ವರ್ಗಾವಣೆಗೊಂಡ ಸ್ಥಳಕ್ಕೆ ಕಾರ್ಯ ನಿರೀಕ್ಷಕರು ತೆರಳಲು ದಸಂಸ ಒತ್ತಾಯ

| Published : Apr 05 2024, 01:05 AM IST

ವರ್ಗಾವಣೆಗೊಂಡ ಸ್ಥಳಕ್ಕೆ ಕಾರ್ಯ ನಿರೀಕ್ಷಕರು ತೆರಳಲು ದಸಂಸ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕೆಆರ್.ಐ.ಡಿ.ಎಲ್. ಉಪ ವಿಭಾಗದ ಕಾರ್ಯ ನಿರೀಕ್ಷಕರು ವರ್ಗಾವಣೆಗೊಂಡ ಸ್ಥಳಕ್ಕೆ ಕೂಡಲೇ ತೆರಳಲು ಸೂಚಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೆ.ಆರ್.ಐ.ಡಿ.ಎಲ್. ಉಪ ವಿಭಾಗದ ಕಾರ್ಯ ನಿರೀಕ್ಷಕರು ವರ್ಗಾವಣೆಗೊಂಡ ಸ್ಥಳಕ್ಕೆ ಕೂಡಲೇ ತೆರಳಲು ಸೂಚಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಉಪ ವಿಭಾಗದಲ್ಲಿ ಕಳೆದ 15 ವರ್ಷಗಳಿಂದ ಸಿ.ಇ.ನಟರಾಜ್ ಕಾರ್ಯನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಚುನಾವಣಾ ಪೂರ್ವ ಸಂಬಂಧ ಚಿಕ್ಕ ಮಗಳೂರಿನಿಂದ ಬೆಳಗಾವಿ ಉಪ ವಿಭಾಗಕ್ಕೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದರು.

ಕೆ.ಆರ್.ಐ.ಡಿ.ಎಲ್.ನ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರ ಇವರು 2024ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಚಟುವಟಿಕೆ ನಡೆಸುವ ಉದ್ದೇಶದಿಂದ ನಟರಾಜ್ ಅವರಿಂದ ತಾಯಿ ಯವರಿಗೆ ಅನಾರೋಗ್ಯ ಸಂಬಂಧ ಸುಳ್ಳು ಅರ್ಜಿ ಕೊಡಿಸಿ ಇಲ್ಲಿಯೇ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಈ ನಡುವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ ಎಂದು ಸುಳ್ಳು ಹೇಳಿ ನಟರಾಜ್ ಅವರನ್ನು ವರ್ಗಾವಣೆಯಾದ ಸ್ಥಳಕ್ಕೆ ಕಳುಹಿಸದೇ ಇಲ್ಲಿಯೇ ಮುಂದುವರೆಸುತ್ತಿದೆ. ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಂಡು ಅವರಿಂದ ಸಂಪೂರ್ಣ ಕೆಲಸ ಮಾಡಿಸಿಕೊಂಡು ಚುನಾವಣಾ ನೀತಿ ಸಂಹಿತೆ ಮತ್ತು ಸರ್ಕಾರ ವರ್ಗಾವಣೆ ಆದೇಶ ಉಲ್ಲಂಘನೆ ಮಾಡಲಾಗಿದೆ ಎಂದು ದೂರಿದರು.

ಹೀಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ನೀತಿ ಸಂಹಿತೆ ಮಾರ್ಗದರ್ಶನ ನೀಡಬೇಕು. ಕೆ.ಆರ್.ಐ.ಡಿ. ಎಲ್. ಕಾರ್ಯ ನಿರೀಕ್ಷಕರನ್ನು ಬಿಡುಗಡೆಗೊಳಿಸಿ ವರ್ಗಾವಣೆಯಾದ ಸ್ಥಳಕ್ಕೆ ಕೆಲಸ ನಿರ್ವಹಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ಅಧ್ಯಕ್ಷ ರಘು, ದಸಂಸ ಜಿಲ್ಲಾ ಮುಖಂಡ ಲಕ್ಷ್ಮಣ್, ನಗರಾಧ್ಯಕ್ಷ ಸೋಮಶೇಖರ್ ಹಾಜರಿದ್ದರು. 4 ಕೆಸಿಕೆಎಂ 1ಚಿಕ್ಕಮಗಳೂರು ಕೆ.ಆರ್.ಐ.ಡಿ.ಎಲ್. ಉಪ ವಿಭಾಗದ ಕಾರ್ಯನಿರೀಕ್ಷಕರು ವರ್ಗಾವಣೆಗೊಂಡ ಸ್ಥಳಕ್ಕೆ ಕೂಡಲೇ ತೆರಳಲು ಸೂಚಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರುಗಳು ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.