ಸಾರಾಂಶ
ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು:ಬಾನಳ್ಳಿ ಬಗ್ಗಸಗೋಡು ಗ್ರಾಮದ ಪ್ರೀತಂ ಸಾವಿನ ತನಿಖೆಯನ್ನು ನ್ಯಾಯಾಂಗಕ್ಕೆ ಒಳಪಡಿಸಿ ಕುಟುಂಬಸ್ಥರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ದಸಂಸ ಮುಖಂಡರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಈ ವೇಳೆ ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಮಾತನಾಡಿ ಮೂಡಿಗೆರೆ ತಾಲೂಕಿನ ಬಾನಳ್ಳಿ ಬಗ್ಗಸಗೋಡು ಗ್ರಾಮದ ಪ.ಜಾತಿ ಜನಾಂಗದ ಶಿವಣ್ಣ ಎಂಬುವವರ ಪುತ್ರ ಪ್ರೀತಂ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆದರೆ ಕಳೆದ ೧೫ ದಿನಗಳಿಂದ ಶಾಲೆಗೆ ಗೈರಾಗಿದ್ದು ಮನಗಂಡ ಪಾಲಕರು ತೀವ್ರ ಗಾಬರಿಗೊಂಡಿದ್ದಾರೆ ಎಂದರು.ಪ್ರೀತಂ ಎಂಬ ಬಾಲಕನನ್ನು ಭಾರತಿ ಬೈಲ್ ಗ್ರಾಮದ ವ್ಯಕ್ತಿಯೊರ್ವರು, ಪಾಲಕರು ಇಲ್ಲದ ಸಮಯದಲ್ಲಿ ಬಲವಂತವಾಗಿ ಟಿಂಬರ್ ಕೆಲಸಕ್ಕೆ ಕರೆದೊಯ್ದಿದ್ದಾರೆ. ಕೆಲಗಂಟೆ ನಂತರ ಮನೆಗೆ ಹಿಂತಿರುಗಿದಾಗ ಶಿವಣ್ಣ, ಕೆಲಸದಾಳಿನ ಮೂಲಕ ಪ್ರೀತಂ ತಲೆಸುತ್ತಿ ಬಿದ್ದಿರುವುದಾಗಿ ತಿಳಿಸಿದ್ದು ಕೂಡಲೇ ತೆರಳಿದಾಗ ಬಿದ್ದಿರುವ ಜಾಗ ಬದಲಿಸಿ, ಬೇರೆ ಸಮತಟ್ಟಾದ ಜಾಗದಲ್ಲಿ ಪ್ರೀತಂನನ್ನು ಇರಿಸಿದ್ದಾರೆ ಎಂದು ಹೇಳಿದರು.ಗಾಬರಿಗೊಂಡ ಪಾಲಕರು ಶೀಘ್ರವೇ ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು, ವೈದ್ಯರು ಪರೀಕ್ಷಿಸಿದಾಗ ಮೃತ ರಾಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಈ ವಿಚಾರ ತಿಳಿದ ಭಾರತಿ ಬೈಲ್ ಗ್ರಾಮದ ವ್ಯಕ್ತಿ ಶಿವಣ್ಣ ಎಂಬುವವರನ್ನು ಬಲವಂತ ದಿಂದ ಬಣಕಲ್ ಪೊಲೀಸ್ ಠಾಣೆಗೆ ಕರೆದುಕೊಂಡು ಅವರೇ ಹೇಳಿಕೆಯಂತೆ ಪ್ರಕರಣ ದಾಖಲಿಸಿದ್ದಾರೆ ಎಂದರು.ಪ್ರೀತಂ ಸಾವು ಹೆಚ್ಚು ಭಾರ ಹೊರೆಸಿದ ಕಾರಣ ಕುಸಿದು ಬಿದ್ದಿರುವ ಸಾಧ್ಯತೆಯಿದೆ. ಬಾಲ ಅಪರಾಧ ಕಾಯ್ದೆಯ ನಿಯಮದಂತೆ ಮಕ್ಕಳನ್ನು ಯಾವುದೇ ಕೆಲಸಕ್ಕೆ ಕರೆದುಕೊಂಡು ಹೋಗುವಂತಿಲ್ಲ. ಇದು ಪೊಲೀಸ್ ಇಲಾಖೆಗೆ ತಿಳಿದಿದ್ದರೂ ಸಹ ಪ್ರೀತಂ ಬಾಲಕ ಸಾವನ್ನು ಮುಚ್ಚಿ ಹಾಕಲಾಗಿದೆ ಎಂದು ದೂರಿದರು.ಈ ಪ್ರಕರಣದ ಸಂಬಂಧ ಶಿವಣ್ಣ ಎಂಬುವವರು ಅನೇಕ ತಿಂಗಳು ಕಾಲ ಪೊಲೀಸ್ ಇಲಾಖೆಗೆ ತೆರಳಿದರೂ ನ್ಯಾಯ ದೊರ ಕಿಲ್ಲ. ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ನೇರ ಗಮನಕ್ಕೆ ತಂದರೂ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದರು.ಕೂಡಲೇ ಪ್ರೀತಂ ಸಾವಿನ ತನಿಖೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಕುಟುಂಬಸ್ಥರ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜಯ್ಯ, ಮುಖಂಡರಾದ ಸಂತೋಷ್ ಲಕ್ಯಾ, ಮಂಜುನಾಥ್ ನಂಬಿಯಾರ್, ವಿರೂಪಾಕ್ಷ, ರಾಕೇಶ್, ಪುಟ್ಟರಾಜು, ಪೂರ್ಣೇಶ್, ಮೃತನ ಕುಟುಂಬಸ್ಥರಾದ ಶಿವಣ್ಣ, ಪ್ರೀತಿ ಹಾಜರಿದ್ದರು
;Resize=(128,128))
;Resize=(128,128))
;Resize=(128,128))