ಧರ್ಮಸ್ಥಳದಲ್ಲಿ ಶುಕ್ರವಾರ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭ
ಬೆಳ್ತಂಗಡಿ: ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳುವ ಜೊತೆಗೆ ನಿದಿಷ್ಟ ಗುರಿ, ನಾಯಕತ್ವ ಗುಣ ರೂಢಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳದಲ್ಲಿ ಶುಕ್ರವಾರ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಾರ್ತಾಪತ್ರಿಕೆಗಳಲ್ಲಿ ಉಪಯುಕ್ತವಾದ ವಿಶೇಷ ಮಾಹಿತಿ, ಸಿಗುವುದರಿಂದ ವಾರ್ತಾಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳಲ್ಲಿ ಓದುವ ಅಭ್ಯಾಸ ಬೆಳೆಸುವುದಕ್ಕಾಗಿ ಪ್ರತಿವರ್ಷ ಶಾಂತಿವನಟ್ರಸ್ಟ್ ವತಿಯಿಂದ ಲಕ್ಷಾಂತರ ಪುಸ್ತಕಗಳನ್ನು ಪ್ರಕಟಿಸಿ, ಶಾಲೆಗಳಿಗೆ ವಿತರಿಸಿ ರಾಜ್ಯಮಟ್ಟದಲ್ಲಿ ಭಾಷಣ, ಪ್ರಬಂಧ ಸ್ಪರ್ಧೆ ಏರ್ಪಡಿಸಿ ಪುರಸ್ಕಾರ ನೀಡಲಾಗುತ್ತದೆ. ವಾರ್ತಾಪತ್ರಿಕೆಗಳೊಂದಿಗೆ ಇತರ ಮೌಲಿಕ ಕೃತಿಗಳನ್ನು ಓದಿ ಜ್ಞಾನ ಭಂಡಾರ ಬೆಳೆಸಿಕೊಳ್ಳಬೇಕು ಎಂದರು.ಉಡುಪಿಯ ಸಾಹಿತಿ ಸಂಧ್ಯಾ ಶೆಣೈ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳ ಸದುಪಯೋಗ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ಹೆತ್ತವರ ಕನಸು ನನಸು ಮಾಡಬೇಕು. ಎಲ್ಲರೊಂದಿಗೆ ನಗುಮೊಗದಿಂದ ಮುಕ್ತವಾಗಿ ಬೆರೆತು ಮಾತನಾಡಿದಾಗ ಪರಸ್ಪರ ಪ್ರೀತಿ-ವಿಶ್ವಾಸ ಹೆಚ್ಚಾಗುತ್ತದೆ ಎಂದರು. ಹೇಮಾವತಿ ವೀ. ಹೆಗ್ಗಡೆ ಮತ್ತು ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಜಗನ್ನಾಥ್ ಯು. ಭಾಗವಹಿಸಿದರು. ಯೋಗ ನಿರ್ದೇಶಕ ಡಾ. ಶಶಿಕಾಂತ ಜೈನ್ ಸ್ವಾಗತಿಸಿದರು. ಅಶೋಕ ಪೂಜಾರಿ ಬಾರ್ಕೂರು ವಂದಿಸಿದರು. ಪಡುಬಿದ್ರೆಯ ಶಿಕ್ಷಕ ರಾಘವೇಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.............
ಶ್ರೀ ಧ.ಮಂ.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಡೆದ ಜ್ಞಾನರಥ ಹಾಗೂ ಜ್ಞಾನಪಥ ಮೌಲ್ಯಾಧಾರಿತ ಪುಸ್ತಕಗಳ ರಾಜ್ಯ ಮಟ್ಟದ ಸ್ಪರ್ಧೆಗಳ ಪುರಸ್ಕಾರ ಕಾರ್ಯಕ್ರಮ ಶುಕ್ರವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಜರಗಿತು.ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.ಶಾಂತಿವನದ ಟ್ರಸ್ಟಿ ಹೇಮಾವತಿ ವೀ.ಹೆಗ್ಗಡೆ, ಕ್ಷೇಮವನದ ನಿರ್ದೇಶಕಿ ಶ್ರದ್ಧಾ ಅಮಿತ್, ಜೀವನ ಮೌಲ್ಯ ಹಾಸ್ಯ ಭಾಷಣಗಾರ್ತಿ ಸಂಧ್ಯಾ ಶೆಣೈ ಉಡುಪಿ, ಶಾಂತಿವನದ ಕಾರ್ಯದರ್ಶಿ ಯು.ಜಗನ್ನಾಥ, ನಿರ್ದೇಶಕ ಡಾ.ಐ.ಶಶಿಕಾಂತ್ ಜೈನ್ ಇದ್ದರು.ಬಹುಮಾನ ವಿಜೇತರು: ಪ್ರಾಥಮಿಕ ವಿಭಾಗ-ಭಾಷಣ ಸ್ಪರ್ಧೆ: ಮಾನ್ಯಶ್ರೀ-(ಪ್ರ), ಶ್ರೀ ಮಂ.ಸ್ವಾ.ಹಿ.ಅ.ಪ್ರಾ. ಶಾಲೆ, ಧರ್ಮಸ್ಥಳ, ವಿಧಾತ್ರಿ-(ದ್ವಿ),ಎಚ್. ಆರ್. ಸರಸ್ವತಿ ವಿದ್ಯಾಲಯ, ಸಿದ್ದಾಪುರ, ಆರಾಧ್ಯಾ ವಿ.ಜೋಶಿ- (ತೃ) ಎಸ್‌ಡಿಎಂ ಆಂ.ಮಾ. ಶಾಲೆ, ಧರ್ಮಸ್ಥಳ
ಪ್ರಬಂಧ ಸ್ಪರ್ಧೆ: ತ್ರಿಶಾ ಗೌಡ-(ಪ್ರ), ಸ. ಮಾ.ಹಿ.ಪ್ರಾ.ಶಾಲೆ,ಗುಣವಂತೆ, ಪ್ರಾಪ್ತಿ ಡಿ.ಎಸ್.,(ದ್ವಿ), ಪಿ.ಎಂ.ಶ್ರೀ.ಸರ್ಕಾರಿ ಪ್ರೌಢಶಾಲೆ ವಿಟ್ಲ, ಸಾನ್ವಿ ಕೆ.ಡಿ.-(ತೃ), ರೋಟರಿ ಪ್ರೌಢ ಶಾಲೆ ಸುಳ್ಯ, ಕಂಠಪಾಠ: ಸ್ವಸ್ತಿ ಪಿ.-(ಪ್ರ), ರೋಟರಿ ಹಿ.ಪ್ರಾ.ಶಾಲೆ ಸುಳ್ಯ, ಕಾವ್ಯ ನಾಯ್ಕ-(ದ್ವಿ ) ಸ.ಮಾ.ಹಿ.ಪ್ರಾ.ಶಾಲೆ ಗುಣವಂತೆ, ಧನುಷ್ ಕೆ.-(ತೃ)ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರುಚಿತ್ರ ಕಲಾ ಸ್ಪರ್ಧೆ: ರವಿರಾಜ ಕಿರಣ್ ನಾಯ್ಕ (ಪ್ರ), ದಿನಕರ ದೇಸಾಯಿ ಮೆಮೋರಿಯಲ್ ಶಾಲೆ, ಅಂಕೋಲಾ ಸ್ತುತಿ ಆಚಾರ್ಯ- (ದ್ವಿ), ಕೆ.ಪಿ.ಎಸ್.ಮುನಿಯಾಲು, ಕುಶಿತ್ ಮಲ್ಲಾರ್-(ತೃ)ಕುಮಾರ ಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ
ಪ್ರೌಢಶಾಲಾ ವಿಭಾಗ: ಭಾಷಣ ಸ್ಪರ್ಧೆ ಸ್ನೇಹಾ ಪ. ಸಮಾಯಿ (ಪ್ರ), ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಪುತ್ತಿಗೆ, ಸಮೃದ್ಧಿ- (ದ್ವಿ),ಸ ಪಪೂ ಕಾಲೇಜು ಮಣೂರು, ಆಶ್ರೀತ್(ತೃ), ಎಸ್ ವಿ ಇ ಎಂ ಎಚ್ ಎಸ್ ಸಿದ್ದಾಪುರ, ಪ್ರಬಂಧ ಸ್ಪರ್ಧೆ: ಶರಣ್ಯ(ಪ್ರ), ಕೆಪಿಎಸ್ ಬಿದ್ಕಲ್ ಕಟ್ಟೆ, ಪ್ರಜ್ಞಾ ( ದ್ವಿ), ಸ.ಉ.ಪ್ರಾ.ಶಾಲೆ ಅಂಡಿಂಜೆ, ಸಮೃದ್ಧಿ ವಿ. ಪೂಜಾರಿ(ತೃ) ಶ್ರೀ ವೆಂಕಟರಮಣ ಆಂ.ಮಾ.ಶಾಲೆ ಕುಂದಾಪುರ, ಕಂಠಪಾಠ ಸ್ಪರ್ಧೆ: ಅಭಿನವ್ (ಪ್ರ) ವಿಶ್ವ ಮಂಗಳ ಪ್ರೌಢಶಾಲೆ ಕೊಣಾಜೆ, ಆಶ್ರಿತ್ ಕೃಷ್ಣ (ದ್ವಿ), ಸುಧಾನ ವಸತಿ ಶಾಲೆ, ಪುತ್ತೂರು, ಮಯೂರ ಪಿ.ಹೆಗಡೆ (ತೃ), ನ್ಯೂ ಇಂಗ್ಲಿಷ್ ಸ್ಕೂಲ್ ಹೊನ್ನಾವರ.ಚಿತ್ರಕಲಾ ಸ್ಪರ್ಧೆ: ನೀಲಿಷ್ಕಾ ಕೆ.(ಪ್ರ), ವಿವೇಕಾನಂದ ಆಂ.ಮಾ. ಶಾಲೆ, ತೆಂಕಿಲ, ಹರ್ಷದ್ ಎಂ. ಗೊಂಡ (ದ್ವಿ ), ಶ್ರೀವಲಿ ಪ್ರೌಢಶಾಲೆ ಚಿತ್ರಾಪುರ, ಆರಾಧ್ಯ( ತೃ) ಕೆಪಿಎಸ್ ಬ್ರಹ್ಮಾವರ.