ಸಾರಾಂಶ
ಗದಗ: ದರ್ಗಾ ಎಂದರೆ ಕೇವಲ ಧಾರ್ಮಿಕ ಬಂಧನವಲ್ಲ, ಇದು ಶಾಂತಿ, ಪ್ರೀತಿ, ಸಹಿಷ್ಣುತೆ, ಸಾಮರಸ್ಯ ಹಾಗೂ ಮಾನವೀಯತೆ ಹರಡುವ ಪವಿತ್ರ ತಾಣ. ಇಲ್ಲಿ ಬರುವ ಪ್ರತಿಯೊಬ್ಬರೂ ತಮ್ಮ ಮನದ ಭಾರವನ್ನು ಇಳಿಸಿ ನೆಮ್ಮದಿ ಮತ್ತು ಆಶೀರ್ವಾದವನ್ನು ಪಡೆದು ಹಿಂತಿರುಗುತ್ತಾರೆ ಎಂದು ಕಲಬುರಗಿ ಸಜ್ಜಾದೇ ನಶಿನ್ ಖ್ವಾಜಾ ಬಂದೇ ನವಾಜ್ ಗೇಸು ದರಾಜ್ ದರ್ಗಾದ ಹಜರತ್ ಸೈಯದ್ ಮೊಹಮ್ಮದ್ ಅಲಿ ಅಲ್‌ಹುಸೇನಿ ಹೇಳಿದರು.
ನಗರದ ಕಾಗದಗಾರ ಓಣಿಯಲ್ಲಿ ಹಜರತ್ ಸೈಯದ್ ಶಾವಲಿ ದರ್ಗಾದ ನವೀಕರಿಸಲಾದ ಕಟ್ಟಡ ಹಾಗೂ ನೂತನ ನೆಮ್ಮದಿ ಭವನ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ದರ್ಗಾ ಕೇವಲ ಆರಾಧನೆಯ ಸ್ಥಳವಷ್ಟೇ ಅಲ್ಲ, ಅದು ಶಾಂತಿ, ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳ ಕೇಂದ್ರವಾಗಿದೆ. ನೆಮ್ಮದಿ ಕೇಂದ್ರ ಜನರಿಗೆ ಸೇವೆಯ ಮನೋಭಾವವನ್ನು ಹೆಚ್ಚಿಸುವ ವೇದಿಕೆ ಎಂದರು.
ಇಂದು ಉದ್ಘಾಟನೆಯಾಗುತ್ತಿರುವ ನೆಮ್ಮದಿ ಕೇಂದ್ರ ನಮ್ಮ ಸಮುದಾಯದ ಕಲ್ಯಾಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆ. ಆರೋಗ್ಯ ತಪಾಸಣೆ, ಮಾರ್ಗದರ್ಶನ, ಸೇವಾ ಕೇಂದ್ರ ಮತ್ತು ಸಾರ್ವಜನಿಕ ನೆರವಿನ ವಿವಿಧ ವಿಭಾಗಗಳ ಮೂಲಕ ಜನರ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆಯನ್ನು ಇಲ್ಲಿ ಒದಗಿಸಲಾಗಿರುವುದು ಸಂತಸ ತಂದಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ನಮ್ಮ ಗದಗ ಶತಮಾನಗಳಿಂದ ಸಾಮಾಜಿಕ ಸಹಭಾಗಿತ್ವ, ಸಾಮರಸ್ಯ ಮತ್ತು ಭಕ್ತಿ-ಭಾವಗಳ ಸಂಕೇತವಾಗಿದ್ದು, ಈ ಹೊಸ ಕೇಂದ್ರ ಅದರ ಸೇವಾ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವುದು ಸಂಶಯವೇ ಇಲ್ಲ ಎಂದು ತಿಳಿಸಿದರು.
ಈ ಪವಿತ್ರ ದರ್ಗಾ ಹಾಗೂ ನೂತನ ನೆಮ್ಮದಿ ಕೇಂದ್ರದ ಉದ್ಘಾಟನಾ ಸಂದರ್ಭದಲ್ಲಿ ಭಾಗಿಯಾಗಿರುವುದು ನನಗೆ ಅತ್ಯಂತ ಗೌರವಗಳ ಸಂಗತಿ. ಸಮಾಜದ ಎಲ್ಲ ವರ್ಗದ ಜನರು ಇಂದು ಉದ್ಘಾಟನೆಯಾಗುತ್ತಿರುವ ನೆಮ್ಮದಿ ಕೇಂದ್ರ ದರ್ಗಾದ ಸೇವಾ ಪರಂಪರೆಯನ್ನು ಇನ್ನಷ್ಟು ವಿಸ್ತರಿಸುವುದು ಮಹತ್ವದ ಹೆಜ್ಜೆ. ಭಕ್ತರ ಮಾರ್ಗದರ್ಶನ, ಆರೋಗ್ಯ ತಪಾಸಣೆ, ಸಾರ್ವಜನಿಕ ನೆರವು, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರಿಗೆ ನೆರವಾದ ಉಪಕಾರವನ್ನು ನೀಡುವ ಯೋಜನೆ ಇದು. ಸಮುದಾಯದ ಕಲ್ಯಾಣಕ್ಕೆ ಇವು ಅತ್ಯಗತ್ಯವಾದ ಸೇವೆಗಳು ಎಂದರು.ವಿಪ ಸದಸ್ಯ ಸಲೀಂ ಅಹಮದ್ ಮಾತನಾಡಿ, ದರ್ಗಾದ ಸೇವಾದಾರರು, ಸಂಘಟಕರು, ಸ್ಥಳೀಯರು ನೀಡಿರುವ ಸಹಕಾರ ಕಂಡು ನನಗೆ ಹೆಮ್ಮೆ ಆಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಆಜಾದ್ ಕೋ-ಆಪರೇಟೀವ್ ಬ್ಯಾಂಕ್ ಚೇರಮನ್ ಸರಫರಾಜ್ ಎಸ್. ಉಮಚಗಿ, ಕಾಂಗ್ರೆಸ್ ಯುವ ಮುಖಂಡ ಮುನ್ನಾಸಾಬ ರೇಶ್ಮಿ ಮಾತನಾಡಿದರು.
ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಮಹಾರಾಷ್ಟ್ರದ ಸಜ್ಜಾದೆ ನಶೀನ ನಿಲಂಗಾ ಶರೀಫನ ಹಜರತ್ ಸಯ್ಯದ್ ಹೈದರಪಾಷಾ ಖಾದರಿ ಸಾನ್ನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ನಗರಸಭೆ ಸದಸ್ಯರಾದ ಆಸ್ಮಾ ಮುನ್ನಾಸಾಬ ರೇಶ್ಮಿ, ಜೈನುಲಾಬ್ದೀನ್ ಆರ್.ನಮಾಜಿ, ಬರಕತಅಲಿ ಮುಲ್ಲಾ, ಪರವೀನಬಾನು ಮುಲ್ಲಾ, ಕುತುಬಅಲಿಶಾ ಮದಾರಿ, ಖಲಂದರ ಗೌಸುಸಾಬ ರೆಹಮಾನವರ, ಪ್ರಭು ಬುರಬುರೆ, ಈಶ್ವರಸಾ ಮೇರವಾಡೆ, ರತ್ನಾಕರಭಟ್ ಜೋಶಿ, ಎಸ್.ಡಿ.ಮಕಾನದಾರ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಅನೀಲ ಸಿದ್ದಮ್ಮನಹಳ್ಳಿ, ಎ.ಎಚ್. ಹೊಸಳ್ಳಿ, ಅಬ್ದುಲ್ ರಜಾಕ್ ಡಂಕೇದ, ಮೊಹ್ಮದಯುಸುಫ್ ಇಟಗಿ, ಮೀರಾಸಾಬ ಕಲ್ಯಾಣಿ ಇದ್ದರು.ಎಂ.ಎಂ. ಕುಕನೂರ ಸ್ವಾಗತಿಸಿದರು. ಎಂ.ಎಂ. ಶಿರಹಟ್ಟಿ, ಅಲ್ಲಾಭಕ್ಷ ಕೊಟಗಿ ನಿರೂಪಿಸಿದರು. ಮಹ್ಮದಲಿ ರೆಹಮಾನಸಾಬ ಕಾಗದಗಾರ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))