ದರೆಗುಡ್ಡೆ ಇಟಲ ದೇವಸ್ಥಾನ ಬ್ರಹ್ಮಕಲಶ: ಹೊರೆಕಾಣಿಕೆ ಮೆರವಣಿಗೆ

| Published : Apr 28 2025, 11:45 PM IST

ದರೆಗುಡ್ಡೆ ಇಟಲ ದೇವಸ್ಥಾನ ಬ್ರಹ್ಮಕಲಶ: ಹೊರೆಕಾಣಿಕೆ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಲಾಮಯವಾಗಿ ಪುನರ್‌ನಿರ್ಮಾಣಗೊಂಡಿರುವ ಮಹತೋಭಾರ ಶ್ರೀ ಕ್ಷೇತ್ರ ಇಟಲ ಧರೆಗುಡ್ಡೆ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಮೆ ೨ರಂದು ನಡೆಯಲಿದ್ದು ಆದರ ಪೂರ್ವಭಾವಿಯಾಗಿ ಭಾನುವಾರ ಸಂಜೆ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆಶಿಲಾಮಯವಾಗಿ ಪುನರ್‌ನಿರ್ಮಾಣಗೊಂಡಿರುವ ಮಹತೋಭಾರ ಶ್ರೀ ಕ್ಷೇತ್ರ ಇಟಲ ಧರೆಗುಡ್ಡೆ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಮೆ ೨ರಂದು ನಡೆಯಲಿದ್ದು ಆದರ ಪೂರ್ವಭಾವಿಯಾಗಿ ಭಾನುವಾರ ಸಂಜೆ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಅಳಿಯೂರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮೈದಾನದಿಂದ ಹೊರಟ ವೈಭವಯುತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಬಳಿಕ ಸುಮಾರು ೨.ಕಿ.ಮೀ ದೂರದ ದರೆಗುಡ್ಡೆ ಇಟಲ ದೇವಸ್ಥಾನದವರೆಗೆ ನಡೆದ ಮೆರವಣಿಗೆಯಲ್ಲಿ ಹತ್ತಾರು ವಾಹನಗಳಲ್ಲಿ ಭಕ್ತರು ಅಕ್ಕಿ, ತೆಂಗಿನಕಾಯಿ, ತರಕಾರಿ, ದವಸಧಾನ್ಯಗಳನ್ನು ಕೊಂಡೊಯ್ದು ಕ್ಷೇತ್ರಕ್ಕೆ ಸಮರ್ಪಿಸಿದರು.ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತಸರ, ಪಣಪಿಲ ಅರಮನೆಯ ಬಿ. ವಿಮಲ್ ಕುಮಾರ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಕೇಶ್ ಶೆಟ್ಟಿ ಎದಮಾರು, ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕರಾದ ಪ್ರಮೋದ್ ಆರಿಗ, ಪೂರನ್‌ ವರ್ಮ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕೋಟ್ಯಾನ್‌, ಉಪಾಧ್ಯಕ್ಷ ವಿನೋದರ ಪೂಜಾರಿ, ಬಿಜೆಪಿ ಮುಖಂಡ ರಂಜಿತ್ ಪೂಜಾರಿ ತೋಡಾರು ಮತ್ತಿತರರು ಪಾಲ್ಗೊಂಡರು.ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ದೀಪ ಬೆಳಗಿಸಿ ಉಗ್ರಾಹಣ ಉದ್ಘಾಟಿಸಿದರು.