ಸಿಜೆಐ ಮೇಲಿನ ಶೂ ಎಸೆತ ಖಂಡಿಸಿ ದಸಂಸ ಪ್ರತಿಭಟನೆ

| Published : Oct 16 2025, 02:00 AM IST

ಸಾರಾಂಶ

ದೇಶದ ಸರ್ವೋಚ್ಚ ನ್ಯಾಯಲಯದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಸನಾತನವಾದಿ ವಕೀಲ ಕಿಶೋರ್ ರಾಕೇಶ್ ಶೂ ಎಸೆದಿರುವುದು ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನ.

ಕನ್ನಡಪ್ರಭ ವಾರ್ತೆ ತಿಪಟೂರು

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿಯವರ ಮೇಲೆ ವಕೀಲ ಕಿಶೋರ್ ರಾಕೇಶ್ ಶೂ ಎಸೆದಿರುವ ಘಟನೆ ಖಂಡಿಸಿ ದಲಿತಪರ ಸಂಘಟನೆಗಳಿಂದ ನಗರದ ನಗರಸಭಾ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಾಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಶಾಂತಪ್ಪ ಮಾತನಾಡಿ, ದೇಶದ ಸರ್ವೋಚ್ಚ ನ್ಯಾಯಲಯದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಸನಾತನವಾದಿ ವಕೀಲ ಕಿಶೋರ್ ರಾಕೇಶ್ ಶೂ ಎಸೆದಿರುವುದು ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನ. ದೇಶದ ಕಾನೂನಿನ ಶಿಖರದಂತಿರುವ ಸುಪ್ರೀಂ ಕೋರ್ಟ್‌ನಲ್ಲಿಯೇ ಇಂತಹ ಘಟನೆ ನಡೆದಿರುವುದು ದೇಶದ್ರೋಹದ ಕೃತ್ಯ. ಕೇಂದ್ರ ಸರ್ಕಾರ ಕೂಡಲೇ ಆರೋಪಿಯನ್ನು ಗಡಿಪಾರು ಮಾಡದೇ ಮೃದುಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡ ವಕೀಲನನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.ಛಲವಾದಿ ಮಹಾಸಭಾ ಅಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ, ದೇಶದ ಇತಿಹಾಸದಲ್ಲಿ ಸರ್ವೋಚ್ಚ ನ್ಯಾಯಧೀಶರ ಮೇಲೆ ಹಲ್ಲೇ ನಡೆದಿರುವುದು ಇದೇ ಮೊದಲು. ಅದು ದಲಿತನೊಬ್ಬ ಸರ್ವೋಚ್ಚ ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತ್ತಿದ್ದಾರೆ ಎನ್ನೋ ಅಸಹನೆಯಿಂದ ಈ ಕೃತ್ಯ ನಡೆಸಲಾಗಿದೆ. ಈ ವಿಷಯನ್ನು ಗಂಭೀರವಾಗಿ ಪರಿಗಣಿಸಿ ವಕೀಲನನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.ಮಾದಿಗ ದಂಡೋರ ತಾ. ಅಧ್ಯಕ್ಷ ಕುಪ್ಪಾಳು ರಂಗಸ್ವಾಮಿ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದಲ್ಲಿಯೇ ಇಂತಹ ಕೃತ್ಯಗಳು ನಡೆದರೆ ಸಾಮಾನ್ಯ ಪ್ರಜೆ ಯಾರ ಬಳಿ ನ್ಯಾಯ ಕೇಳಬೇಕು. ನ್ಯಾಯಮೂರ್ತಿಗಳ ಮೇಲಿ ನಡೆದಿರುವ ಈ ಘಟನೆ ದೇಶದ್ರೋಹದ ಕೆಲಸ ಎಂದು ಪ್ರಕರಣ ದಾಖಲು ಮಾಡಿ ಗಡಿಪಾರು ಮಾಡದೆ ಕೇಂದ್ರ ಸರ್ಕಾರ ಕೈ ಕಟ್ಟಿ ಕುಳಿತಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಸುರಕ್ಷಿತವಾಗಬೇಕಾದರೆ ಸಂವಿಧಾನ ವಿರೋಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ನಾಗತೀಹಳ್ಳಿ ಕೃಷ್ಣಮೂರ್ತಿ, ಸಂಘಟನಾ ಸಂಚಾಲಕ ಮತ್ತಿಹಳ್ಳಿ ಹರೀಶ್‌ಗೌಡ, ಮುಖಂಡರಾದ ಪೆದ್ದಿಹಳ್ಳಿ ನರಸಿಂಹಯ್ಯ, ಯಗಚೀಕಟ್ಟೆ ರಾಘವೇಂದ್ರ, ಶಿವಕುಮಾರ್, ಬಸವರಾಜು, ಲಿಂಗದೇವರು, ಮದಕರಿ ನಾಯಕ ಸಂಘದ ಅಧ್ಯಕ್ಷ ಮಾದೀಹಳ್ಳಿ ಜಯಸಿಂಹ, ಕರಡಾಳು ವೆಂಕಟೇಶ್‌ಮೂರ್ತಿ ಮತ್ತಿತರರಿದ್ದರು.ಫೋಟೋ 15-ಟಿಪಿಟಿ2ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ತಿಪಟೂರು ನಗರಸಭೆ ಮುಂಭಾಗ ದಲಿತ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.