ಸಾರಾಂಶ
ಗದಗ: ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಸೆ.3 ರಿಂದ 12ರ ವರೆಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವನ್ನು ಶ್ರದ್ಧಾ-ಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿಲು ಸರ್ವ ಭಕ್ತಾಧಿಗಳು ಮುಂದಾಗಬೇಕೆಂದು ಸಿದ್ಧರಬೆಟ್ಟ,ಅಬ್ಬಿಗೇರಿಯ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ನಗರದ ಜ. ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಶುಕ್ರವಾರ ಜ. ಪಂಚಾಚಾರ್ಯ ಸೇವಾ ಸಂಘ, ಜ. ಪಂಚಾಚಾರ್ಯ ಮಾಂಗಲ್ಯ ಮಂದಿರ, ಜ. ಪಂಚಾಚಾರ್ಯ ಜ್ಞಾನಾಮೃತ ಟ್ರಸ್ಟ್ ಹಾಗೂ ಜ.ಪಂಚಪೀಠಾಭಿಮಾನಿಗಳು ಏರ್ಪಡಿಸಿದ್ದ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದರು.ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮವು ಕೇವಲ ಗ್ರಾಮವಲ್ಲ ಧಾರ್ಮಿಕ, ಶೈಕ್ಷಣಿಕವಾಗಿ ಶ್ರದ್ಧಾಭಕ್ತಿ ಹೊಂದಿರುವ ಜಾಗೃತ ತಾಣ. ಅಬ್ಬಿಗೇರಿ ಹಿರೇಮಠದ ಸಂಸ್ಕೃತ ಪಾಠ ಶಾಲೆಯು ನೂರು ವರ್ಷ ಪೂರೈಸಿ ಶತಮಾನೋತ್ಸವ ಕಂಡ ಶಾಲೆ.ಈ ಹಿಂದೆ ರಂಭಾಪುರಿ ಜಗದ್ಗುರುಗಳು ಇದೇ ಸಂಸ್ಕೃತ ಪಾಠ ಶಾಲೆಯಲ್ಲಿ ಅಧ್ಯಯನ ಮಾಡಿರುವದು ಇತಿಹಾಸ, ಹೀಗಾಗಿ ರಂಭಾಪುರಿ ಪೀಠಕ್ಕೂ ಅಬ್ಬಿಗೇರಿಗೂ ಅವಿನಾಭಾವ ಸಂಬಂಧವಿದೆ ಎಂದರು.
ಅಬ್ಬಿಗೇರಿಯ ಹಿರೇಮಠದ ಲಿಂ.ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವನ್ನು ಅಬ್ಬಿಗೇರಿಯಲ್ಲಿ ಜರುಗಿಸಬೇಕೆಂದು ಅಂದುಕೊಂಡಿದ್ದರು, ಅವರ ಸಂಕಲ್ಪ ಇದೀಗ ಸಾಕಾರಗೊಳ್ಳುತ್ತಿದೆ ಜತೆಗೆ ಅಬ್ಬಿಗೇರಿ, ರೋಣ,ಗಜೇಂದ್ರಗಡ ಸೇರಿದಂತೆ ಗದಗ ಜಿಲ್ಲೆಯ ಸಮಸ್ತ ಭಕ್ತಾದಿಗಳು ಈ ದಸರಾ ಮಹೋತ್ಸವ ಅಬ್ಬಿಗೇರಿಯಲ್ಲಿ ಜರುಗಿಸಲು ಉತ್ಸುಕರಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ನಾವೆಲ್ಲರೂ ಒಗ್ಗೂಡಿಕೊಂಡು ಯಶಸ್ವಿಗೊಳಿಸೋಣ ಎಂದರು.ಈ ವೇಳೆ ನರೇಗಲ್ಲ,ಸವದತ್ತಿ ಹಿರೇಮಠ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು,ಅಡ್ನೂರಿನ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ಬನ್ನಿಕೊಪ್ಪ-ಮೈಸೂರಿನ ಜಪದಕಟ್ಟಿಮಠದ ಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ತುಪ್ಪದ ಕುರಹಟ್ಟಿಯ ಭೂಸನೂರ ಸಂಸ್ಥಾನಮಠದ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಹಿರೇವಡ್ಡಟ್ಟಿಯ ಹಿರೇಮಠದ ವೀರೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಸೊರಟೂರಿನ ಶ್ರೀಫಕ್ಕೀರೇಶ್ವರ ಸ್ವಾಮಿಗಳು ಮಾತನಾಡಿದರು.
ಸಭೆಯಲ್ಲಿ ದಸರಾ ಮಹೋತ್ಸವ ಕುರಿತು ಮಾಹಿತಿಯುಳ್ಳ ಕರಪತ್ರ ಬಿಡುಗಡೆ ಮಾಡಲಾಯಿತು. ಅ.ಭಾ.ವೀ. ಮಹಾಸಭಾದ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರನ್ನು ಮಠಾಧೀಶರು ಸನ್ಮಾನಿಸಿ ಗೌರವಿಸಿದರು.ಜ.ಪಂಚಾಚಾರ್ಯ ಮಾಂಗಲ್ಯ ಮಂದಿರದ ಕಾರ್ಯಾಧ್ಯಕ್ಷ ಅಜ್ಜಣ್ಣ ಮಲ್ಲಾಡದ, ಕಾರ್ಯದರ್ಶಿ ಚಂದ್ರು ಬಾಳಿಹಳ್ಳಿಮಠ, ಕೋಶಾಧ್ಯಕ್ಷ ರಾಜಣ್ಣ ಮಲ್ಲಾಡದ, ಮಲ್ಲಿಕಾರ್ಜುನ ಶಿಗ್ಲಿ, ಶಿವಾನಂದಯ್ಯ ಹಿರೇಮಠ, ನಿವೃತ್ತ ಶಿಕ್ಷಕ ಎಂ.ಎಸ್. ಚಿನ್ನೂರ, ಮಂಜುನಾಥ ಬೇಲೇರಿ, ವೀರೇಶ ಕೂಗು ಸೇರಿದಂತೆ ಇತರರು ಇದ್ದರು. ಚಂದ್ರು ಬಾಳಿಹಳ್ಳಿಮಠ ನಿರೂಪಿಸಿ ವಂದಿಸಿದರು.
;Resize=(128,128))
;Resize=(128,128))