿಮಾನಿಗಳು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿ, ಪ್ರೋತ್ಸಹಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಉಪಾಧ್ಯಕ್ಷ ಗಣೇಶ್ ವೇಲಾಪುರಿ, ಸದಸ್ಯ ಧರ್ಮಪ್ಪ, ನೌಕರ ಕೇಶವ ಉಪಸ್ಥಿತರಿದ್ದರು.