ಸಾರಾಂಶ
ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕಾವೇರಿ 5ನೇ ಹಂತದ ಯೋಜನೆ ಯಾವಾಗ ಬರುತ್ತದೆ ಎಂದು ಸ್ಪಷ್ಟವಿಲ್ಲ. ಹಾಗಾಗಿ ಪ್ರತಿ ವಾರ್ಡ್‌ಗೆ 5 ಬೋರ್‌ವೆಲ್ ಕೊರೆಸಲು ಹಣ ಬಿಡುಗಡೆ ಮಾಡಬೇಕು ಎಂದು ಶಾಸಕ ಎಸ್.ಮುನಿರಾಜು ಸದನದಲ್ಲಿ ಪ್ರಸ್ತಾಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕಾವೇರಿ 5ನೇ ಹಂತದ ಯೋಜನೆ ಯಾವಾಗ ಬರುತ್ತದೆ ಎಂದು ಸ್ಪಷ್ಟವಿಲ್ಲ. ಹಾಗಾಗಿ ಪ್ರತಿ ವಾರ್ಡ್‌ಗೆ 5 ಬೋರ್‌ವೆಲ್ ಕೊರೆಸಲು ಹಣ ಬಿಡುಗಡೆ ಮಾಡಬೇಕು ಎಂದು ಶಾಸಕ ಎಸ್.ಮುನಿರಾಜು ಸದನದಲ್ಲಿ ಪ್ರಸ್ತಾಪಿಸಿದ್ದಾರೆ.ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಕನ್ನಡಪ್ರಭ ಫೆ.20ರಂದು ಪ್ರಕಟಿಸಿದ್ದ ‘ದಾಸರಹಳ್ಳಿಯಲ್ಲಿ ನೀರಿಗೆ ತೀವ್ರ ಹಾಹಾಕಾರ’ ವರದಿಯನ್ನು ಸದನದಲ್ಲಿ ಪ್ರದರ್ಶಿಸಿದ ಶಾಸಕರು, ಕ್ಷೇತ್ರದ ನೀರಿನ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಬಿಬಿಎಂಪಿ ವ್ಯಾಪ್ತಿಗೆ 110 ಹಳ್ಳಿ ಸೇರ್ಪಡೆಯಲ್ಲಿ ದಾಸರಹಳ್ಳಿ ಕ್ಷೇತ್ರದಿಂದ 5 ಹಳ್ಳಿಗಳು ಸೇರಿವೆ. ಅದರಲ್ಲಿ ಎರಡು ಬಾರಿ ₹2 ಕೋಟಿಯನ್ನು ನೀರಿಗಾಗಿ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಬೆಂಗಳೂರು ನಗರ ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಆದರೆ ದಾಸರಹಳ್ಳಿ ಕ್ಷೇತ್ರದಲ್ಲಿ 11 ವಾರ್ಡ್‌ಗಳಿವೆ. ಮೊದಲು ನಾಲ್ಕು ದಿನಗಳಿಗೊಮ್ಮೆ ನೀರು ಬಿಡುತ್ತಿದ್ದರು. ಆದರೆ ಈಗ 8ರಿಂದ 10 ದಿನವಾದರೂ ನೀರು ಬರುತ್ತಿಲ್ಲ. ಇಲ್ಲಿ ನೀರಿನ ಹಾಹಾಕಾರ ಜಾಸ್ತಿಯಾಗಿದೆ. ಬಿಡಬ್ಲ್ಯೂಎಸ್‌ಎಸ್‌ಬಿ ಚೇರ್ಮನ್ ಹಾಗೂ ಅಧಿಕಾರಿಗಳು ಕಾವೇರಿ 5ನೇ ಹಂತ ಬರುವವರೆಗೂ ನೀರಿನ ಸಮಸ್ಯೆ ಇರುತ್ತದೆ ಎನ್ನುತ್ತಾರೆ. ಯಾವಾಗ 5ನೇ ಅಂತ ಬರುತ್ತೋ ಗೊತ್ತಿಲ್ಲ. ವಾರ್ಡ್‌ಗೆ 5 ಬೋರ್ವೆಲ್ ಮಂಜೂರು ಮಾಡಿದರೆ ನಾವು ಈ ಬೇಸಿಗೆಯಲ್ಲಿ ನೀರಿನ ಬವಣೆ ಸ್ವಲ್ಪ ಮಟ್ಟಿಗೆ ಬಗೆಹರಿಸಬಹುದು ಎಂದು ಎಂದು ಬೆಂಗಳೂರು ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.ಕ್ಷೇತ್ರದಲ್ಲಿ ನೀರಿನ ಟ್ಯಾಂಕರ್ ಹಾವಳಿ:ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದೆ. ಬೆಳಗ್ಗೆ ಬುಕ್ ಮಾಡಿದರೆ ರಾತ್ರಿ ಹತ್ತು ಗಂಟೆಗೆ ತಂದು ಬಿಡುತ್ತಾರೆ, ಅರ್ಧ ಟ್ಯಾಂಕ್ ನೀರಿಗೆ ₹800ರಿಂದ ₹1000 ವರೆಗೂ ಕೇಳುತ್ತಾರೆ. ದಯವಿಟ್ಟು ದರ ನಿಗದಿ ಮಾಡಿದರೆ ಒಳ್ಳೆಯದು ಎಂದು ಶಾಸಕ ಎಸ್.ಮುನಿರಾಜು ಮನವಿ ಮಾಡಿದರು.
55 ಬೋರ್ವೆಲ್ 5 ಹಳ್ಳಿಯಲ್ಲಿ ಕೆಲಸ ಮಾಡುತ್ತಿವೆ. ವರ್ಷಕ್ಕೆ ₹60 ಲಕ್ಷ ನಿರ್ವಹಣೆ ವೆಚ್ಚ ತಗಲುತ್ತದೆ. ಒಂದರಿಂದ ಒಂದುವರೆ ಲಕ್ಷದವರೆಗೆ ರಿಪೇರಿ ಖರ್ಚು ಬೇಕಾಗುತ್ತದೆ. ₹60 ಲಕ್ಷ ಸಾಕಾಗುತ್ತಿಲ್ಲ. ಇನ್ನು ಹೆಚ್ಚಿನ ಹಣ ನೀಡಬೇಕಾಗಿ ವಿನಂತಿ ಮಾಡಿದರು.