ಮಠದಲ್ಲಿ ಎಂದೂ ದಾಸೋಹ ನಿಲ್ಲಬಾರದು: ಶ್ರೀಗಳ ಆಶಯ

| Published : Jan 22 2024, 02:16 AM IST

ಸಾರಾಂಶ

ನೆಲಮಂಗಲ: ಬಡವರಿಗೆ ವೈದ್ಯಕೀಯ ಸೀಟು ಕೊಡಲು ಸಾಧ್ಯವಾಗುವುದಿಲ್ಲ ಎಂದು ಶ್ರೀಗಳು ವೈದ್ಯಕೀಯ ಕಾಲೇಜು ಮಾಡಿರಲಿಲ್ಲ ಎಂದು ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ಘಟಕದ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ ಅವರು ಶಿವಕುಮಾರ ಶ್ರೀಗಳಿಗೆ ಬಡವರ ಮೇಲೆ ಇದ್ದಂತಹ ಕಾಳಜಿಯ ಬಗ್ಗೆ ವಿವರಿಸಿದರು.

ನಗರದಲ್ಲಿ ಭಾರತ ವೀರಶೈವ ಲಿಂಗಾಯತ ಮಹಾಸಭೆ ಹಮ್ಮಿಕೊಂಡಿದ್ದ ಶಿವಕುಮಾರ ಶ್ರೀಗಳ ಸಂಸ್ಮರಣ ದಿನ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವೇ ಬೆರಗಾಗುವಂತೆ ತ್ರಿವಿಧ ದಾಸೋಹ ನಡೆಸಿದ ಶ್ರೀಗಳು, ತಾವಿಲ್ಲದಿದ್ದರೂ ಮಠದಲ್ಲಿ ದಾಸೋಹ ನಿಲ್ಲಬಾರದು ಎಂದು ಕಿರಿಯ ಶ್ರೀಗಳಿಗೆ ಹೇಳಿದ್ದರು ಎಂದು ಹೇಳಿದರು.

ಕೇಂದ್ರ ಘಟಕದ ನಿರ್ದೇಶಕ ಎನ್.ಎಸ್.ನಟರಾಜು ಅವರು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು. ಕಾರ್ಯಕ್ರಮಕ್ಕೂ ಮೊದಲು ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷೆ ರಾಜಮ್ಮ, ರುದ್ರೇಶ್ವರ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಬಿ.ದಯಾಶಂಕರ್, ಎನ್.ಆರ್.ಜಗದೀಶ್, ತಾಲೂಕು ಅಧ್ಯಕ್ಷ ಅಣ್ಣಪ್ಪ, ಮುಖಂಡ ಶಾಂತಕುಮಾರ್, ಉಪಾಧ್ಯಕ್ಷ ಎನ್.ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ರೇಣುಕಾ ಸ್ವಾಮಿ ತ್ಯಾಮಗೊಂಡ್ಲು ಚನ್ನಬಸಪ್ಪ, ರಾಜಶೇಖರಯ್ಯ, ಸಮಾಜದ ಮುಖಂಡರಿದ್ದರು.ಪೊಟೊ-21ಕೆಎನ್‌ಎಲ್‌ಎಮ್‌1:

ನೆಲಮಂಗಲದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಹಮ್ಮಿಕೊಂಡಿದ್ದ ಶಿವಕುಮಾರ ಶ್ರೀಗಳ ಸಂಸ್ಮರಣೋತ್ಸವದಲ್ಲಿ ದಿನದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.