-ಕಸಾಪ ವೈವಿಧ್ಯ ಕಾರ್ಯಕ್ರಮ

--

-ದಾಸ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

----

ಕನ್ನಡಪ್ರಭ ವಾರ್ತೆ ಕಲಬುರಗಿ


ದಾಸರು ಕೀರ್ತನೆಗಳ ಮೂಲಕ ಅನಿಷ್ಠ ಪದ್ಧತಿ, ಅಸಮಾನತೆ, ಶೋಷಣೆ-ಅಂಕುಡೊಂಕು ತಿದ್ದಿದ್ದಾರೆ.

ಲೋಕ ಕಲ್ಯಾಣಕ್ಕಾಗಿ ನಾಡಿನಾದ್ಯಂತ ಸಂಚರಿಸಿ, ದಾಸ ತತ್ವಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಸಂಸ್ಕೃತಿ ಬೆಳೆಸುವ ಕೆಲಸವಾಗಬೇಕಿದ್ದು, ಕಸಾಪ ಇಂತಹ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸು ಕಾರ್ಯ ಮಾಡುತ್ತಿದೆ ಎಂದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಜಿಲ್ಲಾ ಕಸಾಪ ಹಾಗೂ ಕಸಾಪ ದಕ್ಷಿಣ ವಲಯದ ಸಂಯುಕ್ತಾಶ್ರಯಲ್ಲಿ ಆ.೯ ರಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿರುವ ದಾಸ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಮುಖರಾದ ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ, ಬಾಬುರಾವ ಪಾಟೀಲ, ಸೋಮಶೇಖರಯ್ಯ ಹೊಸಮಠ, ಗಣೇಶ ಚಿನ್ನಾಕಾರ, ಪರಮಾನಂದ ಸರಸಂಬಿ, ಅಮೃತಪ್ಪ ಅಣೂರ, ರಾಜೇಂದ್ರ ಮಾಡಬೂಳ, ರಾಜಶೇಖರ ಚಿಂಚೋಳಿ, ಗಂಗಾಧರ ಬಂಗರಗಿ, ಮಹಾಲಿಂಗಯ್ಯ ಸ್ವಾಮಿ, ಚಂದ್ರಕಾಂತ ಸೂರನ್, ಸಂಗಪ್ಪ ಚೋರಗಸ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಸಮ್ಮೇಳನದ ವಿವರ: ಆ.೯ರಂದು ನಗರದ ಕನ್ನಡ ಭವನದಲ್ಲಿ ಸುರಪುರ ಆನಂದದಾಸರು ವೇದಿಕೆಯಡಿ ಹಿರಿಯ ದಾಸ ಸಾಹಿತಿ ಡಾ. ಸುರೇಶ ಜಾಧವ್‌ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆವ ಸಮ್ಮೇಳನ ಕರ್ನಾಟಕ ಜಾನಪದ ವಿ.ವಿ ವಿಶ್ರಾಂತ ಕುಲಪತಿ ಡಾ. ಡಿ.ಬಿ. ನಾಯಕ ಉದ್ಘಾಟಿಸಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷರೂ ಆದ ಹಿರಿಯ ಪತ್ರಕರ್ತ ಡಾ. ಶ್ರೀನಿವಾಸ ಸಿರನೂರಕರ್, ಹಿರಿಯ ಸಾಹಿತಿ ಡಾ. ಸ್ವಾಮಿರಾವ್‌ ಕುಲಕರ್ಣಿ, ಸ್ವಾಗತ ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಪ್ರಮುಖರಾದ ಮಲ್ಲಣ್ಣ ಮಡಿವಾಳ, ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ರಮೇಶ ಚಿಚಕೋಟೆ ಇತರರು ಉಪಸ್ಥಿತರಿರುವರು ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಕಸಾಪ ದಕ್ಷಿಣ ವಲಯ ಅಧ್ಯಕ್ಷ ರವಿಕುಮಾರ ಶಹಾಪೂರಕರ ತಿಳಿಸಿದರು.

ಪುರಸ್ಕಾರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಶೇಷಮೂರ್ತಿ ಅವಧಾನಿ, ಕೃಷ್ಣಾಜೀ ಕುಲಕರ್ಣಿ, ಮುದಗಲ್ ವೆಂಕಟೇಶ, ಶಾಮರಾವ ಚಿಂಚೋಳಿ, ಗೋಪಾಲರಾವ್‌ ಟೆಂಗಳಿ, ಡಾ. ರಮೇಶ ಕುಲಕರ್ಣಿ, ಬಾಬುರಾವ ಕೋಬಾಳ, ಸುರೇಶ ಕೊಟಗಿ, ಬಾಬುರಾವ್‌ ಕುಲಕರ್ಣಿ ಅವರನ್ನು ದಾಸಾಮೃತ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಗುವುದು.

ಮಧ್ಯಾಹ್ನ: ೧೨.೪೫ಕ್ಕೆ ಹಿರಿಯ ಸಾಹಿತಿ ಡಾ. ಕೆ.ಎಸ್. ಬಂಧು ಅವರ ಅಧ್ಯಕ್ಷತೆಯಲ್ಲಿ ನಡೆಯುವ ದಾಸ ದರ್ಶನ ವಿಶೇಷ ಚಿಂತನಾಗೋಷ್ಠಿಯಲ್ಲಿ ದಾಸ ಸಾಹಿತ್ಯದಲ್ಲಿ ಸಾಮಾಜಿಕ-ಸಾಮರಸ್ಯದ ನೆಲೆಗಳು ಕುರಿತು ಡಾ. ಅಂಬುಜಾ ಮಳಖೇಡಕರ್, ದಾಸ ಸಾಹಿತ್ಯ: ಧೋರಣೆ-ಪ್ರೇರಣೆ ಕುರಿತು ಡಾ. ವಿಜಯಕುಮಾರ ಗೋತಗಿ, ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಡಾ. ಶಾಮಲಾ ಸ್ವಾಮಿ ಮಾತನಾಡಲಿದ್ದಾರೆ.

ಅಣ್ಣಾರಾವ ಹಾಬಾಳಕರ್, ಓಂಪ್ರಕಾಶ ವಸ್ತ್ರದ್‌, ದತ್ತು ಪಾಟೀಲ ಮರತೂರ, ಸುರೇಶ ಡಿ ಬಡಿಗೇರ, ಹಣಮಂತ ಕಣ್ಣಿ ಕಾಳಗಿ ಉಪಸ್ಥಿತರಿರುವರು.

ಇಳಿಹೊತ್ತು ೪.೧೫ ಕ್ಕೆ ನಡೆವ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ಗವಿಸಿದ್ಧಪ್ಪ ಪಾಟೀಲ ಸಮಾರೋಪ ನುಡಿಗಳನ್ನಾಡಲಿದ್ದು, ಪತ್ರಕರ್ತ ರಮೇಶ ಭಟ್, ಆನಂದತೀರ್ಥ ಜೋಶಿ, ಅವಿನಾಶ ಕುಲಕರ್ಣಿ, ವಿಜಯಕುಮಾರ ಕಟ್ಟಿಮನಿ ಉಪಸ್ಥಿತರಿರುವರು.

ಭಜನಾ ಸಂಭ್ರಮ: ಸೈಖ್ಯ ಪ್ರವೀಣ ಕುಲಕರ್ಣಿ, ಶೃತಿ ಸಗರ ಹಾಗೂ ಸಂಗಡಿಗರು. ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯ ಮಕ್ಕಳು, ಹರಿಹರ ಭಜನಾ ಮಂಡಳಿ, ಪಾಂಡುರಂಗ ಭಜನಾ ಮಂಡಳಿ ಗಳಿಂದ ವಿಶೇಷ ದಾಸರ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಸಮ್ಮೇಳನ ಅರ್ಥಪೂರ್ಣವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಹೊಸ ಆಲೋಚನೆಯೊಂದಿಗೆ ಪರಿಷತ್ತು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲಾಗುತ್ತಿದೆ.

ಫೋಟೋಕಲಬುರಗಿಯಲ್ಲಿ ಜಿಲ್ಲಾ ಕಸಾಪ ಹಾಗೂ ಕಸಾಪ ದಕ್ಷಿಣ ವಲಯದ ಸಂಯುಕ್ತಾಶ್ರಯಲ್ಲಿ ಆ.೯ರಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿರುವ ದಾಸ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ.